ಹೆರಿಗೆ ನಂತರ ಹೆಚ್ಚಿದ ತೂಕ ಇಳಿಸೋದು ಹೇಗೆ? ಯೋಚ್ನೆ ಬಿಡಿ ಇದನ್ನ ಟ್ರೈ ಮಾಡಿ

Published : Feb 20, 2024, 01:07 PM IST

ಗರ್ಭಧಾರಣೆಯ ನಂತರ ಹೆಚ್ಚಿದ ತೂಕವನ್ನು ಹೇಗೆ ಸುಲಭವಾಗಿ ಕಡಿಮೆ ಮಾಡಬಹುದು ಎಂದು ಯೋಚನೆ ಮಾಡುತ್ತಿದ್ದೀರಾ? ಹಾಗಿದ್ರೆ ಈ ಲೇಖನ ನಿಮಗೆ ಖಂಡಿತಾ ಸಹಾಯ ಮಾಡುತ್ತೆ. ಮನೆಯಲ್ಲಿಯೇ ಕುಳಿತು ಈ ಸುಲಭ ವಿಧಾನದ ಮೂಲಕ ತೂಕ ಇಳಿಸಬಹುದು. 

PREV
18
ಹೆರಿಗೆ ನಂತರ ಹೆಚ್ಚಿದ ತೂಕ ಇಳಿಸೋದು ಹೇಗೆ? ಯೋಚ್ನೆ ಬಿಡಿ ಇದನ್ನ ಟ್ರೈ ಮಾಡಿ

ಗರ್ಭಾವಸ್ಥೆಯಲ್ಲಿ ಬೊಜ್ಜು (obesity) ಹೆಚ್ಚಾಗುವುದು ಸಾಮಾನ್ಯವಾಗಿದೆ, ಆದರೆ ಹೆರಿಗೆಯ ನಂತರ ಹೆಚ್ಚಿದ ಬೊಜ್ಜನ್ನು ಕಡಿಮೆ ಮಾಡುವುದು ಒಂದು ದೊಡ್ಡ ಸವಾಲಾಗಿರೋದು ನಿಜ.. ಅನೇಕ ಬಾರಿ ವೈದ್ಯರು ಹೆರಿಗೆಯ ನಂತರ ತಕ್ಷಣ ವ್ಯಾಯಾಮ ಮಾಡಲು ಸಹ ಶಿಫಾರಸು ಮಾಡೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ತೂಕವನ್ನು ಹೇಗೆ ಕಡಿಮೆ ಮಾಡೋದು, ಇಂದು ನಾವು ನಿಮ್ಮ ಸಮಸ್ಯೆಗೆ ಪರಿಹಾರವನ್ನು ತಂದಿದ್ದೇವೆ.  

28

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು (weight gain in pregnancy)ತುಂಬಾ ಸಾಮಾನ್ಯ. ಆ ಸಮಯದಲ್ಲಿ, ಅದರ ಬಗ್ಗೆ ಮಹಿಳೆಯರು ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದೆ ಇಲ್ಲ, ಆದರೆ ಹೆರಿಗೆಯ ನಂತರ, ಬಹುತೇಕ ಎಲ್ಲಾ ಮಹಿಳೆಯರ ಆದ್ಯತೆ ತೂಕ ಮತ್ತು ಬೊಜ್ಜು ಕಡಿಮೆ ಮಾಡೋದು. ಹೆಚ್ಚಾಗಿ ಹೆರಿಗೆಯ ತಕ್ಷಣ ವ್ಯಾಯಾಮ ಮಾಡೋದನ್ನು ವೈದ್ಯರು ಸಹ ಶಿಫಾರಸು ಮಾಡುವುದಿಲ್ಲ. 
 

38

ವೈದ್ಯರೇ ವ್ಯಾಯಾಮ ಬೇಡ ಎಂದ ಪರಿಸ್ಥಿತಿಯಲ್ಲಿ, ತೂಕ ಇಳಿಸೋದು ದೊಡ್ಡ ಸವಾಲಾಗುತ್ತದೆ, ವಿಶೇಷವಾಗಿ ಸಿಸೇರಿಯನ್ ಹೆರಿಗೆಯಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹಾಗಿದ್ರೆ ಮತ್ತೇನು ಮಾಡಬಹುದು. ಇಲ್ಲಿ ನೀಡಲಾದ ಕೆಲವು ಪರಿಹಾರಗಳ ಸಹಾಯದಿಂದ, ನೀವು ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು.
 

