Stain removal tips: ಬಟ್ಟೆಯಿಂದ ಕಲೆ ತೆಗೆದುಹಾಕಲು ಜನರು ವಿವಿಧ ಟಿಪ್ಸ್ ಟ್ರೈ ಮಾಡ್ತಾರೆ. ದುಬಾರಿ ಡಿಟರ್ಜೆಂಟ್ ಸಹ ಬಳಸುತ್ತಾರೆ. ಆದರೆ ಕಲೆಗಳು ಸಂಪೂರ್ಣವಾಗಿ ಹೊರಬರುವುದಿಲ್ಲ. ಆದ್ದರಿಂದ ಬಟ್ಟೆಗಳಿಂದ ಮೊಂಡುತನದ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬೇಕೆಂದರೆ ಈ ಮನೆಮದ್ದುಗಳನ್ನ ಟ್ರೈ ಮಾಡಿ..
ಬಟ್ಟೆಗಳ ಮೇಲೆ ಯಾವುದೇ ಕಲೆಯಾದ್ರೂ ಅದನ್ನ ಮಾಮೂಲಿ ಡಿಟರ್ಜೆಂಟ್ ಅಥವಾ ಸೋಪು ಉಪಯೋಗಿಸಿ ತೆಗೆಯುವುದು ಸ್ವಲ್ಪ ಕಷ್ಟವೇ. ಈಗಂತೂ ಮಾರುಕಟ್ಟೆಯಲ್ಲಿ ಬಟ್ಟೆಗಳ ಮೇಲಿನ ಕಲೆ ತೆಗೆಯಲೆಂದೇ ಕೆಲವು ಲಿಕ್ವಿಡ್‌ಗಳು ಬಂದಿವೆ. ಇದರಲ್ಲಿ ಕೆಲವು ಮಾತ್ರ ಒಳ್ಳೆಯ ಫಲಿತಾಂಶ ನೀಡಿದರೂ, ಮತ್ತೆ ಕೆಲವನ್ನು ದುಬಾರಿ ದುಡ್ಡು ಕೊಟ್ಟು ಕೊಳ್ಳುವುದು ಸ್ವಲ್ಪ ಕಷ್ಟವೇ. ಹಾಗಾಗಿ ನಾವಿಂದು ಯಾವ ಕಲೆಗಳಾದ್ರೆ ಯಾವ ಮನೆಮದ್ದು ಸಹಾಯ ಮಾಡುತ್ತವೆ?, ಈ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವುದು ಹೇಗೆಂದು ನೋಡೋಣ..
26
ಚಹಾ ಅಥವಾ ಕಾಫಿ ಕಲೆಗೆ
ಬಟ್ಟೆಯು ಬಿಳಿಯಾಗಿದ್ದರಂತೂ ಯಾವುದೇ ಕಲೆ ಎದ್ದು ಕಾಣುತ್ತದೆ. ಒಂದು ವೇಳೆ ನೀವು ಮನೆಯಲ್ಲಿದ್ದರೆ ಕಲೆಯಾದ ಜಾಗದ ಮೇಲೆ ತಕ್ಷಣ ತಣ್ಣೀರು ಸುರಿಯಿರಿ. ನಂತರ ಕಲೆಯ ಮೇಲೆ ಅಡುಗೆ ಸೋಡಾ ಸಿಂಪಡಿಸಿ ನಿಧಾನವಾಗಿ ಉಜ್ಜಿ. 15-20 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಒಂದು ವೇಳೆ ಹಳೆಯ ಕಲೆಗಳಿದ್ದರೆ ವಿನೆಗರ್ ಮತ್ತು ನೀರಿನ ದ್ರಾವಣವನ್ನು ಬಳಸಿ.
