ಒಂದು ಹೆಸರು ಮಗುವಿನ (Baby names) ವ್ಯಕ್ತಿತ್ವದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಪೋಷಕರು ತಮ್ಮ ಮಕ್ಕಳಿಗೆ ಹೆಸರಿಡುವಾಗ ಸಾಕಷ್ಟು ಜಾಗರೂಕರಾಗಿರುತ್ತಾರೆ. ಹೆಚ್ಚಾಗಿ ಜನ ದೇವರ ಹೆಸರುಗಳನ್ನೇ ಇಡುತ್ತಾರೆ. ನೀವು ನಿಮ್ಮ ಹೆಣ್ಣು ಮಗುವಿಗೆ ಹೆಸರು ಹುಡುಕಾಡುತ್ತಿದ್ದಾರೆ. ತಾಯಿ ಸರಸ್ವತಿಯ ಹೆಸರನ್ನು ಮಗುವಿಗೆ ಇಡಿ.
27
ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ, ಖಂಡಿತವಾಗಿಯೂ ಈ ವಿಶಿಷ್ಟ ಹೆಸರಿನೊಂದಿಗೆ ತಾಯಿ ಸರಸ್ವತಿಯ (Goddess Saraswati) ಹೆಸರನ್ನು ಇರಿಸಿ. ಇಲ್ಲಿ ಆ ಹೆಸರುಗಳಿಗೆ ಇರಬಹುದಾದ ಮತ್ತಿತರ ಅರ್ಥವನ್ನು ಸಹ ನೀಡಲಾಗಿದೆ. ನಿಮಗಿಷ್ಟವಾದ ಹೆಸರುಗಳನ್ನು ಮಗುವಿಗೆ ಇಡಬಹುದು.
37
ಅನುರಾಧಾ : ಅನುರಾಧ ಅಂದ್ರೆ ಅದೃಷ್ಟ ದೇವತೆಯೂ ಆಗುತ್ತೆ. ಜೊತೆಗೆ ಸಂಪತ್ತನ್ನು ತರುವವಳು ಎನ್ನುವ ಅರ್ಥವೂ ಇದೆ. ಅಥವಾ ರಾಧೆಯನ್ನು ಅನುಸರಿಸುವವಳು ಎಂದಾಗುತ್ತೆ.
ಅನನ್ಯಾ : ಅದ್ವಿತೀಯಾ, ಇತರರಿಗಿಂತ ವಿಭಿನ್ನವಾಗಿರುವ, ಸರಿ ಸಾಟಿ ಇಲ್ಲದ ಅಥವಾ ಆಕರ್ಷಕವಾದ ಎನ್ನುವ ಅರ್ಥವಿದೆ.
ಅಮೃತಾ : ಅಮರವಾಗಿರುವ ಪಾನೀಯ, ದೇವತೆಗಳ ಪಾನೀಯವನ್ನು ಅಮೃತಾ ಎನ್ನುತ್ತಾರೆ.
47
ಅರ್ಪಿತಾ : ತನ್ನನ್ನು ತಾನು ಅರ್ಪಿಸುವುದು, ಸಮರ್ಪಿಸುವುದು ಅಥವಾ ಪ್ರಸ್ತುತ ಪಡಿಸೋದನ್ನು ಅರ್ಪಿತಾ ಎನ್ನುತ್ತಾರೆ.
ಆಭಾಸಿ : ಆಭಾಸಿ ಅನ್ನೋದು ಸರಸ್ವತಿಯ ಹೆಸರು ಕೂಡ ಹೌದು, ಜೊತೆಗೆ ರಮಣೀಯವಾದ, ಮನೋಹರವಾದ ಅನ್ನೋ ಅರ್ಥ ಕೂಡ ಇದೆ.
ಇಂದಿರಾ : ಕಾಂತಿ, ಶೋಭಿಸುವಂತದ್ದು, ಸುಂದರವಾದ ಎನ್ನುವ ಅರ್ಥ ಇದೆ. ಜೊತೆಗೆ ಲಕ್ಷ್ಮೀ ದೇವಿಯನ್ನು ಸಹ ಇಂದಿರಾ ಎನ್ನುತ್ತಾರೆ.
