ಸೀರೆ ಉಡುವುದು ಅನೇಕ ಮಹಿಳೆಯರಿಗೆ ಇಷ್ಟವಾದ ವಿಷಯ. ಅದರಲ್ಲೂ ಪಟ್ಟು ಸೀರೆ ಅಥವಾ ಜರಿ ಸೀರೆ ತಮ್ಮನ್ನು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ ಎಂದು ಮಹಿಳೆಯರಿಗೆ ಚೆನ್ನಾಗಿ ತಿಳಿದಿದೆ. ಆದರೆ ಪಟ್ಟು ಸೀರೆಗಳನ್ನು ಸುರಕ್ಷಿತವಾಗಿಡುವುದು ಮತ್ತು ಹೊಸದರಂತೆ ಕಾಪಾಡುವುದು ದೊಡ್ಡ ಟಾಸ್ಕ್. ಅದನ್ನು ಸರಿಯಾಗಿ ನಿರ್ವಹಿಸಿದರೆ, ಎಷ್ಟೋ ವರ್ಷಗಳಾದರೂ ಹೊಸದರಂತೆ ಇರುತ್ತದೆ. ಈ ಲೇಖನದಲ್ಲಿ ಪಟ್ಟು ಸೀರೆಗಳನ್ನು ಹೊಸದರಂತೆ ನಿರ್ವಹಿಸುವುದಕ್ಕೆ ಟಿಪ್ಸ್‌ಗಳನ್ನು ನೋಡೋಣ
26
ಝರಿ ಸೀರೆಗಳನ್ನು ಇಡುವ ತಂತ್ರ:ನೀವು ಪಟ್ಟು ಸೀರೆಗಳನ್ನು ಯಾವಾಗಲೂ ಉಡುವುದಿಲ್ಲ. ಅದಕ್ಕಾಗಿ ತಿಂಗಳುಗಟ್ಟಲೆ ಒಂದೇ ಸ್ಥಳದಲ್ಲಿ ಹಾಗೆಯೇ ಇಡಬಾರದು. ಸುಮಾರು 3 ರಿಂದ 6 ತಿಂಗಳಿಗೊಮ್ಮೆ ಅದನ್ನು ಬೀರುವಿನಿಂದ ಹೊರತೆಗೆದು ಗಾಳಿಯಾಡುವಂತೆ ಮಾಡುವುದು ಅವಶ್ಯಕ. ಮನೆಯೊಳಗೆ ನೆರಳಿನಲ್ಲಿ ಒಣಗಿಸುವುದರಿಂದ ಅವು ತೇವಾಂಶದಿಂದ ಕೂಡಿರುವುದಿಲ್ಲ. ವಿಶೇಷವಾಗಿ ಅವುಗಳನ್ನು ಮತ್ತೆ ಮಡಚಿ ಹಳೆಯ ಮಡಿಕೆಗಳನ್ನು ಬದಲಾಯಿಸಿ ಇಡಬೇಕು.
36
ಕಾಟನ್ ಬ್ಯಾಗ್:ನೀವು ಸೀರೆಯನ್ನು ಮಡಚಿ ಹಾಗೆಯೇ ಬೀರುವಿನಲ್ಲಿಟ್ಟರೆ ಅದು ಬೇಗನೆ ಹಾಳಾಗಬಹುದು. ಪ್ಲಾಸ್ಟಿಕ್ ಸ್ಟೋರೇಜ್ ಕವರ್‌ನಲ್ಲಿಟ್ಟರೂ ಅದು ಸೀರೆಯನ್ನು ಹಾಳುಮಾಡಬಹುದು. ದೀರ್ಘಕಾಲದವರೆಗೆ ಪಟ್ಟು ಸೀರೆಯನ್ನು ಹೊಸದರಂತೆ ಇಡಬೇಕೆಂದರೆ ಮಲ್ ಮಲ್ ಬ್ಯಾಗ್ ಅಥವಾ ಕಾಟನ್ ಬ್ಯಾಗ್‌ನಲ್ಲಿ ಹಾಕಿಡಿ.
