ವಿಶ್ವದ ಅತ್ಯಂತ ದುಬಾರಿ ಸೀರೆಯ ಒಡತಿ ನೀತಾ ಅಂಬಾನಿ; 8 ಕೆಜಿಗೂ ಹೆಚ್ಚು ತೂಕದ ಸೀರೆ ಬೆಲೆಯೆಷ್ಟು ಗೊತ್ತಾ?

Published : Sep 30, 2023, 12:17 PM ISTUpdated : Sep 30, 2023, 12:29 PM IST

ಬಿಲಿಯನೇರ್‌ ಪತ್ನಿ ನೀತಾ ಅಂಬಾನಿ ಲೈಫ್‌ಸ್ಟೈಲ್‌ ಯಾವಾಗ್ಲೂ ಚರ್ಚೆಯಲ್ಲಿರುತ್ತದೆ. ಈ ಹಿಂದೆ ಜಗತ್ತಿನಲ್ಲೇ ಅತೀ ದುಬಾರಿ ಸೀರೆಯನ್ನು ನೀತಾ ಅಂಬಾನಿ ಧರಿಸಿದ್ದರು. ಅದರ ಬೆಲೆಯೆಷ್ಟೂಂತ ಗೊತ್ತಾದ್ರೆ ನಿಮ್ಗೆ ತಲೆಸುತ್ತು ಬರೋದು ಖಂಡಿತ. 

PREV
17
ವಿಶ್ವದ ಅತ್ಯಂತ ದುಬಾರಿ ಸೀರೆಯ ಒಡತಿ ನೀತಾ ಅಂಬಾನಿ; 8 ಕೆಜಿಗೂ ಹೆಚ್ಚು ತೂಕದ ಸೀರೆ ಬೆಲೆಯೆಷ್ಟು ಗೊತ್ತಾ?

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಅಂಬಾನಿ ಕುಟುಂಬ ಯಾವಾಗಲೂ ಸುದ್ದಿಯಾಗುತ್ತಿರುತ್ತದೆ. ಅದರಲ್ಲೂ ನೀತಾ ಅಂಬಾನಿ ಲೈಫ್‌ಸ್ಟೈಲ್‌ ಸದಾ ಚರ್ಚೆಯಾಗುತ್ತಲೇ ಇರುತ್ತದೆ. ನೀತಾ ಅಂಬಾನಿ ಯಾವಾಗಲೂ ದುಬಾರಿ ಸೀರೆ, ಜ್ಯುವೆಲ್ಲರಿ, ಆಸೆಸ್ಸರೀಸ್ ಧರಿಸಿಕೊಂಡು ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಈ ಹಿಂದೆ ಜಗತ್ತಿನಲ್ಲೇ ಅತೀ ದುಬಾರಿ ಸೀರೆಯನ್ನು ನೀತಾ ಅಂಬಾನಿ ಧರಿಸಿದ್ದರು. ಅದರ ಬೆಲೆಯೆಷ್ಟೂಂತ ಗೊತ್ತಾದ್ರೆ ನಿಮ್ಗೆ ತಲೆಸುತ್ತು ಬರೋದು ಖಂಡಿತ.

27

ಮದುವೆಯೊಂದರಲ್ಲಿ ನೀತಾ ಅಂಬಾನಿ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ಇಡೀ ಪ್ರಪಂಚದ ಅತ್ಯಂತ ದುಬಾರಿ ಸೀರೆ ಎಂದು ಪರಿಗಣಿಸಲಾಗಿದೆ. 2015ರಲ್ಲಿ, ಮಾಜಿ ರಾಜ್ಯಸಭಾ ಸಂಸದ ಪರಿಮಳಾ ನಾಥ್ವಾನಿ ಅವರ ಮಗನ ಮದುವೆಯಲ್ಲಿ ನೀತಾ ಈ ಸೀರೆ ಧರಿಸಿದ್ದರು. ಈ ಸೀರೆ ಗಿನ್ನೆಸ್ ಪುಸ್ತಕದಲ್ಲಿ ಅತ್ಯಂತ ದುಬಾರಿ ಸೀರೆ ಎಂಬ ದಾಖಲೆಯನ್ನು ಸಹ ಹೊಂದಿದೆ.