57
ಈಶ್ವರಿ : ಈಶ್ವರಿ ಅನ್ನೋದು ಒಂದು ಪವರ್ ಫುಲ್ ಆಗಿರುವ ಹೆಸರು. ಇದರ ಅರ್ಥ ದೇವಿ, ಜ್ಞಾನ, ಶಕ್ತಿ, ಕರುಣೆ, ಪಾರ್ವತಿ, ಲಕ್ಷ್ಮೀ , ದುರ್ಗಾ ದೇವಿಗೂ ಈಶ್ವರಿ ಎನ್ನುತ್ತಾರೆ.
ಉಮಾ : ಸರಸ್ವತಿ ಮಾತ್ರವಲ್ಲ, ಪಾರ್ವತಿ ಹಾಗೂ ದುರ್ಗಾ ದೇವಿಗೂ ಉಮಾ, ಉಮಾ ಮಹೇಶ್ವರಿ ಎನ್ನುತ್ತಾರೆ.
ರಿಚಾ : ರಿಚಾ ಅನ್ನೋದಕ್ಕೆ ಮತ್ತೊಂದು ಪವರ್ ಫುಲ್ ಅರ್ಥ ಅಂದ್ರೆ ಪದ್ಯದಲ್ಲಿ ರಚಿತವಾಗಿರುವ ಮಂತ್ರ, ಅಥವಾ ಶ್ಲೋಕ ಎಂದು.
67
ಏಕಾಕ್ಷರಿ : ಯಾವುದೇ ಭಾಷೆಯಲ್ಲಿ ಒಂದೇ ಅಕ್ಷರದಲ್ಲಿ ಬರೆದಂತಹ ಶಬ್ಧವನ್ನು ಏಕಾಕ್ಷರಿ ಎನ್ನುತ್ತಾರೆ. ತಾಯಿ ಸರಸ್ವತಿಗೂ ಏಕಾಕ್ಷರಿ ಎನ್ನುತ್ತಾರೆ.
ಅಭಾ : ಶೋಭೆ, ಕಾಂತಿ, ಎಂದು ಅರ್ಥ. ಇದು ದೇವರಿಂದ ಹೊರ ಬರುವಂಥ ಕಾಂತಿಯನ್ನು ಸೂಚಿಸುತ್ತೆ.
ಕಲಾ : ಚಿತ್ರ, ಕಲೆ, ನಾಟ್ಯ ಇವೆಲ್ಲವನ್ನೂ ಸೂಚಿಸುವುದೇ ಕಲಾ ಎನ್ನುವ ಹೆಸರು. ಸರಸ್ವತಿ ಕೂಡ ಕಲಾವಿದೆಯೇ ಅಲ್ವಾ?
77
ಕಲ್ಪನಾ : ಕಲ್ಪನಾ ಎಂದರೆ ಒಂದು ಕಲ್ಪನೆಯನ್ನು ರಚಿಸುವುದು ಅಥವಾ ಮಾನಸಿಕ ಚಿತ್ರಣವನ್ನು ರೂಪಿಸುವುದು. ಇದು ಭಾವನೆಗಳು, ಆಲೋಚನೆಗಳು ಮತ್ತು ಸಂವೇದನೆಗಳ ರೂಪವಾಗಿದೆ.
ಗಾಯತ್ರಿ : ಋಗ್ವೇದದಲ್ಲಿ ಬರುವಂಥಹ ಮಂತ್ರದ ಹೆಸರು. ಇದು ದೇವಿಯ ಹೆಸರೂ ಕೂಡ ಹೌದು. ಮಧುರ ವಾಣಿಯ ದೇವಿಯೇ ಗಾಯತ್ರಿ.
ದೀಪಿಕಾ : ಸಣ್ಣದಾದ ದೀಪವನ್ನು ದೀಪಿಕಾ ಎನ್ನುತ್ತಾರೆ. ತಾಯಿ ಸರಸ್ವತಿಯನ್ನು ಸಹ ದೀಪಿಕಾ ಎನ್ನುವ ಹೆಸರಿನಿಂದ ಕರೆಯುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.