Pregnancy Food: ಗರ್ಭಾವಸ್ಥೆಯಲ್ಲಿ ಗಸಗಸೆ ಬೀಜ ತಿಂದರೆ ಏನಾಗುತ್ತದೆ?

First Published Nov 18, 2021, 1:52 PM IST

ಗಸಗಸೆ ಬೀಜ (poppy seeds) ಅನೇಕ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಅವು ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುವ ಸಸ್ಯದ ಬೀಜಗಳಾಗಿವೆ. ಆದರೆ ಮಹಿಳೆಯರು ಇದನ್ನು ಗರ್ಭಾವಸ್ಥೆಯಲ್ಲಿ ತಿನ್ನಬೇಕೆ ಅಥವಾ ಬೇಡವೇ ಎಂಬ ಬಗ್ಗೆ  ಗೊಂದಲಕ್ಕೊಳಗಾಗುತ್ತಾರೆ. ಯಾಕೆಂದರೆ ಇದರಿಂದ ಆರೋಗ್ಯಕ್ಕೆ ಅಪಾಯವಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಗರ್ಭಿಣಿಯರು ಇದನ್ನು ಸೇವಿಸುತ್ತಾರೆ ಎನ್ನುತ್ತಾರೆ. 

ಗರ್ಭಾವಸ್ಥೆಯಲ್ಲಿ (Pregnancy) ಆಹಾರದಲ್ಲಿ ಗಸಗಸೆ ಬೀಜಗಳನ್ನು ಸೇರಿಸುವುದರಿಂದ ಹಾನಿಯಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಆದಾಗ್ಯೂ, ತಜ್ಞರು ಅದನ್ನು ನಂಬುವುದಿಲ್ಲ. ತಜ್ಞರ ಪ್ರಕಾರ, ಮಗುವಿನ ಬೆಳವಣಿಗೆಗೆ ಪೌಷ್ಟಿಕ ವಸ್ತುಗಳು ವಿಶೇಷವಾಗಿ ಬೇಕಾಗುತ್ತವೆ, ಆದ್ದರಿಂದ ಗಸಗಸೆ ಬೀಜಗಳನ್ನು ಸೇವಿಸಬಹುದು, ಆದರೆ ಹೆಚ್ಚಿನ ಪ್ರಮಾಣದಲ್ಲಿ ಅಲ್ಲ. 

ಗಸಗಸೆ ಬೀಜಗಳ ಪ್ರಯೋಜನಗಳು (benefits of poppy seeds): ಗಸಗಸೆ ಬೀಜಗಳಿಂದ ಎಣ್ಣೆಯನ್ನು ಸಹ ಹೊರತೆಗೆಯಲಾಗುತ್ತದೆ ಮತ್ತು ಅನೇಕ ರೋಗಗಳನ್ನು ಗುಣಪಡಿಸಲು ಪರಿಣಾಮಕಾರಿಯಾಗಿದೆ. ಗಸಗಸೆ ಬೀಜಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ-6, ಫೈಬರ್, ಪ್ರೋಟೀನ್, ಥೈಮಿನ್, ವಿಟಮಿನ್ ಬಿ, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ಇರುವ ಫೈಟೋಕೆಮಿಕಲ್ ಗಳು ಕಂಡುಬರುತ್ತವೆ.

ಗರ್ಭಾವಸ್ಥೆಯಲ್ಲಿ ಇದರ ಸೇವನೆಯು ಸುಮಾರು 50% ಸಾರಭೂತ ತೈಲಗಳು ಮತ್ತು ಕೊಬ್ಬುಗಳನ್ನು ಪೋಷಿಸುತ್ತದೆ, ಇದು ಗರ್ಭಿಣಿ ಮಹಿಳೆ ಮತ್ತು  ಹುಟ್ಟಲಿರುವ ಮಗುವಿನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಆದುದರಿಂದ ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. 

