ಯುಪಿಎಸ್‌ಸಿ ಪರೀಕ್ಷೆಯಲ್ಲಿ 286 rank ಗಳಿಸಿದ ಅಂದ ಹುಡುಗಿಯ ಯಶೊಗಾಥೆ

First Published Aug 13, 2020, 5:50 PM IST

ಉತ್ಸಾಹ ಮತ್ತು ಛಲವಿದ್ದರೆ ಗುರಿ  ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ಉದ್ದೇಶಗಳು ಬಲವಾಗಿರಬೇಕು, ತಮಿಳುನಾಡಿನ ಪೂರ್ಣ ಸುಂದರಿ  ಎಂಬ ಹುಡುಗಿ ಉದಾಹರಣೆಯಾಗಿದ್ದಾರೆ  ಕಣ್ಣಿನ ದೃಷ್ಟಿ ಇಲ್ಲದಿದ್ದರೂ ಕೇವಲ ಪುಸ್ತಕಗಳನ್ನು ಕೇಳುವ ಮೂಲಕ  ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಪೂರ್ಣ ಸುಂದರಿ ಯುಪಿಎಸ್‌ಸಿಯಲ್ಲಿ 286 ನೇ ರ್ಯಾಂಕ್ ಪಡೆದು  ದೇಶದ ಯುವಜನರಿಗೆ ಒಂದು ದೃಷ್ಟಿಯಾಗಿದ್ದಾರೆ,  ಈಕೆಯ ಯಶಸ್ಸಿನ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವಾಸ್ತವವಾಗಿ, ತಮಿಳುನಾಡಿನ ಮಧುರೈ ಮೂಲದ 25 ವರ್ಷದ ಪೂರ್ಣಾಳಿಗೆ ಕಣ್ಣಿನ ದೃಷ್ಟಿ ಇಲ್ಲ. ಈ ಗುರಿಯನ್ನು ತಲುಪಲು ಶ್ರಮಿಸಿದ್ದಾಳೆ. ಅನೇಕ ಅಡೆತಡೆಗಳನ್ನು ಎದುರಿಸಿದ್ದಾಳೆ.
undefined
ಇಂದು ಪೂರ್ಣಾ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ 2019 ರಲ್ಲಿ 286 ನೇ ರ್ಯಾಂಕ್ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ. ನಾಗರಿಕ ಸೇವೆಗಳಲ್ಲಿ ಇದು ಅವರ ನಾಲ್ಕನೇ ಪ್ರಯತ್ನ ಎಂದು ಪೂರ್ಣಾ ಹೇಳಿದರು.
undefined
2016 ರಿಂದ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನನಗೆ ಕಣ್ಣು ಕಾಣುವುದಿಲ್ಲ, ಆದರೂ ನಾನು ಬಿಟ್ಟುಕೊಡಲಿಲ್ಲ ಮತ್ತು ಎಷ್ಟೇ ಕಷ್ಟವಾದರೂ ಐಎಎಸ್ ಕೆಲಸವನ್ನೇ ಮಾಡುತ್ತೇನೆ ಎಂದು ನಾನು ನಿರ್ಧರಿಸಿದೆ. ನಾನು ಪುಸ್ತಕಗಳನ್ನು ಕೇಳುತ್ತಿದ್ದೆ ಮತ್ತು ಆಡಿಯೊ ಮೂಲಕ ತಯಾರಿ ನೆಡೆಸಿದೆ' ಎಂದು ಪೂರ್ಣಾ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದರು.
undefined
ಪೂರ್ಣಾ ತಂದೆ ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ತಾಯಿ ಗೃಹಿಣಿ, ಅವರ ತಂದೆ ಮಗಳು ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಇದಕ್ಕಾಗಿ ಅವರು ನನ್ನನ್ನು ಎಲ್ಲ ರೀತಿಯಲ್ಲಿ ಸಿದ್ಧಪಡಿಸಿದರು ಮತ್ತು ನನ್ನ ತಯಾರಿಯನ್ನು ಪ್ರಾರಂಭಿಸಿದರು.
undefined
ಇಂದು, ಪೂರ್ಣಾಳಿಗೆ ವಿಶ್‌ ಮಾಡಲು ಸಾಕಷ್ಟು ಜನರು ಬರುತ್ತಿದ್ದಾರೆ ಎಲ್ಲರೂ ಆಕೆಯನ್ನು ರಿಯಲ್‌ ಲೈಫ್‌ ಹೀರೊ ಎಂದು ಬಣ್ಣಿಸುತ್ತಿದ್ದಾರೆ. ಪೂರ್ಣಾ ತನ್ನ ಯಶಸ್ಸು ಪೋಷಕರಿಗೆ ಸಲ್ಲುತ್ತದೆ ಎನ್ನುತ್ತಾಳೆ.
undefined
ಪೂರ್ಣಾ ಶಾಲಾ ಶಿಕ್ಷಣದ ನಂತರ ಚೆನ್ನೈನಲ್ಲಿ ಕಾಲೇಜು ಮುಗಿಸಿದರು. ಕಾಲೇಜಿನಲ್ಲಿ ತಮ್ಮ ಪ್ರಾಧ್ಯಾಪಕರು ಕಲಿಯಲು ಸಹಾಯ ಮಾಡಿದರು. ಇಷ್ಟೇ ಅಲ್ಲ, ನಾಗರಿಕ ಸೇವೆಗಳ ಪರೀಕ್ಷೆಗೆ ಸಿದ್ಧತೆಗಾಗಿ, ನನ್ನ ಉಪಯುಕ್ತತೆಗೆ ಅನುಗುಣವಾಗಿ ಕಾಲೇಜು ಗ್ರಂಥಾಲಯವನ್ನು ಸಿದ್ಧಪಡಿಸಿದೆ.
undefined
ನಂತರ ನಾನು ಚೆನ್ನೈನ ಮನಿದಾ ನೇಯಮ್ ಸಂಸ್ಥೆಗೆ ಬಂದೆ, ನನಗೆ ಸಹಾಯ ಮಾಡಿದರು. ಸರ್ಕಾರಿ ಉದ್ಯೋಗಗಳಲ್ಲಿರುವ ನನ್ನ ಅನೇಕ ಸ್ನೇಹಿತರು, ಅವರು ಯುಪಿಎಸ್‌ಸಿ ತಯಾರಿಗಾಗಿ ಮೆಟಿರಿಯಲ್‌ ಸಂಗ್ರಹಿಸಿ ಆಡಿಯೋ ತಯಾರಿಸಿದರು ಎಂದಿದ್ದಾಳೆ ಪೂರ್ಣಾ ಸುಂದರಿ.
undefined
click me!