Babycare: ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಜೇನು ನೀಡಬಹುದು?

First Published | Nov 16, 2021, 4:02 PM IST

ನವಜಾತ ಶಿಶುವಿನ ಬಾಲ್ಯ ಮತ್ತು ಭವಿಷ್ಯವನ್ನು ಸಂತೋಷಪಡಿಸಲು ಸರಿಯಾದ ಆರೈಕೆ ಬಹಳ ಮುಖ್ಯ. ಶಿಶು ಮರಣವನ್ನು (death of baby) ಕಡಿಮೆ ಮಾಡುವಲ್ಲಿ ಇದು ದೊಡ್ಡ ಪಾತ್ರವನ್ನು ವಹಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ದೇಶವು ನವೆಂಬರ್ 15 ರಿಂದ 21 ರವರೆಗೆ 'ನವಜಾತ ಶಿಶು ಆರೈಕೆ ಸಪ್ತಾಹ'ವನ್ನು ಆಚರಿಸುತ್ತದೆ.  ಈ ವಾರ ನವಜಾತ ಶಿಶುವಿನ ಆರೈಕೆಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ಮಗುವಿನ ಮೊದಲ 28 ದಿನಗಳು ಅದರ ಉಳಿವಿಗೆ ಮುಖ್ಯವಾಗಿವೆ. ಇದು ಮಕ್ಕಳ ಅಭಿವೃದ್ಧಿಗೆ ಅಡಿಪಾಯವನ್ನು ಹಾಕುತ್ತದೆ. 

ಚಿಕ್ಕ ಮಕ್ಕಳಿಗೆ ಆರಂಭದಲ್ಲಿ ಜೇನು ತುಪ್ಪ (honey) ನೆಕ್ಕಿಸುವ ಬಗ್ಗೆ ಮಾತನಾಡುವುದನ್ನು ನಾವು ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ, ಜೇನುತುಪ್ಪವನ್ನು ಏಕೆ ನೆಕಿಸಲಾಗುತ್ತದೆ ಮತ್ತು ಅದರಿಂದ ಪ್ರಯೋಜನ ಪಡೆಯುತ್ತದೆ ಎಂದು ನಿಮಗೂ ಸಂಶಯ ಕಾಡಬಹುದು. ಜೇನಿನ ವಿಶೇಷ ಗುಣಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ಇದು ಮಕ್ಕಳಿಗೆ ಹೇಗೆ ಉಪಯುಕ್ತವಾಗಿವೆ ತಿಳಿಯಿರಿ. 

ಜೇನಿನಲ್ಲಿ ನೈಸರ್ಗಿಕ ಸಿಹಿಯ (natural sweet) ಜೊತೆಗೆ ವಿವಿಧ ರೀತಿಯ ಔಷಧೀಯ ಗುಣಗಳಿರುವುದರಿಂದ ಚಿಕ್ಕ ಮಕ್ಕಳಲ್ಲಿ ಜೇನುತುಪ್ಪದಿಂದ ವಿವಿಧ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು, ಇದು ಚಿಕ್ಕ ಮಕ್ಕಳ ದೇಹಕ್ಕೆ ಶಕ್ತಿ ತುಂಬುವುದು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆದ್ದರಿಂದಲೇ ಹೆಚ್ಚಿನ ಮನೆಯವರು ಮೊದಲು ಮಗುವಿನ ಜೇನುತುಪ್ಪವನ್ನು ನೆಕ್ಕಿಸುತ್ತಾರೆ. .
 

Tap to resize

ಆಯುರ್ವೇದ ತಜ್ಞರು ಏನು ಹೇಳುತ್ತಾರೆ: ದೇಶದ ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಪ್ರಕಾರ, ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಜೇನುತುಪ್ಪವನ್ನು ತಿನ್ನಿಸುವುದರಿಂದ ಅವರ ರೋಗನಿರೋಧಕ ಶಕ್ತಿ ಬಲವಾಗುತ್ತದೆ. ಪ್ರಬಲ ಆಂಟಿ ಆಕ್ಸಿಡೆಂಟುಗಳು(antioxidents) (ಜೇನುತುಪ್ಪದಲ್ಲಿ ಕಂಡುಬರುವ ಆಂಟಿ ಆಕ್ಸಿಡೆಂಟ್) ಮಗುವಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ, ನೀವು ಮಗುವಿಗೆ ಜೇನುತುಪ್ಪವನ್ನು ತಿನ್ನಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. 

