12 ಮಹಿಳೆಯರ ವಾಮಾಚಾರಕ್ಕೆ ಜಾಗ ಬಲಿ, 400 ವರ್ಷವಾದ್ರೂ ಜನರಿಗಿಲ್ಲ ಭಯ!

First Published | Dec 12, 2023, 5:57 PM IST

ಹಲವಾರು ಹಾಂಟೆಡ್ ತಾಣಗಳ ಬಗ್ಗೆ ನೀವು ಕೇಳಿರಬಹುದು. ಇವತ್ತು ಸಹ ನಾವೊಂದು ಭಯಾನಕ ತಾಣದ ಬಗ್ಗೆ ಹೇಳುತ್ತೇವೆ, ಅಲ್ಲಿನ ಕಥೆ ಕೇಳಿದ್ರೆ, ಎದೆ ಝಲ್ ಎನ್ನದೇ ಇರದು. ಯಾವುದು ಈ ಜಾಗ? ಎಲ್ಲಿದೆ ಅದು ನೋಡೋಣ. 
 

ನೀವು ಇಲ್ಲಿವರೆಗೆ ಹಲವಾರು ಭಯಾನಕ ತಾಣದ ಬಗ್ಗೆ ಕೇಳಿರಬಹುದು. ಇದು ಒಂದು ಅಂತಹುದೇ ಹಾಂಟೆಡ್ ಜಾಗ. ಈ ಸ್ಥಳದ ವಿಲಕ್ಷಣ ಕಥೆಯ ಬಗ್ಗೆ ಕೇಳಿದರೆ ಎಲ್ಲವೂ ಮರೆತುಹೋಗಿ, ಎದೆಯಲ್ಲಿ ನಡುಕ ಹುಟ್ಟಿಸುತ್ತೆ. ಪ್ರಪಂಚದಾದ್ಯಂತ ಇಂತಹ ಅನೇಕ ಸ್ಥಳಗಳಿವೆ, ಅವುಗಳ ಇತಿಹಾಸವು ಸಾಕಷ್ಟು ಭಯಾನಕವಾಗಿದೆ.
 

ಇಂದಿನ ಲೇಖನದಲ್ಲಿ ನಾವು ಮಾತನಾಡುತ್ತಿರುವ ಭಯಾನಕ ಸ್ಥಳವು ಭಾರತದಲ್ಲಿಲ್ಲ ಇದು ಇಂಗ್ಲೆಂಡ್ ನಲ್ಲಿದೆ. ಇದು ಕೆಲವು ಕುಟುಂಬ ಸದಸ್ಯರು ಒಗ್ಗೂಡಿ ಅಂತಹ ಭಯಾನಕ ಕೆಲಸವನ್ನು ಮಾಡಿದ ಸ್ಥಳವಾಗಿದೆ. ಈ ಜಾಗಕ್ಕೆ ತೆರಳೋ ಧೈರ್ಯ ಕೂಡ ಯಾರಿಗೂ ಇಲ್ಲ. ಅಂತಹ ಸ್ಥಳ ಯಾವುದು? ಅಲ್ಲಿ ಏನು ನಡೆದಿದೆ ಅನ್ನೋದನ್ನು ತಿಳಿಯೋಣ, 
 

Tap to resize

ಇಲ್ಲಿ ಏನಾಯಿತು?
ಇಂಗ್ಲೆಂಡಿನ ಲ್ಯಾಂಗ್ ಕ್ಯಾಶಿಯರ್ ನಲ್ಲಿ ಪೆಂಡೆಲ್ ಹಿಲ್ (Pendle Hill) ಎಂಬ ಒಂದು ಸ್ಥಳವಿದೆ, ಅದು ಶಿಕ್ಷೆಗೊಳಗಾದವರ ಪ್ರಕ್ಷುಬ್ಧ ಆತ್ಮಗಳಿಂದ ತುಂಬಿದೆ ಎಂದು ನಂಬಲಾಗಿದೆ. ಅಲ್ಲಿ 12 ಮಹಿಳೆಯರ ಆತ್ಮ ಇನ್ನೂ ಸಹ ಇದೆ ಎನ್ನಲಾಗುತ್ತದೆ. ಈ ಆತ್ಮಗಳೇನು ಸುಮ್ಮನೆ ಅಲ್ಲಿಲ್ಲ, ಒಂದೇ ಮನೆಯ 12 ಜನ ಮಹಿಳೆಯರು ಆ ಊರಿನ ಅನೇಕ ಜನರ ಮೇಲೆ ವಾಮಾಚಾರ ಮಾಡಿ, ಅವರನ್ನು ಕೊಲ್ಲುತ್ತಿದ್ದರಂತೆ. ಹೀಗೆ ಅದೆಷ್ಟು ಸಂಖ್ಯೆಯಲ್ಲಿ ಆ ಮಹಿಳೆಯರು ಇದೇ ಜಾಗದಲ್ಲಿ ವಾಮಾಚಾರ ಮಾಡಿ ಹಲವು ಜನರನ್ನು ಕೊಂದಿದ್ದಾರೆ.