37

ನೀತಾ ಅಂಬಾನಿಯ ಅತ್ಯಂತ ದುಬಾರಿ ಸೀರೆಯ ವಿನ್ಯಾಸಕರು ಯಾರು?
ಅದ್ದೂರಿ ಸೀರೆಯನ್ನು ಚೆನ್ನೈ ಸಿಲ್ಕ್ಸ್‌ನ ನಿರ್ದೇಶಕ ಶಿವಲಿಂಗಂ ವಿನ್ಯಾಸಗೊಳಿಸಿದ್ದಾರೆ. ಗುಲಾಬಿ ಬಣ್ಣದ ಕೈಯಿಂದ ಕಸೂತಿ ಮಾಡಿದ ಸೀರೆಯು ನಿಜವಾದ ಮುತ್ತುಗಳು, ಪಚ್ಚೆಗಳು, ಮಾಣಿಕ್ಯಗಳು, ಪುಖರಾಜ್ ಮತ್ತು ಇತರ ಬೆಲೆಬಾಳುವ ಕಲ್ಲುಗಳಿಂದ ಅಲಂಕರಿಸಲ್ಪಟ್ಟಿದೆ.

47

ತಮಿಳುನಾಡಿನ ಅತಿದೊಡ್ಡ ಜವಳಿ ಸಾಮ್ರಾಜ್ಯವಾದ ಚೆನ್ನೈ ಸಿಲ್ಕ್ಸ್ (TCS) ತನ್ನ ಸರಕುಗಳ ಆಯ್ಕೆಯೊಂದಿಗೆ ಕುಟುಂಬಗಳ ತಲೆಮಾರುಗಳನ್ನು ಸಂತೋಷಪಡಿಸಿದೆ.

57

ಚೆನ್ನೈ, ಕೊಯಮತ್ತೂರು, ತಿರುಪುರ್ ಮುಂತಾದ ಸ್ಥಳಗಳಲ್ಲಿ ವಿಸ್ತಾರವಾದ ಅಂಗಡಿಗಳೊಂದಿಗೆ, ಇದು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಗಡಿ ಮತ್ತು ಅಡೆತಡೆಗಳನ್ನು ಮೀರಿ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಚೆನ್ನೈ ಸಿಲ್ಕ್ಸ್ ಪ್ರಯತ್ನಗಳನ್ನು ಮಾಡುತ್ತಲೇ ಇದೆ.

67

ನೀತಾ ಅಂಬಾನಿಯವರ ಅತ್ಯಂತ ದುಬಾರಿ ಸೀರೆಯ ಬೆಲೆ ಎಷ್ಟು?
ನೀತಾ ಅಂಬಾನಿ ಸೀರೆಯು ತುಂಬಾ ಕ್ಲಿಷ್ಟಕರವಾದ ಥ್ರೆಡ್‌ವರ್ಕ್ ಹೊಂದಿತ್ತು. ನಾಥದ್ವಾರದ ಭಗವಂತನ ಸುಂದರವಾದ ಮತ್ತು ಸಂಕೀರ್ಣವಾದ ಚಿತ್ರವನ್ನು ಪ್ರದರ್ಶಿಸುವ ಅದ್ಭುತವಾದ ಪಲ್ಲು ಮತ್ತು ಅದರ ಕುಪ್ಪಸವು ಎಲ್ಲರ ಗಮನವನ್ನು ಸೆಳೆಯಿತು. ಈ ಸೀರೆಯ ಬೆಲೆ ಬರೋಬ್ಬರಿ 40 ಲಕ್ಷ ರೂ.

77

ಶಿವಲಿಂಗಂ ರಚಿಸಿದ ವಿವಾಹ ಪಟ್ಟು ಸೀರೆಯನ್ನು ಕಾಂಚೀಪುರಂನ 35 ಮಹಿಳಾ ಕುಶಲಕರ್ಮಿಗಳು ರಚಿಸಿದ್ದರು. ಸೀರೆಯು 8 ಕೆ.ಜಿಗೂ ಹೆಚ್ಚು ತೂಕವಿದೆ. ನೀತಾ ಅಂಬಾನಿ ಮದುವೆಯಲ್ಲಿ ಈ ಸೀರೆ ಉಟ್ಟಾಗ ಭಾರವಾದ ವಜ್ರ ಮತ್ತು ಪಚ್ಚೆಯ ನೆಕ್ಲೇಸ್ ಮತ್ತು ಮ್ಯಾಚಿಂಗ್‌ ಕಿವಿಯೋಲೆ ಧರಿಸಿದ್ದರು

Read more Photos on
click me!

Recommended Stories