ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ದೇಶದ ಅತ್ಯಂತ ದುಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಾಗ ಎಲ್ಲಾ ಕ್ಯಾಮೆರಾಗಳು ಭವ್ಯವಾದ ರಾಜಸ್ಥಾನದ ಜೋಧ್‌ಪುರದತ್ತ ಮುಖಮಾಡಿದವು.
ನೀತಾ ಅಂಬಾನಿ 50 ನೇ ವರ್ಷದ ಹುಟ್ಟುಹಬ್ಬದ ಪಾರ್ಟಿಗಾಗಿ ಗಣ್ಯರಿಗೆ ಖಾಸಗಿ ಜೆಟ್‌ಗಳನ್ನು ಕೂಡ ಬುಕ್ ಮಾಡಲಾಗಿತ್ತು. ಪತ್ನಿಯ ಬರ್ತಡೇ ಆಚರಣೆಗಳಿಗಾಗಿ ಬರುವ ಅತಿಥಿಗಳಿಗೆ ಅಂಬಾನಿಯವರು ಎರಡು ರಾಜಮನೆತನದ ಅರಮನೆಯನ್ನು ಕಾಯ್ದಿರಿಸಿದ್ದರು. ಅದುವೇ ಉಮೈದ್ ಭವನ್ ಅರಮನೆ ಮತ್ತು ಬಾಲ್ಸಮಂದ್ ಲೇಕ್ ಪ್ಯಾಲೇಸ್.
ಸುಮಾರು 300 ವಿವಿಐಪಿ ಅತಿಥಿಗಳು ಆಚರಣೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಇವುಗಳಲ್ಲಿ ಗೋದ್ರೇಜ್‌ಗಳು, ಮಿತ್ತಲ್‌ಗಳು ಮತ್ತು ಮಹೀಂದ್ರಾಗಳಂತಹ ಕೆಲವು ಶ್ರೀಮಂತ ವ್ಯಾಪಾರ ಕುಟುಂಬಗಳು ಕೂಡ ಸೇರಿದ್ದವು.
ಹುಟ್ಟುಹಬ್ಬಕ್ಕೆ ಬರುವ ಅತಿಥಿಗಳ ಖಾಸಗಿ ಜೆಟ್‌ಗಳು, ವಿಮಾನಗಳಿಗೆ ಜೋಧ್‌ಪುರದ ವಿಮಾನ ನಿಲ್ದಾಣದಲ್ಲಿ ಇಳಿಸಲು ಸ್ಥಳಾವಕಾಶವಿಲ್ಲದೆ. ಅನೇಕ ಖಾಸಗಿ ಜೆಟ್‌ಗಳನ್ನು ಪಾರ್ಕಿಂಗ್‌ಗಾಗಿ ದೆಹಲಿ, ಜೈಪುರ ಮತ್ತು ಉದಯಪುರಕ್ಕೆ ಕಳುಹಿಸಬೇಕಾದ ಪರಿಸ್ಥಿತಿ ಒದಗಿ ಬಂತು.
ಜೋಧ್‌ಪುರವು ಎರಡು ದಿನಗಳ ಕಾಲ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತ್ತು. ಭಾರತದ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಮತ್ತು ಆಸ್ಕರ್-ವಿಜೇತ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರ ಪ್ರದರ್ಶನಗಳು ಸ್ಮರಣೀಯವಾಗಿದೆ.
ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಅಮೀರ್ ಖಾನ್ ಮತ್ತು ರಾಣಿ ಮುಖರ್ಜಿಯಂತಹ ಎ-ಲಿಸ್ಟರ್‌ಗಳು ಮತ್ತು ಅತಿಥಿ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಜಹೀರ್ ಖಾನ್ ಮತ್ತು ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದಂತಹ ಕ್ರೀಡಾ ತಾರೆಗಳು ಸೇರಿದ್ದರು.
