Hormone imbalance ಆಗಿದ್ದರೆ ಈ ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ!

Published : Nov 07, 2022, 04:38 PM IST

ದೇಹದಲ್ಲಿ ಹಾರ್ಮೋನುಗಳ ಅಸಮತೋಲನ ಉಂಟಾಗಲು ಮುಖ್ಯ ಕಾರಣ ಅಂದ್ರೆ ಅದು ತಪ್ಪಾದ ಆಹಾರ ಪದ್ಧತಿ. ಹಾಗಾಗಿ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಆಹಾರದಲ್ಲಿನ ಪೋಷಕಾಂಶಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು. ಏಕೆಂದರೆ ಉತ್ತಮ ಆಹಾರಕ್ರಮವು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಮಹತ್ವದ್ದಾಗಿದೆ. ಸರಿಯಾದ ಆಹಾರ ಕ್ರಮ ಪಾಲಿಸಿದರೆ ಮಾತ್ರ ಹಾರ್ಮೋನ್ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತೆ. 

PREV
17
Hormone imbalance ಆಗಿದ್ದರೆ ಈ ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ!

ನಮ್ಮ ದೇಹವನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಲ್ಲಿ ಹಾರ್ಮೋನುಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಹಾರ್ಮೋನ್ ಸಮತೋಲನ ಹದಗೆಟ್ಟರೆ, ಆಗ ಅನಿಯಮಿತ ಋತುಚಕ್ರ, ಮೂಡ್ ಸ್ವಿಂಗ್ (Mood swing), ಒಣ ಚರ್ಮ ಸಮಸ್ಯೆ ಮೊದಲಾದ ಹಲವಾರು ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. 

27

ದೇಹದಲ್ಲಿ ಹಾರ್ಮೋನುಗಳ ಅಸಮತೋಲನವು(Harmone Imbalance) ತಪ್ಪು ಆಹಾರ ಪದ್ಧತಿಯಿಂದಾಗಿ ಉಂಟಾಗುತ್ತೆ. ಹಾಗಾಗಿ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಆಹಾರದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸೋದು. ಏಕೆಂದರೆ ಉತ್ತಮ ಆಹಾರವು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹಾರ್ಮೋನ್ ಸಂಬಂಧಿತ ಸಮಸ್ಯೆಯನ್ನು ತೊಡೆದುಹಾಕಲು ಕೆಲವೊಂದು ಬೀಜಗಳು ಸಹಾಯ ಮಾಡುತ್ತವೆ. ಅವುಗಳ ಬಗ್ಗೆ ತಿಳಿಯೋಣ.

37

ಹಾರ್ಮೋನ್-ಸಮತೋಲನ ಕಾಪಾಡಲು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಈ ಬೀಜಗಳನ್ನು ಸೇವಿಸಿ
ಕುಂಬಳಕಾಯಿ ಬೀಜ (pumpkin seed)

ಆರೋಗ್ಯವನ್ನು ಸುಧಾರಿಸಲು ಬಯಸಿದರೆ, ಆಹಾರದಲ್ಲಿ ಕುಂಬಳಕಾಯಿ ಬೀಜ ಸೇರಿಸಿ. ಇದು ಸಾಕಷ್ಟು ಜಿಂಕ್ ಹೊಂದಿರುತ್ತೆ, ಅಲ್ಲದೇ ಇದು ಋತುಚಕ್ರದ ನೋವನ್ನು ಕಡಿಮೆ ಮಾಡುತ್ತೆ.ಜೊತೆಗೆ ದೇಹದಲ್ಲಿ ಈಸ್ಟ್ರೋಜೆನ್ ಮಟ್ಟವನ್ನು ಸಮತೋಲನಗೊಳಿಸುವ ಫೈಟೋ ಈಸ್ಟ್ರೋಜೆನ್ ಗಳ ಉತ್ತಮ ಮೂಲವಾಗಿದೆ. 
 

47

ಅಗಸೆಬೀಜ(Flax seed) 
ದೇಹದಲ್ಲಿ ಹಾರ್ಮೋನ್ ಸಮತೋಲನಗೊಳಿಸಲು ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತೆ. ಇದು ಒಮೆಗಾ -3 ಕೊಬ್ಬಿನಾಮ್ಲ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ, ಫರ್ಟಿಲಿಟಿ ಹೆಚ್ಚಿಸಲು ಇದು ಸಹಾಯ ಮಾಡುತ್ತೆ ಮತ್ತು ಆಯಾಸ, ಮೂಡ್ ಸ್ವಿಂಗ್, ಹೊಟ್ಟೆಯ ಸೆಳೆತದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತೆ.

57

ಸೂರ್ಯಕಾಂತಿ ಬೀಜ(Sun flower seed)
ಸೂರ್ಯಕಾಂತಿ ಬೀಜ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತವೆ. ಇದರಲ್ಲಿ ವಿಟಮಿನ್ ಇ ಅಧಿಕವಾಗಿದೆ, ಇದು ಪ್ರೊಜೆಸ್ಟರಾನ್ ಉತ್ಪಾದನೆಗೆ ಸಹಾಯ ಮಾಡುತ್ತೆ. ಇದಲ್ಲದೆ, ಸೂರ್ಯಕಾಂತಿ ಬೀಜದಲ್ಲಿ ಕಂಡುಬರುವ ಫೈಬರ್ ಜೀರ್ಣಕ್ರಿಯೆಗೆ ಒಳ್ಳೆಯದು.
 

67

ದ್ರಾಕ್ಷಿ ಬೀಜ (Grape seed)
ದ್ರಾಕ್ಷಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ದೇಹದ ಮೃದು ಅಂಗಾಂಶಗಳನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತೆ. ಇದರ ಸೇವನೆಯು ಮಧುಮೇಹದ ಅಪಾಯವನ್ನು ಸಹ ಕಡಿಮೆ ಮಾಡುತ್ತೆ.ಇನ್ನು ಮುಂದೆ ದ್ರಾಕ್ಷಿ ಬೀಜ ತಿನ್ನಲು ಮಿಸ್ ಮಾಡಬೇಡಿ.

77

ಸೀತಾಫಲದ ಬೀಜ(Custard apple seed)
ನಿಯಮಿತವಾಗಿ ಸೀತಾಫಲದ ಬೀಜಗಳನ್ನು ಸೇವಿಸಿದರೆ, ಇಮ್ಮ್ಯೂನ್ ಸಿಸ್ಟಮ್ ಬಲವಾಗಿರುತ್ತೆ ಮತ್ತು ಅದರ ಬೀಜಗಳು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇದನ್ನು ಸೇವಿಸುವ ಮುನ್ನ ವೈದ್ಯರ ಬಳಿ ಸಲಹೆ ಕೇಳುವುದು ಉತ್ತಮ.

Read more Photos on
click me!

Recommended Stories