ಟೊಮ್ಯಾಟೋ ಬಹುತೇಕ ಎಲ್ಲಾ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದಲ್ಲದೆ, ಇದನ್ನು ಸುಂದರವಾದ ಚರ್ಮ ಪಡೆಯಲು ಸಹ ಬಳಸಲಾಗುತ್ತದೆ. ಟೊಮೆಟೊ ಚರ್ಮಕ್ಕೆ ಜೀವ ತುಂಬುವುದರ ಜೊತೆಗೆ ಚರ್ಮ ಹೊಳೆಯುವಂತೆ ಮಾಡುತ್ತೆ. ಟೊಮೆಟೊವನ್ನು ಪ್ರತಿದಿನ ಚರ್ಮಕ್ಕೆ ಹಚ್ಚಿದರೆ, ಇದು ಸನ್ ಟ್ಯಾನ್ (sun tan), ಚರ್ಮದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸುತ್ತೆ.
ಟೊಮ್ಯಾಟೋಗಳಲ್ಲಿ ಲೈಕೋಪೀನ್ ಸಮೃದ್ಧವಾಗಿದೆ, ಇದು ಪ್ರಬಲ ಆಂಟಿ ಬಯೋಟಿಕ್ (anti biotic) ಆಗಿದೆ, ಇದು ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಅಕಾಲಿಕ ವೃದ್ಧಾಪ್ಯದ ಚಿಹ್ನೆಗಳನ್ನು ತಡೆಯುತ್ತದೆ. ಇದರಿಂದ ನೀವು ಎವರ್ ಗ್ರೀನ್ ಯಂಗ್ ಆಗಿ ಕಾಣಬಹುದು.ಹಾಗಿದ್ರೆ ಬನ್ನಿ ಟೊಮಾಟೋ ಫೇಸ್ ಪ್ಯಾಕ್ ಮಾಡೋದು ಹೇಗೆ ನೋಡೋಣ..
ಟೊಮೆಟೊ ಮತ್ತು ನಿಂಬೆ ಹಣ್ಣಿನ ಪ್ಯಾಕ್
ಈ ಪ್ಯಾಕ್ ನಿಮ್ಮ ತ್ವಚೆ ಮೇಲೆ ನಿಜವಾಗಿಯೂ ಅದ್ಭುತ ಸೃಷ್ಟಿಸುತ್ತೆ, ಇದು ಚರ್ಮವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಅದನ್ನು ಹೊಳೆಯುವಂತೆ ಮಾಡುತ್ತದೆ. ಟೊಮೆಟೊ ಮತ್ತು ನಿಂಬೆ ಎರಡೂ ಬ್ಲೀಚಿಂಗ್ (bleeching) ಗುಣ ಹೊಂದಿವೆ, ಇದು ಚರ್ಮದ ಬಣ್ಣವನ್ನು ಸ್ವಚ್ಛಗೊಳಿಸುತ್ತದೆ. ಇದಕ್ಕಾಗಿ, ಟೊಮೆಟೊ ಮತ್ತು ನಿಂಬೆಯ ರಸ ಮಿಕ್ಸ್ ಮಾಡಿ. ನಂತರ ಟೊಮೆಟೊ ರಸಕ್ಕೆ ಜಿಲೆಟಿನ್ ಪುಡಿ ಸೇರಿಸಿ.
ಈ ಮಿಶ್ರಣವನ್ನು ಮೈಕ್ರೋವೇವ್ (microwave) ನಲ್ಲಿ ಸ್ವಲ್ಪ ಸಮಯದವರೆಗೆ ಬಿಸಿ ಮಾಡಿ, ಇದರಿಂದ ಜಿಲೆಟಿನ್ ಚೆನ್ನಾಗಿ ಕರಗುತ್ತದೆ. ನಂತರ ಅದಕ್ಕೆ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ, ಅದು ಒಣಗಿದಾಗ ನಿಧಾನವಾಗಿ ಮಾಸ್ಕ್ ನಂತೆ ತೆಗೆಯಿರಿ.
