ಅಡಿಗೆ ಸೋಡಾ ಗ್ಲಾಮರ್ ಸಹ ಹೆಚ್ಚಿಸುತ್ತದೆ ನಿಮಗೆ ಗೊತ್ತಾ?
ಅಡಿಗೆ ಸೋಡಾದ ಉಪಯೋಗ ಕೇವಲ ಅಡಿಗೆ ಮನೆಯಲ್ಲಿ ಮಾತ್ರ ಅಲ್ಲ. ಬೇಕಿಂಗ್ ಸೋಡಾ ಬ್ಯೂಟಿ ಹೆಚ್ಚಿಸಲು ಸಹಾ ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತಾ? ಹೌದು. ಅಡುಗೆ ಸೋಡಾದಿಂದ ನಿಮ್ಮ ಅಂದವನ್ನು ಸಹ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ನೋಡಿ.
ಅಡಿಗೆ ಸೋಡಾ ಗ್ಲಾಮರ್ ಸಹ ಹೆಚ್ಚಿಸುತ್ತದೆ ನಿಮಗೆ ಗೊತ್ತಾ?
ಅಡಿಗೆ ಸೋಡಾ ಕೆಲವು ಎಫ್ಫೋಲಿಯೇಟಿಂಗ್ ಗುಣಗಳನ್ನು ಹೊಂದಿದೆ.
ಇದನ್ನು ಆ್ಯಪಲ್ ಸೈಡರ್ ವಿನೆಗರ್ ಜೊತೆ ಸೇರಿಸಿದಾಗ ಉತ್ತಮ ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ ಹಾಗೂ ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ. ಅಷ್ಟೆ ಅಲ್ಲ. ಇದು ಮೊಡವೆಗಳಿಗೆ ಚಿಕಿತ್ಸೆಯಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಆಪಲ್ ಸೈಡರ್ ವಿನೆಗರ್ ಮತ್ತು ಬೇಕಿಂಗ್ ಸೋಡಾವನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ.
ಅಡಿಗೆ ಸೋಡಾ ಮತ್ತು ಸಮುದ್ರದ ಉಪ್ಪು ಹಾಗೂ ನಿಮ್ಮ ಆಯ್ಕೆಯ ಎಸ್ಸೆನ್ಷಿಯಲ್ ಆಯಿಲ್ (essential oil) ಬೆರೆಸುವ ಮೂಲಕ ಸ್ಪಾ ಅನುಭವ ಪಡೆಯಿರಿ. ಇದು ಬೆಸ್ಟ್ ಡಿಟಾಕ್ಸ್ ಆಗಿ ಕೆಲಸ ಮಾಡುತ್ತದೆ.
ಡ್ರೈ ಶಾಂಪೂ:
ಸ್ಪಲ್ಪ ಸೋಡಾವನ್ನು ತೆಗೆದು ಕೊಂಡು ತಲೆಗೆ ಹಚ್ಚಿಕೊಳ್ಳಿ. ಕೂದಲನ್ನು ಬಾಚುವ ಮೂಲಕ ಹಚ್ಚಿದ ಬೇಕಿಂಗ್ ಸೋಡಾವನ್ನು ತೆಗೆಯಿರಿ.
ಬೆರಳುಗಳು ಡಲ್ ಹಾಗೂ ನಿರ್ಜೀವವಾಗಿ ಕಾಣಿಸುತ್ತಿದಿಯಾ? ಬೌಲ್‌ಗೆ ಬೆಚ್ಚಗಿನ ನೀರು ಹಾಗೂ ಬೇಕಿಂಗ್ ಪೌಡರ್ ಸೇರಿಸಿ ಮತ್ತು ನಿಮ್ಮ ಕೈಗಳನ್ನು ಅವುಗಳಲ್ಲಿ ನೆನೆಸಿ. ಕೈ ಮತ್ತು ಉಗುರುಗಳನ್ನು ಫ್ರೆಶ್ ಮತ್ತು ಆರೋಗ್ಯಕರವಾಗಿ ಮಾಡುವುದರ ಜೊತೆಗೆ ಡ್ರೈ ಚರ್ಮವನ್ನು ತೊಲಗಿಸುತ್ತದೆ.
ಫಂಗಲ್ ಅಥವಾ ಬ್ಯಾಕ್ಟೀರಿಯಾ ಸೋಂಕು ಇದ್ದರೆ, ಪಾದವನ್ನು ಅಡುಗೆ ಸೋಡಾ ಮತ್ತು ನೀರಿನೊಂದಿಗೆ ನೆನೆಸಿ ನೋಡಿ.
ನೈಸರ್ಗಿಕ ಡಿಯೋಡರೆಂಟ್:
ನಿಮ್ಮ ಫೇವರೇಟ್ essential oil, ಸ್ವಲ್ಪ ಬೇಕಿಂಗ್ ಸೋಡಾ ಮತ್ತು ಒಂದು ಚಮಚ ನೀರು ಮಿಕ್ಸ್ ಮಾಡಿ ಹತ್ತಿ ಉಂಡೆ ಬಳಸಿ ಕಂಕುಳಿಗೆ ಹಚ್ಚಿ. ಇದು ನೈಸರ್ಗಿಕ ಬ್ಯಾಕ್ಟೀರಿಯಾ ಆಂಟಿ ಏಜೆಂಟ್ ಆಗಿರುವುದರಿಂದ ಡಿಯೋಡರೆಂಟ್ ಆಗಿ ಕೆಲಸ ಮಾಡುತ್ತದೆ.