ಈಗ ಕುಟುಂಬದ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನೀತಾ ಮತ್ತು ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಕೂಡ ವಿಶೇಷ ಶೋ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಲೆಜೆಂಡರಿ ಬ್ಯುಸಿನೆಸ್ ಟೈಕೂನ್, ಕುಟುಂಬದ ಪಿತಾಮಹ ಧೀರೂಭಾಯಿ ಅಂಬಾನಿ ಅವರನ್ನು ಗೌರವಿಸುವ ಸ್ಪೆಷಲ್ ಎಫೆಕ್ಟ್‌ಗಳೊಂದಿಗಿನ ಬೆಳಕಿನ ಪ್ರದರ್ಶನವು ಮತ್ತೊಂದು ಹೈಲೈಟ್ ಆಗಿತ್ತು. ಹುಟ್ಟುಹಬ್ಬದ ಆಚರಣೆಗಳು ಅಕ್ಟೋಬರ್ 31, 2013 ರಂದು ಪ್ರಾರಂಭವಾಯಿತು ಮತ್ತು ನವೆಂಬರ್ 1 ರಂದು ನೀತಾ ಅಂಬಾನಿಯವರ 50 ನೇ ಹುಟ್ಟುಹಬ್ಬದೊಂದಿಗೆ ಕೊನೆಗೊಂಡಿತು.
ಮೊದಲ ದಿನವು ಯುವಜನರಿಂದ ಪ್ರಾಬಲ್ಯ ಹೊಂದಿರುವ ಪಾರ್ಟಿ ಆಯೋಜಿಸಲಾಗಿತ್ತು ನೋ-ಹೋಲ್ಡ್ ಬ್ಯಾರೆಡ್ ಪಾರ್ಟಿ, ಕೇಕ್ ಕತ್ತರಿಸುವುದು, ಸಂಗೀತ, ನೃತ್ಯ ಮತ್ತು ಬಾಲಿವುಡ್ ತಾರೆಯರ ಪ್ರದರ್ಶನಗಳು ಇತ್ಯಾದಿಗಳಿದ್ದವು.
ಮೊದಲ ದಿನ ನೀತಾ ಅಂಬಾನಿಯವರ ಹುಟ್ಟುಹಬ್ಬದ ಆಚರಣೆಯು ವ್ಯತಿರಿಕ್ತ ಥೀಮ್ ಅನ್ನು ಹೊಂದಿತ್ತು. ಇದು ಧನ್ತೇರಸ್ನ ಮಂಗಳಕರ ಹಬ್ಬದೊಂದಿಗೆ ಹೊಂದಿಕೆಯಾಯಿತು. ಅಂಬಾನಿಯವರು ವಿಸ್ತಾರವಾದ ಪೂಜೆ ಮತ್ತು ಕೆಲವು ವಿಶೇಷ ಪ್ರದರ್ಶನಗಳನ್ನು ಕಟ್ಟುನಿಟ್ಟಾಗಿ ಕುಟುಂಬ ಮತ್ತು ನಿಕಟ ಸ್ನೇಹಿತರಿಂದ ಆಯೋಜಿಸಿದರು. ನಂತರ ಬಾಲ್ ಸಮಂದ್ ಲೇಕ್ ಪ್ಯಾಲೇಸ್‌ನಲ್ಲಿ ಸಾಂಪ್ರದಾಯಿಕ ಹಬ್ಬದೂಟ ನಡೆಯಿತು.
ಇಡೀ ಸಮಾರಂಭಕ್ಕೆ 220 ಕೋಟಿ ರೂಪಾಯಿ ($30 ಮಿಲಿಯನ್) ವೆಚ್ಚವಾಗಿದೆ ಎಂದು ವರದಿಯಾಗಿದೆ. ಈ ವರ್ಷ ನವೆಂಬರ್ 1 ರಂದು ನೀತಾ ಅಂಬಾನಿ ತನ್ನ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.