ಹಾಗಿದ್ರೆ ಸೋಂಕಿನ ಸಂದರ್ಭದಲ್ಲಿ ಏನು ಮಾಡಬೇಕು?
ಹೆರಿಗೆಯ ನಂತರದ ನೈರ್ಮಲ್ಯ ಮತ್ತು ಸ್ವಚ್ಛತೆಗೆ ವಿಶೇಷ ಗಮನದ ಅಗತ್ಯವಿದೆ. ವಿಶೇಷವಾಗಿ ಯೋನಿ ಮತ್ತು ಗುದದ್ವಾರದ ಸುತ್ತಲಿನ ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅವಶ್ಯಕ.
ಪೆರಿನಿಯಲ್ ಪ್ರದೇಶವನ್ನು ಸ್ಪರ್ಶಿಸುವ ಮೊದಲು ನಿಮ್ಮ ಕೈಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ.
ಸಾಕಷ್ಟು ನೀರು ಕುಡಿಯುವ ಮೂಲಕ ನಿಮ್ಮನ್ನು ಹೈಡ್ರೇಟ್ (hydrate) ಆಗಿಡಲು ಪ್ರಯತ್ನಿಸಿ. ಇದು ಮೂತ್ರಕೋಶ ಮತ್ತು ಯೋನಿ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ, ಏಕೆಂದರೆ ನೀರು ದೇಹದಿಂದ ವಿಷವನ್ನು ಹೊರಹಾಕುತ್ತದೆ, ಜೊತೆಗೆ ಸೋಂಕನ್ನು ಉಂಟುಮಾಡುವ ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊರಹಾಕುತ್ತದೆ.