46
ನ್ಯಾಫ್ತಲೀನ್ ಉಂಡೆ ಬೇಡ:ಬೀರುವಿನಲ್ಲಿ ಹುಳುಗಳು ಬರದಂತೆ ತಡೆಯಲು, ಪರಿಮಳಕ್ಕಾಗಿ ನ್ಯಾಫ್ತಲೀನ್ ಉಂಡೆಗಳನ್ನು ಖರೀದಿಸಿ ಇಡುತ್ತೇವೆ. ಸಿಲ್ಕ್ ಸೀರೆ ಇಡುವಾಗ ಅದರಲ್ಲಿ ಪರಿಮಳಕ್ಕಾಗಿ ಇಡುವ ನ್ಯಾಫ್ತಲೀನ್ ಉಂಡೆಗಳು, ಪರ್ಫ್ಯೂಮ್ ಕವರ್‌ಗಳನ್ನು ತಪ್ಪಿಸಬೇಕು. ಇವು ಸೀರೆಯನ್ನು ಹಾಳು ಮಾಡಬಹುದು.
56
'ನೋ' ಪರ್ಫ್ಯೂಮ್:ನಾವು ಹೊರಗೆ ಹೋಗುವಾಗ ಪರಿಮಳಯುಕ್ತವಾಗಿರಬೇಕೆಂದು ಪರ್ಫ್ಯೂಮ್ ಹಾಕಿಕೊಳ್ಳುತ್ತೇವೆ. ತುಂಬಾ ಹೊತ್ತು ಆ ಪರಿಮಳ ಇರಬೇಕೆಂದು ಡ್ರೆಸ್ಸಿನ ಮೇಲೆ ಸಿಕ್ಕಾಪಟ್ಟೆ ಹೊಡೆದುಕೊಳ್ಳುವವರೂ ಇದ್ದಾರೆ. ಸಿಲ್ಕ್ ಸೀರೆಗಳನ್ನು ಉಡುವಾಗ ಈ ತಪ್ಪನ್ನು ಮಾಡಬಾರದು. ಸೀರೆಗೆ ಹತ್ತಿರದಲ್ಲಿ ಸ್ಪ್ರೇ ಮಾಡದೆ ದೂರ ನಿಂತು ಹೊಡೆಯುವುದು ಒಳ್ಳೆಯದು. ನಿಮ್ಮ ಸೀರೆಯಲ್ಲಿ ಸ್ಪ್ರೇ ಮಾಡದೆ ಮೊಣಕೈ ಮಡಚುವ ಭಾಗದಲ್ಲಿ, ಕುತ್ತಿಗೆಗೆ ಹೊಡೆದರೆ ತುಂಬಾ ಹೊತ್ತು ಪರಿಮಳ ಇರುತ್ತದೆ. ಸೀರೆಯಲ್ಲಿ ರಾಸಾಯನಿಕ ಬೆರೆತ ಪರ್ಫ್ಯೂಮ್ ಬಿದ್ದರೆ ಅದು ಹಾಳಾಗುತ್ತದೆ.
66
ಹೇಗೆ ಇಡಬೇಕು?: ಇತರ ಸೀರೆಗಳೊಂದಿಗೆ ಪಟ್ಟು ಸೀರೆಗಳನ್ನು ಒಂದರ ಮೇಲೊಂದರಂತೆ ಸೇರಿಸಿ ಜೋಡಿಸಿ ಇಡಬೇಕು. ಸಿಲ್ಕ್ ಸೀರೆಗಳಿಗೆಂದೇ ಒಂದು ಜಾಗವನ್ನು ಮೀಸಲಿಟ್ಟು ಅದರಲ್ಲಿ ಇಡಿ. ಸ್ವಲ್ಪ ಸ್ಥಳಾವಕಾಶದೊಂದಿಗೆ ಇಡುವುದು ಒಳ್ಳೆಯದು.