Simple Tricks: ಹಲ್ಲಿ ಕಾಟಕ್ಕೆ ಇಲ್ಲಿವೆ ಪರಿಹಾರ

First Published | Nov 18, 2021, 10:20 AM IST

ಅದು ಎಲ್ಲಿಂದ ಬರುತ್ತೆ? ಹೇಗೆ ಬರುತ್ತೆ ಅನ್ನೋದು ಗೊತ್ತಿಲ್ಲ. ಆದರೆ ಆಗಾಗ್ಗೆ ಹಲ್ಲಿಗಳು (lizard) ಮನೆಗಳ ಗೋಡೆಗಳಿಗೆ ಬರುತ್ತವೆ. ಅವರನ್ನು ಓಡಿಸುವುದು ಎಲ್ಲರಿಗೂ ಕಷ್ಟದ ಕೆಲಸ. ಇಂದು ಹಲ್ಲಿಗಳನ್ನ ಮನೆಯಿಂದ ಓಡಿಸುವ ಕೆಲವು ಸರಳ ಹ್ಯಾಕ್ಸ್ (simple hacks) ನಿಮಗೆ ಹೇಳುತ್ತಿದ್ದೇವೆ. ಈ ಸಿಂಪಲ್ ಟ್ರಿಕ್ಸ್ ನೀವು ಕೂಡ ಟ್ರೈ ಮಾಡಬಹುದು. 

ಮನೆಯಲ್ಲಿ ಜೇಡಗಳು, ಜಿರಳೆಗಳು ಮತ್ತು ಹಲ್ಲಿಗಳನ್ನು ಓಡಿಸುವುದು ಯಾರಿಗಾದರೂ ದೊಡ್ಡ ಸವಾಲಾಗಿರಬಹುದು. ಜಿರಳೆ, ಹಲ್ಲಿಗಳ ಬಗ್ಗೆಯೂ ಹಲವರು ಭಯ ಪಡುತ್ತಾರೆ. ಅವುಗಳನ್ನು ಮನೆಯಿಂದ ಓಡಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಲ್ಲಿಗಳನ್ನು ನೈಸರ್ಗಿಕವಾಗಿ  (natural tricks) ಮನೆಯಿಂದ ಓಡಿಸಲು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಕೆಲವು ಸರಳ ತಂತ್ರಗಳು ಇಲ್ಲಿವೆ. 

ಪೆಪ್ಪರ್ ಸ್ಪ್ರೇ (pepper spray)
ಪೆಪ್ಪರ್ ಸ್ಪ್ರೇ ಎಷ್ಟು ಎಫೆಕ್ಟಿವ್ ಆಗಿರುತ್ತೆ ಅನ್ನೋದು ನಿಮಗೆ ಗೊತ್ತೇ ಇದೆ. ಕಾಳು ಮೆಣಸಿನ ಪುಡಿಯನ್ನು ನೀರಿನಲ್ಲಿ ಕರಗಿಸಿ, ಹಲ್ಲಿ ಕಂಡಲ್ಲೆಲ್ಲಾ ಮನೆಯ ಸುತ್ತಲೂ ಸಿಂಪಡಿಸಿ. ಹಲ್ಲಿಗಳಿಗೆ ಮೆಣಸು ಮತ್ತು ನೀರು ಅಲರ್ಜಿ, ಆದ್ದರಿಂದ ಅವು ಓಡಿ ಹೋಗುತ್ತದೆ. ಮೆಣಸಿನ ಖಾರ ಮತ್ತು ಗಾಢ ಪರಿಮಳಕ್ಕೆ ಹಲ್ಲಿಗಳು ಜಾಗ ಬಿಟ್ಟು ಓಡಿ ಹೋಗೋದಂತು ಖಂಡಿತಾ. 
 

Tap to resize

ಕೋಲ್ಡ್ ವಾಟರ್ (cold water)
ಹಲ್ಲಿಗಳು ಬಿಸಿ ಅಥವಾ ತಾಪ ಹೆಚ್ಚಿರುವ ಸ್ಥಳಗಳಲ್ಲಿ ವಾಸಿಸಲು ಬಯಸುತ್ತವೆ. ಈ ಸಂದರ್ಭದಲ್ಲಿ, ನೀವು ಹಲ್ಲಿಗಳ ಮೇಲೆ ತಣ್ಣನೆಯ ಮಂಜುಗಡ್ಡೆ ನೀರನ್ನು ಚುಮುಕಿಸಿ, ಇದು ಅವುಗಳ ವೇಗವನ್ನು ನಿಧಾನಗೊಳಿಸುತ್ತದೆ ಮತ್ತು ಅದನ್ನು ಹಿಡಿಯಲು ಮತ್ತು ಹೊರಗೆ ಎಸೆಯಲು ಸುಲಭವಾಗುತ್ತೆ. ಯಾಕೆ ಇದನ್ನ ಟ್ರೈ ಮಾಡಬಾರದು. 

