ಬಿಲ್ವಪತ್ರೆಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಪ್ರೋಟೀನ್, ಕ್ಯಾಲ್ಸಿಯಂ(Calcium), ಕಬ್ಬಿಣ, ಬೀಟಾ-ಕ್ಯಾರೋಟಿನ್, ಥಯಾಮಿನ್ ನಂತಹ ಪೋಷಕಾಂಶಗಳಿವೆ, ಇದು ನಿರ್ಜೀವ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಸುತ್ತೆ.
ನಿಮ್ಮ ಒಣ ಚರ್ಮ ಅಥವಾ ಕೂದಲು ಉದುರುವ ಸಮಸ್ಯೆ ಗುಣಪಡಿಸಲು ನೀವು ಬಿಲ್ವಪತ್ರೆ ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ. ಇಷ್ಟೇ ಅಲ್ಲ, ಬಿಲ್ವಪತ್ರೆ ಚರ್ಮ ಮತ್ತು ಕೂದಲಿಗೆ(Skin and hair) ಯಾವ ಪ್ರಯೋಜನ ನೀಡಬಹುದು ಅನ್ನೋದನ್ನು ಸಹ ತಿಳಿಯೋಣ.
ಚರ್ಮ ಮತ್ತು ಕೂದಲಿನ ಸಮಸ್ಯೆ ನಿವಾರಿಸಲು ಬಿಲ್ವಪತ್ರೆಯನ್ನು(Bael leaves) ಹೀಗೆ ಬಳಸಿ
ಹೊಳೆಯುವ ಚರ್ಮಕ್ಕಾಗಿ
ಬಿಲ್ವಪತ್ರೆ ಎಲೆಯು ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟೀರಿಯಾ ಅಂಶ ಹೊಂದಿರುತ್ತೆ, ಇದು ಚರ್ಮ ಸುಧಾರಿಸುವಲ್ಲಿ ಪರಿಣಾಮಕಾರಿ. ಮುಖಕ್ಕೆ ಹೊಳಪನ್ನು ತರಲು, ನೀವು ಇದನ್ನು ಅರೆದು ಅದಕ್ಕೆ ಕೆಲವು ಹನಿ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. ನೀವು ಬಿಲ್ವಪತ್ರೆಯನ್ನು ನೀರಿನಲ್ಲಿ ಕುದಿಸಿ ಮತ್ತು ಈ ನೀರಿನಿಂದ ತೊಳೆದರೆ, ಮುಖ ಸುಂದರವಾಗುತ್ತೆ.
ವಯಸ್ಸಾಗದಂತೆ ರಕ್ಷಿಸುತ್ತದೆ
ಬಿಲ್ವಪತ್ರೆ ಆಂಟಿ-ಏಜಿಂಗ್ (Anti aging)ಅಂಶ ಸಹ ಹೊಂದಿದೆ, ಇದು ಚರ್ಮವನ್ನು ಫ್ರೀ ರಾಡಿಕಲ್ ಗಳಿಂದ ರಕ್ಷಿಸುತ್ತೆ ಮತ್ತು ಸುಕ್ಕು, ಪಿಗ್ ಮೆಂಟೇಷನ್ ಇತ್ಯಾದಿಗಳಿಂದ ಚರ್ಮವನ್ನು ರಕ್ಷಿಸುತ್ತೆ. ಇದಕ್ಕಾಗಿ, ನೀವು ಬಿಲ್ವಪತ್ರೆ ಅರೆದು ಮತ್ತು ಅದರ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚಬಹುದು.
ಬಾಡಿ ಸ್ಮೆಲ್(Body smell) ತೆಗೆದುಹಾಕುತ್ತದೆ
ದೇಹವು ಕೆಟ್ಟ ವಾಸನೆ ಹೊಂದಿದ್ದರೆ, ಬಿಲ್ವಪತ್ರೆ ಎಲೆ ಬಳಸಿ. ಇದಕ್ಕಾಗಿ, ಬಿಲ್ವಪತ್ರೆ ಎಲೆ ಅರೆದು ಅದರ ರಸವನ್ನು ದೇಹದ ಮೇಲೆ ಹಚ್ಚಿ ಕೆಲವು ಗಂಟೆಗಳ ಕಾಲ ಹಾಗೇ ಬಿಡಿ. ಅದರ ನಂತರ, ಸಾಮಾನ್ಯ ನೀರಿನಿಂದ ಸ್ನಾನ ಮಾಡಿ. ಇದು ದೇಹದ ವಾಸನೆ ತೆಗೆದುಹಾಕುತ್ತೆ.
ಕಲೆ ಮತ್ತು ತುರಿಕೆಯಿಂದ(Itching) ಪರಿಹಾರ
ಚರ್ಮದ ಮೇಲೆ ಕಲೆಗಳಿದ್ದರೆ ಅಥವಾ ತುರಿಕೆ ಸಮಸ್ಯೆ ಹೊಂದಿದ್ದರೆ, ಅದನ್ನು ತೆಗೆದುಹಾಕಲು ನೀವು ಬಿಲ್ವಪತ್ರೆ ಬಳಸಬೇಕು. ಇದಕ್ಕಾಗಿ, ಬಿಲ್ವಪತ್ರೆಯನ್ನು ರುಬ್ಬಿ ಮತ್ತು ಅದರ ರಸವನ್ನು ಜೀರಿಗೆ ಪುಡಿಯೊಂದಿಗೆ ಮಿಕ್ಸ್ ಮಾಡಿ. ಇದನ್ನು ಚರ್ಮದ ಮೇಲೆ ಹಚ್ಚಿದರೆ, ತುರಿಕೆ ಶಾಂತವಾಗುತ್ತೆ ಮತ್ತು ಕಲೆ ಸಹ ದೂರವಾಗುತ್ತೆ.
ಕೂದಲು ಉದುರುವಿಕೆ(Hair fall) ನಿಲ್ಲಿಸುತ್ತದೆ
ಕೂದಲು ತುಂಬಾ ಉದುರುತ್ತಿದ್ದರೆ, ಬಿಲ್ವಪತ್ರೆ ಅರೆದು ಕೂದಲಿನ ಬೇರುಗಳಿಗೆ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ. ನೀವು ಪ್ರತಿದಿನ ಬೆಳಿಗ್ಗೆ ಬಿಲ್ವಪತ್ರೆ ಎಲೆ ತೊಳೆದು ತಿನ್ನಬಹುದು. ಇದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತೆ.
ಹೇನು(Lice) ನಿವಾರಿಸುತ್ತದೆ
ಬಿಲ್ವಪತ್ರೆ ಒಣಗಿಸಿ, ರುಬ್ಬಿಕೊಳ್ಳಿ,ಅದರಲ್ಲಿ ಎಳ್ಳೆಣ್ಣೆ ಮತ್ತು ಕರ್ಪೂರದ ಎಣ್ಣೆ ಮಿಕ್ಸ್ ಮಾಡಿ. ಈಗ ಅದನ್ನು ಕೂದಲಿನ ಬೇರುಗಳಿಗೆ ಹಚ್ಚಿ ಮಸಾಜ್ ಮಾಡಿ. ಈ ಎಣ್ಣೆ ನಿಯಮಿತವಾಗಿ ಬಳಸೋದರಿಂದ ತಲೆಯ ಹೇನು ನಿವಾರಣೆಯಾಗುತ್ತೆ.