ಮಾಜಿ ವಿಶ್ವ ಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್ ಅಕ್ಟೋಬರ್ 13 ರಂದು ನಿಧನರಾದರು. ಆಕೆಗೆ ಕೇವಲ 26 ವರ್ಷ. 2015ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಶೆರಿಕಾ ಉರುಗ್ವೆಯನ್ನು ಪ್ರತಿನಿಧಿಸಿದ್ದರು.
ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಶೆರಿಕಾ ಎರಡು ವರ್ಷಗಳಿಂದ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಮತ್ತು ಇದರಿಂದಾಗಿ ಅವರು ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು.
ಈಗ ಚಿಕ್ಕ ವಯಸ್ಸಿನಲ್ಲೇ ಅವರ ನಿಧನದಿಂದಾಗಿ ಜನರು ದುಃಖ ವ್ಯಕ್ತಪಡಿಸಿದರು. ಶೆರಿಕಾ ಡಿ ಅರ್ಮಾಸ್ ಅವರ ಸಹೋದರ ಮಾಯಕ್ ಡಿ ಅರ್ಮಾಸ್ ಅವರು ತಮ್ಮ ಸಹೋದರಿಗೆ ಗೌರವ ಸಲ್ಲಿಸುವ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಎಂದೆಂದಿಗೂ ಎತ್ತರಕ್ಕೆ ಹಾರ್ತಾ ಇರು ನನ್ನ ಚಿಕ್ಕ ಸಹೋದರಿ. ಅವಳು ಈ ಜಗತ್ತನ್ನು ಚೆನ್ನಾಗಿ ಅರ್ಥಮಾಡಿಕೊಂಡಳು. ನನ್ನ ಜೀವನದಲ್ಲಿ ನಾನು ಭೇಟಿಯಾದ ಅತ್ಯಂತ ಸುಂದರ ಮಹಿಳೆಯರಲ್ಲಿ ಅವಳು ಒಬ್ಬಳು' ಎಂದು ಆಕೆಯ ಸಹೋದರ ಬರೆದಿದ್ದಾರೆ.
'ನಾನು ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನನಗೆ ನೀಡಿದ ಬೆಂಬಲಕ್ಕಾಗಿ ಮಾತ್ರವಲ್ಲ. ನಾನು ಎಷ್ಟು ಬೆಳೆಯಬೇಕೆಂದು ನೀವು ಬಯಸಿದ್ದೀರಿ, ನಾವು ಹಂಚಿಕೊಂಡ ಪ್ರೀತಿ, ಸಂತೋಷ ಇಂದಿಗೂ ನನ್ನೊಂದಿಗೆ ಇದೆ' ಎಂದು 2021 ರ ಮಿಸ್ ಉರುಗ್ವೆ ಆಗಿರುವ ಲೋಲಾ ಡಿ ಲಾಸ್ ಸ್ಯಾಂಟೋಸ್ ಅವರು ಶೆರಿಕಾ ಡಿ ಅರ್ಮಾಸ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
2015ರಲ್ಲಿ ಚೀನಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಶೆರಿಕಾ ಡಿ ಅರ್ಮಾಸ್ ಟಾಪ್ 30ರಲ್ಲಿ ಇರಲಿಲ್ಲ. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಕೇವಲ ಆರು 18 ವರ್ಷ ವಯಸ್ಸಿನ ಹುಡುಗಿಯರಲ್ಲಿ ಅವರು ಒಬ್ಬರಾಗಿದ್ದರು.
ಶೆರಿಕಾ ತನ್ನದೇ ಆದ ಮೇಕಪ್ ಲೈನ್ ಅನ್ನು ಪ್ರಾರಂಭಿಸಿದರು ಮತ್ತು ಶೇ ಡಿ ಅರ್ಮಾಸ್ ಸ್ಟುಡಿಯೊ ತೆರೆದರು, ಅಲ್ಲಿ ಕೂದಲು ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳು ಲಭ್ಯವಿವೆ.