48

ಸೆಲರಿ ನೀರನ್ನು ಕುಡಿಯಿರಿ: ಬೊಜ್ಜನ್ನು ಕಡಿಮೆ ಮಾಡಲು ಸೆಲರಿ ನೀರು ತುಂಬಾ ಪರಿಣಾಮಕಾರಿ ಮಾರ್ಗವಾಗಿದೆ . ಅಷ್ಟೇ ಯಾಕೆ ಇದನ್ನು ತಯಾರಿಸುವುದು ಸಹ ತುಂಬಾ ಸುಲಭ. ಸೆಲರಿಯಲ್ಲಿ ಅನೇಕ ರೀತಿಯ ಪೌಷ್ಠಿಕಾಂಶಗಳಿವೆ, ಇದು ಹೆರಿಗೆಯ (after delivery)ನಂತರ ತೂಕ ಇಳಿಸೋದಕ್ಕೆ ಸಹಾಯ ಮಾಡುತ್ತದೆ. ಸೆಲರಿ ನೀರನ್ನು ಕುಡಿದ ಒಂದು ವಾರದೊಳಗೆ ಪರಿಣಾಮವನ್ನು ನೀವು ನೋಡುತ್ತೀರಿ. 

58

ಹಾಗಿದ್ರೆ ಸೆಲರಿ ನೀರು(celery water) ತಯಾರಿಸೋದು ಹೇಗೆ? ಇದಕ್ಕಾಗಿ, ಒಂದು ಕಪ್ ನೀರಿನಲ್ಲಿ ಒಂದು ಟೀಸ್ಪೂನ್ ಸೆಲರಿಯನ್ನು ಹಾಕಿ ಕುದಿಸಿ ಮತ್ತು ಅದನ್ನು ಸ್ವಲ್ಪ ತಣ್ಣಗಾಗಿಸಿ ಮತ್ತು ಅದರಲ್ಲಿ ಉಪ್ಪು ಮತ್ತು ನಿಂಬೆ ರಸವನ್ನು ಬೆರೆಸಿ ದಿನವಿಡೀ ಸ್ವಲ್ಪ ಸ್ವಲ್ಪವಾಗಿ ಕುಡಿಯಿರಿ

68

ದಾಲ್ಚಿನ್ನಿ ಮತ್ತು ಲವಂಗ: ದಾಲ್ಚಿನ್ನಿ ಮತ್ತು ಲವಂಗಗಳು (cinnamon and clove) ಹೊಟ್ಟೆಯಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಇದಕ್ಕಾಗಿ, ಒಂದು ಲೋಟ ನೀರಿನಲ್ಲಿ 2 ರಿಂದ 3 ಲವಂಗ ಮತ್ತು ದಾಲ್ಚಿನ್ನಿ ಸೇರಿಸಿ. ಎರಡು ನಿಮಿಷಗಳ ಕಾಲ ಕುದಿಸಿ ಮತ್ತು ನಂತರ ಈ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ. ನೀವು ಬಯಸಿದರೆ, ಅದನ್ನು ಒಮ್ಮೆ ಕುಡಿಯಬಹುದು ಅಥವಾ ದಿನವಿಡೀ ಸ್ವಲ್ಪ ಸ್ಪಲ್ಪ ಕುಡಿಯುತ್ತಿರಬಹುದು.

78

ಗ್ರೀನ್ ಟೀ: ದಿನವಿಡೀ ಒಂದು ಕಪ್ ಗ್ರೀನ್ ಟೀ (green tea)ಕುಡಿಯುವುದರಿಂದ ಗರ್ಭಧಾರಣೆಯ ನಂತರ ತೂಕ ಇಳಿಸಿಕೊಳ್ಳಲು ತುಂಬಾ ಪ್ರಯೋಜನಕಾರಿ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಆರೋಗ್ಯ ಮತ್ತು ಚರ್ಮ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ. 

88

ಗ್ರೀನ್ ಟೀ ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ, ಇದು ತೂಕ ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಗ್ರೀನ್ ಟೀಯಲ್ಲಿ ಸಕ್ಕರೆ ಹಾಕಿ ಕುಡಿಯಬೇಡಿ. ಹಾಗೇ ಕುಡಿಯೋದರಿಂದ ಏನೂ ಪ್ರಯೋಜನ ಉಂಟಾಗೋದಿಲ್ಲ. 
 

Read more Photos on
click me!

Recommended Stories