ಗಸಗಸೆ ಬೀಜಗಳಲ್ಲಿ ಓಲಿಕ್ ಮತ್ತು ಲಿನೋಲಿಕ್ ಆಮ್ಲವಿದೆ, ಇದು ಒಂದು ರೀತಿಯ ಅಪರ್ಯಾಪ್ತ ಕೊಬ್ಬು. ಇದು ಉತ್ತಮ ಕೊಲೆಸ್ಟ್ರಾಲ್ (cholestrol) ಹೆಚ್ಚಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯದ ಅರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೆ ಗರ್ಭಿಣಿ ಮಹಿಳೆಯರು ಆರೋಗ್ಯದಿಂದಿರಲು ಸಹಾಯ ಮಾಡುತ್ತೆ. 

ಗಸಗಸೆ ಬೀಜಗಳ ಸೇವನೆಯಿಂದ ಹೃದಯ ರೋಗಗಳ  (heart problem) ಅಪಾಯವೂ ಕಡಿಮೆಯಾಗುತ್ತದೆ. ಗರ್ಭಧಾರಣೆಯು ಹೆಚ್ಚಾಗಿ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗಸಗಸೆ ಬೀಜಗಳಲ್ಲಿ ಇರುವ ಫೈಬರ್ ವಿಘಟನೆಯ ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. 

ಗಸಗಸೆ ಬೀಜಗಳಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಂಶವೂ ಇದೆ. ಈ ಎರಡೂ ಪೋಷಕಾಂಶಗಳು ದೇಹಕ್ಕೆ ಬಹಳ ಮುಖ್ಯ. ಇದಲ್ಲದೆ, ಗಸಗಸೆ ಬೀಜಗಳಲ್ಲಿ ಫೋಲಿಕ್ ಆಮ್ಲ (pholic acid) ಮತ್ತು ನಿಯಾಸಿನ್ ನಂತಹ ಅಂಶಗಳು ಇವೆ, ಇದು ಗರ್ಭಿಣಿ ಮಹಿಳೆಯರಿಗೆ ಶಕ್ತಿಯನ್ನು ನೀಡುತ್ತದೆ. ಗರ್ಭಾವಸ್ಥೆಯಲ್ಲಿ ಹೆಚ್ಚು ಸ್ಟ್ರಾಂಗ್ ಆಗಲು ಸಹಾಯ ಮಾಡುತ್ತೆ. 

ಇದರಿಂದ ಏನು ಪರಿಣಾಮ ಬೀರುತ್ತದೆ? : ಗಸಗಸೆ ಬೀಜಗಳು ಕೋಡೈನ್ ಎಂಬ ಅಂಶವನ್ನು ಹೊಂದಿರುತ್ತವೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ಹಾನಿಯಾಗಬಹುದು. ಗಸಗಸೆ ಬೀಜಗಳು ಕೆಲವು ವಿಷಗಳನ್ನು ಹೊಂದಿರುತ್ತವೆ, ಅದು ಮಕ್ಕಳು ಮತ್ತು ತಾಯಂದಿರಿಗೆ ಹಾನಿಕಾರಕವಾಗಬಹುದು. 

ಗರ್ಭಿಣಿ ಮಹಿಳೆಯರು ಕೆಲವೊಮ್ಮೆ ಗಸಗಸೆ ಬೀಜಗಳನ್ನು ಸೇವಿಸಬಹುದು, ಆದರೆ ಹೆಚ್ಚು ತಿನ್ನುವುದರಿಂದ ಹಾನಿಯಾಗುತ್ತದೆ.  ಇದರಲ್ಲಿ ಸಕ್ಕರೆ ಅಂಶ, ಮಧುಮೇಹದ ಅಪಾಯ ಹೆಚ್ಚಿಸಬಹುದು. ಆದುದರಿಂದ ನಿಯಮಿತವಾಗಿ ಜೊತೆಗೆ ವೈದ್ಯರಲ್ಲಿ ಪರೀಕ್ಷೆ ನಡೆಸಿ ಸೇವನೆ ಮಾಡುವುದು ಉತ್ತಮ. ಇಲ್ಲವಾದರೆ ತಾಯಿ ಮಗುವಿನ ಆರೋಗ್ಯಕ್ಕೆ ಹಾನಿಯಾಗಬಹುದು. 

click me!