ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಈ ಸುಳ್ಳು ನಂಬಲೇಬೇಡಿ!

First Published | May 28, 2023, 2:01 PM IST

ಮುಟ್ಟಿನ ಸಮಯದಲ್ಲಿ ನೀವು ವ್ಯಾಯಾಮ ಮಾಡಬಾರದು ಎಂದು ಹಲವರು ಹೇಳಿರೋದನ್ನು ನೀವು ಕೇಳಿರಬಹುದು ಅಲ್ವಾ? ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಮಿಥ್ಯೆಗಳಿವೆ, ಹೆಚ್ಚಿನ ಮಹಿಳೆಯರು ಅದನ್ನು ನಂಬುತ್ತಾರೆ ಆದರೆ ಅವು ನಿಜವಲ್ಲ. ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.  

ಮಹಿಳೆಯರ ಆರೋಗ್ಯಕ್ಕೆ(Women health) ಸಂಬಂಧಿಸಿದ ಅನೇಕ ಮಿಥ್ಯೆಗಳಿವೆ, ಅದನ್ನು ಹೆಚ್ಚಿನ ಮಹಿಳೆಯರು ನಿಜವೆಂದು ನಂಬುತ್ತಾರೆ. ಇದಕ್ಕೆ ಒಂದು ಕಾರಣವೆಂದರೆ ಮಹಿಳೆಯರು ಯಾವಾಗಲೂ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಇಂದಿಗೂ ಬಹಿರಂಗವಾಗಿ ಮಾತನಾಡೋದಿಲ್ಲ ಮತ್ತು ಅದಕ್ಕಾಗಿಯೇ ಮಹಿಳೆಯರು ಅನೇಕ ವಿಷಯಗಳನ್ನು  ನಂಬಿ ಬಿಡುತ್ತಾರೆ.

ಋತುಚಕ್ರಕ್ಕೆ(Periods) ಸಂಬಂಧಿಸಿದ ಅನೇಕ ವಿಷಯಗಳಿವೆ, ಅವುಗಳನ್ನು ಮಹಿಳೆಯರು ಇನ್ನೂ ಅನುಸರಿಸುತ್ತಾರೆ, ಆದರೆ ವಾಸ್ತವದಲ್ಲಿ ಅವು ತಪ್ಪು. ಇಲ್ಲಿ  ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಮಿಥ್ಯೆಗಳ ಬಗ್ಗೆ ಹೇಳಲಾಗಿದೆ, ಅದು ನಿಜವಾಗಿಯೂ ತಪ್ಪು. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
 

Tap to resize

ಮುಟ್ಟಿನ ಸಮಯದಲ್ಲಿ ವ್ಯಾಯಾಮ (Exercise) ಮಾಡಬಾರದು: ತಜ್ಞರ ಪ್ರಕಾರ, ಇದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ, ಆದರೆ ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡೋದರಿಂದ ನೋವು, ಉಬ್ಬರ, ಖಿನ್ನತೆ ಮತ್ತು ಕಿರಿಕಿರಿಗೆ ಪರಿಹಾರ ಸಿಗುತ್ತೆ. ಆದರೆ, ಈ ಸಮಯದಲ್ಲಿ ಹೆಚ್ಚಿನ ತೀವ್ರತೆಯ ವ್ಯಾಯಾಮಗಳನ್ನು ಮಾಡಬಾರದು.

ಮುಟ್ಟಿನ ಸಮಯದಲ್ಲಿ ನೀವು ವ್ಯಾಯಾಮ ಮಾಡಲು ಬಯಸುತ್ತೀರೋ ಇಲ್ಲವೋ, ಅದು ನಿಮ್ಮ ಆರಾಮವನ್ನು(Rest) ಅವಲಂಬಿಸಿರುತ್ತೆ. ನೀವು ಹೆಚ್ಚು ದುರ್ಬಲ ಮತ್ತು ದಣಿವನ್ನು ಅನುಭವಿಸುತ್ತಿದ್ದರೆ, ನೀವು ಅದನ್ನು ತಪ್ಪಿಸಬಹುದು.
 