ಮಕ್ಕಳಿಗೆ ಜೇನುತುಪ್ಪವನ್ನು ಯಾವಾಗ ತಿನ್ನಿಸಬೇಕು?: ಡಾ. ಅಬ್ರಾರ್ ಮುಲ್ತಾನಿ ವಿವರಿಸುತ್ತಾರೆ, 1 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ಜೇನುತುಪ್ಪವನ್ನು ನೆಕ್ಕಬೇಕು, ಏಕೆಂದರೆ ಒಂದು ವರ್ಷದ ನಂತರ ಮಕ್ಕಳಿಗೆ ಜೇನುತುಪ್ಪವನ್ನು ನೀಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಯಾಗುವುದಿಲ್ಲ ಮತ್ತು ಮಕ್ಕಳು ಸಹ ಆಹಾರದ ರುಚಿಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ.

ಎಷ್ಟು ಜೇನುತುಪ್ಪವನ್ನು ತಿನ್ನಿಸಬೇಕು: ಆರಂಭದಲ್ಲಿ ನೀವು ಮಗುವಿಗೆ ದಿನಕ್ಕೆ 2 ಟೀ ಚಮಚಕ್ಕಿಂತ ಹೆಚ್ಚು ಜೇನುತುಪ್ಪವನ್ನು ತಿನ್ನಿಸಬಾರದು ಎಂದು ಡಾ. ಅಬ್ರಾರ್ ಮುಲ್ತಾನಿ ವಿವರಿಸುತ್ತಾರೆ. ನೀವು ಮಗುವಿಗೆ ಸರಿಯಾದ ಪ್ರಮಾಣದ ಜೇನುತುಪ್ಪವನ್ನು ನೀಡಿದರೆ ಅದು ಮಗುವಿನ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

kids

ಜೇನುತುಪ್ಪವನ್ನು ಮಕ್ಕಳಿಗೆ ಈ ಆಹಾರಗಳ ಮೂಲಕ ನೀಡಬಹುದು 

ಓಟ್ ಮೀಲ್ (oatmeal)ನೊಂದಿಗೆ ಮಿಶ್ರಣ ಮಾಡಿ 
ಬ್ರೆಡ್ ನೊಂದಿಗೆ ಜಾಮ್ ಬದಲು ಜೇನು ಬೆರೆಸಿ 
ಮೊಸರಿನೊಂದಿಗೆ ಮಿಶ್ರಣ ಮಾಡಿ 
ಸ್ಮೂಥಿಗಳೊಂದಿಗೆ ಮಿಶ್ರಣ ಮಾಡಿ 

ಮಕ್ಕಳ ಆರೋಗ್ಯಕ್ಕೆ ಜೇನುತುಪ್ಪದ ಪ್ರಯೋಜನಗಳು:
ಜೇನುತುಪ್ಪವನ್ನು ಸೇವಿಸುವುದರಿಂದ ಮಗುವಿಗೆ ಸಾಕಷ್ಟು ಶಕ್ತಿ ಒದಗಿಸುತ್ತದೆ, ಅವನನ್ನು ಸದೃಢವಾಗಿರಿಸುತ್ತದೆ.
ಜೇನುತುಪ್ಪದಲ್ಲಿ ಆಂಟಿ ಆಕ್ಸಿಡೆಂಟುಗಳಿವೆ, ಇದು ಮಕ್ಕಳ ದೇಹದಲ್ಲಿ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಮಗುವಿಗೆ ಜೇನುತುಪ್ಪವನ್ನು ತಿನ್ನಿಸುವುದು ಹೊಟ್ಟೆಯ ಸಮಸ್ಯೆಗಳು ಮತ್ತು ಆಮ್ಲೀಯತೆಯನ್ನು ತೆಗೆದುಹಾಕುತ್ತದೆ.
ಜೇನುತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದೆ, ಇದು ರೋಗನಿರೋಧಕ ಶಕ್ತಿಯನ್ನು (immunity power)ಹೆಚ್ಚಿಸುತ್ತದೆ ಮತ್ತು ಯಕೃತ್ತನ್ನು ರಕ್ಷಿಸುತ್ತದೆ.
ಮಗುವಿಗೆ ಜೇನುತುಪ್ಪವನ್ನು ನೆಕ್ಕುವುದು ಬಾಯಿಯ ವಾಸನೆಯನ್ನು ತೆಗೆದುಹಾಕುತ್ತದೆ.

ಈ ಅಗತ್ಯ ವಿಷಯಗಳನ್ನು ನೆನಪಿನಲ್ಲಿಡಿ
ಯಾವಾಗಲೂ ಮಕ್ಕಳಿಗೆ ಶುದ್ಧ ಜೇನುತುಪ್ಪವನ್ನು ನೀಡಿ
ಅಲರ್ಜಿ ಯಾದಾಗ ಮಗುವಿಗೆ ಜೇನುತುಪ್ಪ ವನ್ನು ನೀಡಬೇಡಿ.
ಜೇನುತುಪ್ಪವು ಇನ್ ಫೋರ್ಟ್ ಗಳಾಗಿದ್ದರೆ, ಅದನ್ನು ಮಗುವಿಗೆ ನೀಡಬೇಡಿ.

Latest Videos

click me!