ಟೊಮೆಟೊ ಮತ್ತು ಸೌತೆಕಾಯಿ ಪ್ಯಾಕ್
ತಾಜಾ ಚರ್ಮಕ್ಕಾಗಿ ಟೊಮೆಟೊ ಮತ್ತು ಸೌತೆಕಾಯಿ ಸಹಾಯ ಮಾಡುತ್ತೆ. ಟೊಮೆಟೊ ಮತ್ತು ಸೌತೆಕಾಯಿಗಳೆರಡೂ ನ್ಯಾಚುರಲ್ ಆಸ್ಟ್ರಿಜೆನ್ ಗಳಾಗಿವೆ, ಇದು ರಂಧ್ರಗಳನ್ನು ಬಿಗಿಗೊಳಿಸಿ ತಾಜಾ ಚರ್ಮವನ್ನು ನೀಡುತ್ತೆ. ಇದಕ್ಕಾಗಿ, ಸೌತೆಕಾಯಿಯನ್ನು ಸೋಸಿ ಮತ್ತು ಅದರ ರಸ ತೆಗೆಯಿರಿ , ಅದಕ್ಕೆ ಟೊಮೆಟೊ ರಸ (tomato juice) ಸೇರಿಸಿ. ಈಗ ಅದನ್ನು ಮುಖದ ಮೇಲೆ ಹಾಕಿ. 15 ನಿಮಿಷಗಳ ನಂತರ, ನೀರಿನಿಂದ ತೊಳೆಯಿರಿ.
ಬೇಸನ್ ಮತ್ತು ಟೊಮೆಟೊ ಫೇಸ್ ಪ್ಯಾಕ್
ಮೊಡವೆ ಕಲೆಗಳಿಂದ ತೊಂದರೆಗೀಡಾದರೆ, ಈ ಫೇಸ್ ಪ್ಯಾಕ್ ನಿಮಗೆ ಬೆಸ್ಟ್. ಇದಕ್ಕಾಗಿ, ಟೊಮೆಟೊ ರಸ, ಆಲೂಗಡ್ಡೆ ರಸ, ನಿಂಬೆ ರಸ, ಕಿತ್ತಳೆ ಸಿಪ್ಪೆಯ ಪುಡಿ ಎಲ್ಲವನ್ನೂ ಮೂರು ಟೀಸ್ಪೂನ್ ಕಡಲೆ ಹಿಟ್ಟಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ. ಈಗ ಅದನ್ನು ಒಣಗುವವರೆಗೆ ಮುಖದ ಮೇಲೆ ಹಚ್ಚಿ, ನಂತರ ನೀರಿನಿಂದ ತೊಳೆಯಿರಿ.
ಇದು ಮೊಡವೆ ಮತ್ತು ಅದರ ಕಲೆಗಳೆರಡನ್ನೂ ತೊಡೆದುಹಾಕುತ್ತದೆ. ಈ ಫೇಸ್ ಪ್ಯಾಕ್ (face pack) ನಿಮ್ಮ ಚರ್ಮವನ್ನು ಒರಟಾಗಿಸಬಹುದು, ಆದ್ದರಿಂದ ಇದರ ನಂತರ, ಮಾಯಿಶ್ಚರೈಸರ್ ಹಚ್ಚೋದನ್ನು ಮರೆಯಬೇಡಿ. ನೀವು ಈ ಪ್ಯಾಕ್ ತಯಾರಿಸಿ ಅದನ್ನು 2-4 ದಿನಗಳವರೆಗೆ ಇಡಬಹುದು.
ಪಪ್ಪಾಯಿ ಮತ್ತು ಟೊಮೆಟೊ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್ (facepack) ಮುಖದ ಮೇಲಿನ ಕಲೆಗಳನ್ನು ನಿವಾರಿಸೋದು ಮಾತ್ರವಲ್ಲದೆ ಮುಖ ಹೊಳೆಯುವಂತೆ ಮಾಡುತ್ತೆ. ಇದನ್ನು ತಯಾರಿಸಲು, 7-8 ಕತ್ತರಿಸಿದ ಪಪ್ಪಾಯಿ ಮತ್ತು ಕತ್ತರಿಸಿದ ಟೊಮೆಟೊ ತೆಗೆದುಕೊಂಡು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ.
ಈಗ ಇದನ್ನು ಮುಖದ ಮೇಲೆ 15-20 ನಿಮಿಷಗಳ ಕಾಲ ಹಚ್ಚಿ. ನಂತರ ಅದನ್ನು ನೀರಿನಿಂದ ತೊಳೆಯಿರಿ. ನೀವು ಬಯಸಿದರೆ, ನೀವು ಅದಕ್ಕೆ ಜೇನುತುಪ್ಪ ಅಥವಾ ನಿಂಬೆ ರಸ ಸಹ ಸೇರಿಸಬಹುದು. ಇದರಿಂದ ಮುಖ ಹೆಚ್ಚು ಫ್ರೆಶ್ ಆಗಿರುತ್ತೆ, ಅಲ್ಲದೇ ನಿಮ್ಮ ಸೌಂದರ್ಯ ಹೆಚ್ಚಲು ಸಹಾಯ ಮಾಡುತ್ತೆ.