36
ಎಣ್ಣೆ ಅಥವಾ ಗ್ರೀಸ್ ಕಲೆ
ಈ ಕಲೆಯನ್ನು ತೆಗೆದುಹಾಕಲು ತಕ್ಷಣ ಟಾಲ್ಕಮ್ ಪೌಡರ್ ಅಥವಾ ಕಾರ್ನ್‌ಫ್ಲೋರ್ ಅನ್ನು ಕಲೆಯ ಮೇಲೆ ಸಿಂಪಡಿಸಿ. ಇದು ಎಣ್ಣೆಯನ್ನು ಹೀರಿಕೊಳ್ಳುತ್ತದೆ. 10 ನಿಮಿಷಗಳ ನಂತರ ಅದನ್ನು ಸ್ವಚ್ಛಗೊಳಿಸಿ. ನಂತರ ಲಿಕ್ವಿಡ್ ಡಿಶ್ ಸೋಪ್ ಹಚ್ಚಿ ತೊಳೆಯಿರಿ. ಎಣ್ಣೆ ತೆಗೆಯಲೆಂದೇ ಕೆಲವು ನಿರ್ದಿಷ್ಟ ಡಿಶ್ ಸೋಪ್‌ಗಳಿವೆ.
ಬಿಳಿ ಶರ್ಟ್‌ಗಳ ಕಾಲರ್ ಅಥವಾ ತೋಳುಗಳ ಮೇಲೆ ಹಳದಿ ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳನ್ನ ತೆಗೆದುಹಾಕಲು ನಿಂಬೆ ರಸದೊಂದಿಗೆ ಸ್ವಲ್ಪ ಉಪ್ಪು ಬೆರೆಸಿ ಕಲೆಯ ಮೇಲೆ ಸಿಂಪಡಿಸಿ ಉಜ್ಜಿ. ಅರ್ಧ ಗಂಟೆ ಬಿಸಿಲಿನಲ್ಲಿ ಬಿಡಿ, ನಂತರ ಎಂದಿನಂತೆ ತೊಳೆಯಿರಿ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ನೈಸರ್ಗಿಕ ಬ್ಲೀಚ್ ಆಗಿ ಕಾರ್ಯನಿರ್ವಹಿಸುತ್ತದೆ.
56
ಶಾಯಿ ಕಲೆಗಳು
ಪೆನ್‌ನ ಇಂಕ್ ಸೋರಿಕೆಯೂ ಸಾಮಾನ್ಯ ಸಮಸ್ಯೆಯಾಗಿದೆ. ಕಲೆಯಾದ ಪ್ರದೇಶದ ಕೆಳಗೆ ಟಿಶ್ಯೂ ಪೇಪರ್ ಇರಿಸಿ ಮತ್ತು ಕಲೆಯ ಮೇಲೆ ಹ್ಯಾಂಡ್ ಸ್ಯಾನಿಟೈಸರ್ ಅಥವಾ ಆಲ್ಕೋಹಾಲ್ ಹಾಕಿ ಉಜ್ಜಿ. ಶಾಯಿ ಹರಡುತ್ತದೆ. ಆಗ ಅದನ್ನು ಹತ್ತಿ ಸ್ವ್ಯಾಬ್‌ನಿಂದ ಒರೆಸಿ. ನಂತರ ಡಿಟರ್ಜೆಂಟ್‌ನಿಂದ ತೊಳೆಯಿರಿ. ಬಿಳಿ ಟೂತ್‌ಪೇಸ್ಟ್ ಅನ್ನು ಹಚ್ಚಿ ಉಜ್ಜುವುದು ಸಹ ಪ್ರಯೋಜನಕಾರಿಯಾಗಿದೆ.
66
ಅರಿಶಿನ ಕಲೆಗಳು
ವಿಶೇಷವಾಗಿ ಅರಿಶಿನ ಕಲೆಗಳನ್ನು ಅತ್ಯಂತ ಮೊಂಡುತನದಿಂದ ಕೂಡಿದ ಕಲೆಗಳೆಂದು ಪರಿಗಣಿಸಲಾಗುತ್ತದೆ. ಈ ಕಲೆಯ ಮೇಲೆ ತಣ್ಣನೆಯ ಹಾಲನ್ನು ಹಾಕಿ ಅಥವಾ ಡಿಟರ್ಜೆಂಟ್‌ನ ದಪ್ಪ ಪೇಸ್ಟ್ ಮಾಡಿ ಅದನ್ನು ಹಚ್ಚಿ. ತೊಳೆದ ನಂತರ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಬಟ್ಟೆಗಳನ್ನು ಒಣಗಿಸಿ. ಅರಿಶಿನ ಬಣ್ಣವನ್ನು ತೆಗೆದುಹಾಕುವಲ್ಲಿ ಸೂರ್ಯನ ಬೆಳಕು ಅದ್ಭುತಗಳನ್ನೇ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.