ಈ ಮಹಿಳೆಯರು ಅಲ್ಲಿ ವಾಸಿಸುವ ಜನರನ್ನು ಕೊಂದು  ಅವರ ದೇಹಗಳನ್ನು ಮರೆಮಾಡುತ್ತಿದ್ದರಂತೆ. ಪ್ಯಾರಾನಾರ್ಮಲ್ ಸೊಸೈಟಿ (Paranormal society) ಈ ಬಗ್ಗೆ ತನಿಖೆ ನಡೆಸಿದಾಗ, ಈ ಮಹಿಳೆಯರು ಜನರನ್ನು ಕೊಲ್ಲಲು ವಾಮಾಚಾರವನ್ನು ಬಳಸಿದ್ದಾರೆ ಎಂದು ಕಂಡುಬಂದಿದೆ. ಆಗಸ್ಟ್ 17, 1612 ರಂದು, ಈ ನೀಚ ಕೃತ್ಯ ಎಸಗಿದ10 ಮಹಿಳೆಯರನ್ನು ಏಕಕಾಲದಲ್ಲಿ ಗಲ್ಲಿಗೇರಿಸಲಾಯಿತು. ಇಬ್ಬರು ಮಹಿಳೆಯರಿಗೆ ಶಿಕ್ಷೆ ವಿಧಿಸಲಾಗಿದೆ.
 

ಇದೆಲ್ಲಾ ಆಗಿ ಅಷ್ಟು ವರ್ಷಗಳಾದರೂ ಜನರು ಇನ್ನೂ ಈ ಸ್ಥಳಕ್ಕೆ ಹೋಗಲು ಹೆದರುತ್ತಾರೆ, ಏಕೆಂದರೆ 400 ವರ್ಷಗಳ ಹಳೆಯ ವಾಮಾಚಾರದ ಪರಿಣಾಮವನ್ನು ಈ ಬೆಟ್ಟದ ಮೇಲೆ ಇನ್ನೂ ಅನುಭವಿಸಲಾಗುತ್ತದೆ ಎಂದು ಜನರು ನಂಬುತ್ತಾರೆ. ಅನೇಕ ಜನರಿಗೆ ಅದರ ಅನುಭವ ಕೂಡ ಆಗಿದೆ. ಕೆಲವೊಂದು ಪ್ಯಾರಾನಾರ್ಮಲ್ ಚಟುವಟಿಕೆಗಳು (paranormal activities) ಇಲ್ಲಿ ಇನ್ನೂ ನಡೆಯುತ್ತವೆಯಂತೆ. ಅಷ್ಟೆ ಅಲ್ಲ ತುಂಬಾ ಹತ್ತಿರದಿಂದ ಕೇಳಿದಾಗ, ಅಲ್ಲಿ ಯಾರೋ ಕೋಪದಲ್ಲಿ ನಿಟ್ಟುಸಿರು ಬಿಡುತ್ತಿರುವಂತಹ ಶಬ್ಧ ಸಹ ಬರುತ್ತಂತೆ. ಈ ಭಯಾನಕ ಪ್ರದೇಶದ ಮೇಲೆ ಅನೇಕ ಚಲನಚಿತ್ರಗಳು ಮತ್ತು ಧಾರಾವಾಹಿಗಳನ್ನು ಸಹ ನಿರ್ಮಿಸಲಾಗಿದೆ. 
 

ತಲುಪುವುದು ಹೇಗೆ?
ಈ ಬೆಟ್ಟವು ಇಂಗ್ಲೆಂಡ್‌ನ ಲಂಕಾಷೈರ್ನ ಪೂರ್ವದಲ್ಲಿರುವ ಬರ್ನ್ಲಿ, ನೆಲ್ಸನ್, ಕೋಲ್ನೆ, ಬ್ರೈಯರ್ ಫೀಲ್ಡ್, ಕ್ಲಿಥೆರೊ ಮತ್ತು ಪಡ್ಡಿಹಾಮ್ ಪಟ್ಟಣಗಳ ಬಳಿ ಇದೆ. ಇದು ಸಮುದ್ರ ಮಟ್ಟದಿಂದ 557 ಮೀಟರ್ (1,827 ಅಡಿ) ಎತ್ತರದಲ್ಲಿದೆ.  ಈ ಸ್ಥಳವನ್ನು ಇಂಗ್ಲೆಂಡ್ ನ ಭಯಾನಕ ಸ್ಥಳವೆಂದು ಪರಿಗಣಿಸಲಾಗಿದೆ. 
 

ಪೆಂಡೆಲ್ ಹಿಲ್ ಕಥೆಯಾಧಾರಿತ ಸಿನಿಮಾ ಕೂಡ ಇದೆ
ಇಂಗ್ಲೆಂಡ್ ನ ಪೆಂಡೆಲ್ ಹಿಲ್ ನ ಕಥೆಯ ಬಗ್ಗೆ ಚಲನಚಿತ್ರವನ್ನು ಸಹ ಮಾಡಲಾಗಿದೆ, ಇದು ಇಲ್ಲಿನ ಘಟನೆಯನ್ನು ಆಧರಿಸಿದೆ.  ಇದರ ಹೆಸರು ದಿ ಹ್ಯಾಂಟಿಂಗ್ ಆಫ್ ಪೆಂಡೆಲ್ ಹಿಲ್ (the haunting of Pendel Hill). ನೀವು ಅದನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. ಈ ಚಿತ್ರವು 2022 ರಲ್ಲಿ ಬಿಡುಗಡೆಯಾಗಲಿದೆ. 

Latest Videos

click me!