ಗರ್ಭಿಣಿಯರು(Pregnant) ತಮ್ಮ ಆಹಾರವನ್ನು ದ್ವಿಗುಣಗೊಳಿಸಬೇಕು: ಗರ್ಭಿಣಿಯರು ತಮ್ಮ ಆಹಾರವನ್ನು ದ್ವಿಗುಣಗೊಳಿಸಬೇಕು ಮತ್ತು ಈ ಸಮಯದಲ್ಲಿ ಅವರು ಇಬ್ಬರು ವ್ಯಕ್ತಿಗಳ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ಹೆಚ್ಚಾಗಿ ಸಲಹೆ ನೀಡಲಾಗುತ್ತೆ. ತಜ್ಞರ ಪ್ರಕಾರ, ಇದು ನಿಜವಲ್ಲ.

ಮಗುವಿನ ಪೌಷ್ಠಿಕಾಂಶವು ಗರ್ಭಿಣಿ ಮಹಿಳೆಯ ಆಹಾರವನ್ನು ಅವಲಂಬಿಸಿರುತ್ತೆ ಎಂಬುದು ನಿಜ, ಆದರೆ ಇದರರ್ಥ ನೀವು ನಿಮ್ಮ ಆಹಾರವನ್ನು(Food) ದ್ವಿಗುಣಗೊಳಿಸಬೇಕು ಎಂದಲ್ಲ. ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಗರ್ಭಿಣಿಯರು ಎಷ್ಟು ತಿನ್ನಬೇಕು ಎಂಬುದು ಅವರ ತೂಕ ಮತ್ತು ಪೋಷಕಾಂಶಗಳಿಗಾಗಿ ದೇಹದ ಅಗತ್ಯಗಳನ್ನು ಅವಲಂಬಿಸಿರುತ್ತೆ . 

ಮುಟ್ಟಿನ ಸಮಯದಲ್ಲಿ ಸಂಭೋಗವು ಗರ್ಭಧಾರಣೆಗೆ ಕಾರಣವಾಗೋದಿಲ್ಲ: ಮಹಿಳೆಯರು ಋತುಚಕ್ರದ ಸಮಯದಲ್ಲಿದ್ದರೆ ಮತ್ತು ಈ ಸಮಯದಲ್ಲಿ ಅವರು ದೈಹಿಕ ಸಂಬಂಧವನ್ನು ಹೊಂದಿದ್ದರೆ, ಅವರು ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತೆ. ಋತುಚಕ್ರದ ಸಮಯದಲ್ಲಿ ದೈಹಿಕ ಸಂಬಂಧವನ್ನು(Physical relationship) ಹೊಂದುವುದು ಗರ್ಭಿಣಿಯಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತೆ, ಆದರೆ ಈ ಸಮಯದಲ್ಲಿ ನೀವು ಗರ್ಭಿಣಿಯಾಗಬಹುದು. ಆ ಸಾಧ್ಯತೆ ಕೂಡಾ ಇದೆ.

ನಿಮ್ಮ ಋತುಚಕ್ರವು ಅನಿಯಮಿತವಾಗಿದ್ದರೆ, ನೀವು ದೀರ್ಘ ರಕ್ತದ ಹರಿವನ್ನು ಹೊಂದಿದ್ದರೆ ಅಥವಾ ಋತುಚಕ್ರವು ಚಿಕ್ಕದಾಗಿದ್ದರೆ, ಅದು ನಿಮ್ಮ ಫಲವತ್ತತೆಯ(Fertility) ಮೇಲೆ ಪರಿಣಾಮ ಬೀರುತ್ತೆ. ಹಾಗಾಗಿ ಪ್ರತಿ ಮಹಿಳೆ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.  

Latest Videos

click me!