ಈರುಳ್ಳಿ (onion)
ಈರುಳ್ಳಿಯಲ್ಲಿರುವ ಗಂಧಕವು ಹಲ್ಲಿಗಳು ಸಹಿಸಲಾಗದ ತೀಕ್ಷ್ಣ ವಾಸನೆಯನ್ನು ನೀಡುತ್ತದೆ. ನೀವು ಕೆಲವು ಚೂರುಗಳನ್ನು ಕತ್ತರಿಸಿ ಮನೆಯ ಸುತ್ತಲೂ ಇಡಬಹುದು ಅಥವಾ ಈರುಳ್ಳಿ ರಸವನ್ನು ನೀರಿನೊಂದಿಗೆ ಬೆರೆಸಿ ಸಿಂಪಡಿಸಬಹುದು. ಈರುಳ್ಳಿ ರಸವನ್ನು ತೆಗೆದು ನೀರಿನೊಂದಿಗೆ ಬೆರೆಸಿ ಹಳ್ಳಿ ಓಡಾಡುವ ಜಾಗದಲ್ಲಿ ಸಿಂಪಡಿಸಿ. ಇದರಿಂದ ಹಲ್ಲಿಯ ಸಮಸ್ಯೆ ದೂರವಾಗುತ್ತೆ. 

ನವಿಲು ಗರಿ (peacock feather)
ಹಲ್ಲಿಗಳು ನವಿಲುಗಳಿಗೆ ತುಂಬಾ ಹೆದರುತ್ತವೆ . ಹಲ್ಲಿಗಳು ಎಲ್ಲೇ ಇದ್ದರೂ ನವಿಲು ಗರಿ ಇಟ್ಟರೆ, ಅದರ ಸುತ್ತಲೂ ಬರುವುದಿಲ್ಲ. ಮನೆಯ ಮೂಲೆ, ಗೋಡೆಗಳ ಮೇಲೆ ನವಿಲು ಗರಿಗಳನ್ನು ಹಾಕಬಹುದು. ಗಾಳಿಗೆ ನವಿಲು ಗರಿಗಳು ಹಾರಾಡುತ್ತಿದ್ದರೆ, ಹಲ್ಲಿಗಳು ಹೆದರಿ ಅಲ್ಲಿಂದ ಓಡಿ ಹೋಗುತ್ತವೆ. 

ಮೊಟ್ಟೆಯ ಸಿಪ್ಪೆಗಳು (egg shell)
ಮೊಟ್ಟೆಯ ಸಿಪ್ಪೆಗಳು ಬಲವಾದ ವಾಸನೆಯನ್ನು ಹೊಂದಿರುತ್ತವೆ, ಅದು ಹಲ್ಲಿಗಳನ್ನು ಮನೆಯಿಂದ ಹೊರಹಾಕಲು ಸಹಾಯ ಮಾಡುತ್ತದೆ. ಮೊಟ್ಟೆ ಸಿಪ್ಪೆಗಳು ಅವುಗಳಲ್ಲಿ ಭಯವನ್ನು ಉಂಟುಮಾಡುತ್ತವೆ. ಆದುದರಿಂದ ಮನೆಯ ಮೂಲೆಗಳಲ್ಲಿ ಅಥವಾ ಹಲ್ಲಿ ಹೆಚ್ಚು ಓಡಾಡುವ ಜಗದಲ್ಲಿ ಮೊಟ್ಟೆ ಸಿಪ್ಪೆ ಇಟ್ಟು ನೋಡಿ. ಬದಲಾವಣೆ ನಿಮಗೆ ತಿಳಿಯುತ್ತೆ.  

ನಾಫ್ತಾಲಿನ್ ಅಥವಾ ಫಿನೈಲ್ ಮಾತ್ರೆಗಳು (naptoline or phynoil tablets)
ನಾಫ್ತಾಲೀನ್ ಅಥವಾ ಫಿನೈಲ್ ಮಾತ್ರೆಗಳನ್ನು ಇಡುವುದರಿಂದ ಹಲ್ಲಿ ಓಡಿ ಹೋಗುತ್ತದೆ. ಮನೆಯ ಮೂಲೆಗಳಿಗೆ ಹಲ್ಲಿ ಬರಬಹುದು ಎಂದು  ಭಾವಿಸಿದಲ್ಲೆಲ್ಲಾ,  ಮಾತ್ರೆಗಳನ್ನು ಇರಿಸಿರಿ. ನಾಫ್ತಾಲೀನ್ ಅಥವಾ ಫಿನೈಲ್ ಮಾತ್ರೆಗಳನ್ನು ಫಾಯಿಲ್ ಪೇಪರಿನಲ್ಲಿ ಕಟ್ಟಬಹುದು. ಕೀಟಗಳು ಮತ್ತು ಹಲ್ಲಿಗಳು ಅದರ ಬಲವಾದ ವಾಸನೆಯಿಂದ ಓಡಿಹೋಗುತ್ತದೆ.

ಬೆಳ್ಳುಳ್ಳಿ (garlic)
ಮನೆಯ ಸುತ್ತಲೂ ಮತ್ತು ಮೂಲೆಗಳಲ್ಲಿ ಬೆಳ್ಳುಳ್ಳಿ ಮೊಗ್ಗುಗಳನ್ನು ಇರಿಸುವುದು ಬಲವಾದ ವಾಸನೆಯನ್ನು ಬೀರುತ್ತದೆ, ಇದು ಹಲ್ಲಿಗಳು ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ. ಬೆಳ್ಳುಳ್ಳಿ ರಸವನ್ನು ನೀರಿನೊಂದಿಗೆ ಬೆರೆಸಿ ಸಿಂಪಡಿಸಬಹುದು. ಇದರ ವಾಸನೆಗೆ ಹಲ್ಲಿ ಓಡಿ ಹೋಗೋದು ಖಂಡಿತಾ. 

Latest Videos

click me!