ಅಪ್ಸರೆಯಂತೆ ಕಾಣ್ತಾರೆ ಡಿಕೆಶಿ ಮಗಳು, ಇವರೇ ರಾಜ್ಯದ ಮೊದಲ ಲೇಡಿ ಸಿಎಂ ಅಂತಿದ್ದಾರೆ ನೆಟ್ಟಿಗರು!

First Published | Feb 19, 2024, 9:00 PM IST

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುದ್ದಿನ ಮಗಳು, ಮೋಟಿವೇಶನಲ್ ಸ್ಪೀಕರ್ ಆಗಿರುವ ಐಶ್ವರ್ಯ ಶಿವಕುಮಾರ್ ಸೌಂದರ್ಯದಲ್ಲಿ ಯಾವುದೇ ಹಿರೋಯಿನ್ ಗೆ ಕಮ್ಮಿ ಇಲ್ಲ. 
 

ಹಿರಿಯ ರಾಜಕಾರಣಿ ನಮ್ಮ ರಾಜ್ಯದ ಉಪಮುಖ್ಯಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಡಿಕೆ ಶಿವಕುಮಾರ್ (D K Shivakumar) ಅವರ ಪ್ರೀತಿಯ ಮಗಳು , ಶಿಕ್ಷಣ ಸಂಸ್ಥೆಯ ಒಡತಿ ಐಶ್ವರ್ಯ ಬಗ್ಗೆ ನಿಮಗೆ ಗೊತ್ತೆ ಇರಬೇಕು ಅಲ್ವಾ? 
 

ಶಿಕ್ಷಣ, ಸಬಲೀಕರಣ ಮತ್ತು ಉದ್ಯಮಶೀಲತೆ ಬಗ್ಗೆ ಮೋಟಿವೇಶನಲ್ ಸ್ಪೀಚ್ ಕೊಡುವ ಐಶ್ವರ್ಯ (Aishwaraya Shivakumar) ಡಿಕೆಶಿಯವರ ಮಗಳಕ್ಕಿಂತ ಹೆಚ್ಚಾಗಿ ಒಬ್ಬ ಎಜುಕೇಶನ್ ಸ್ಪೀಕರ್ ಆಗಿ ಸದಾ ಸುದ್ದಿಯಲ್ಲಿರುತ್ತಾರೆ ಇವರು. 
 

Tap to resize

ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಐಶ್ವರ್ಯ ತಮ್ಮ ಕೆಲಸದ ಬಗ್ಗೆ ಹಾಗೂ ತಮ್ಮ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಪ್ಪಟ ಸುಂದರಿಯಾಗಿರುವ ಐಶ್ಚರ್ಯ ಹೊಸ ಫೋಟೋ ನೋಡಿದ್ರೆ ಯಾವುದೇ ಹಿರೋಯಿನ್ ಗೂ ಕಮ್ಮಿ ಇಲ್ಲ ಎನ್ನುವಂತೆ ಕಾಣಿಸುತ್ತಿದ್ದಾರೆ. 
 

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮೊಮ್ಮಗ ಹಾಗೂ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಪುತ್ರ ಅಮರ್ಥ್ಯ ಅವರನ್ನು ಮದುವೆಯಾಗಿರುವ ಐಶ್ವರ್ಯ ಇತ್ತೀಚೆಗೆ ತಮ್ಮ ಸಹೋದರ ಸಂಬಂಧಿ ಮದುವೆಯ ಕ್ಷಣದಲ್ಲಿ ತೆಗೆದಂತಹ ಫೋಟೋ ಶೇರ್ ಮಾಡಿಕೊಂಡಿದ್ದರು. 
 

ತಿಳಿ ಗುಲಾಬಿ ಬಣ್ಣದ ಫ್ಲೋರಲ್ ಡಿಸೈನ್ ಸೀರೆ ಧರಿಸಿರುವ ಐಶ್ವರ್ಯಾ, ಅದಕ್ಕೆ ಮ್ಯಾಚ್ ಆಗುವಂತಹ ತಿಳಿ ಹಸುರು ಬಣ್ಣದ ನೆಕ್ ಪೀಸ್, ಇಯರಿಂಗ್ಸ್ ಮತ್ತು ಮುಂದಾಲೆ ಧರಿಸಿದ್ದರು. ಕಸಿನ್ ಮದ್ವೆಗೆ ಐಶ್ವರ್ಯಾ ರನ್ನು ರೆಡಿ ಮಾಡಿದ್ದು, ಅವರ ತಾಯಿ ಉಷಾ ಶಿವಕುಮಾರ್ (Usha Shivakumar) ಅಂತೆ. 
 

ತಿಳಿ ಗುಲಾಬಿ ಸೀರೆಯಲ್ಲಿ ಐಶ್ವರ್ಯ ಅಪ್ಸರೆಯಂತೆ ಕಾಣಿಸುತ್ತಿದ್ದರು. ಅಭಿಮಾನಿಗಳು ಇವರಿಗೆ ಬ್ಯೂಟಿ ವಿತ್ ಬ್ರೈನ್, ನಮ್ಮ ರಾಜ್ಯದ ಮೊದಲ ಲೇಡಿ ಸಿಎಂ ನೀವೆ ಆಗ್ತೀರಿ ಅನ್ಸುತ್ತೆ, ದೇವತೆ ತರ ಕಾಣಿಸ್ತೀರಾ, ಭೂಲೋಕದ ಸೌಂದರ್ಯ ರಾಣಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಇನ್ನು ಫೋಟೋದಲ್ಲೆಲ್ಲೂ ಪತಿ ಅಮರ್ಥ್ಯ ಕಾಣಿಸದೇ ಇರೋದರಿಂದ ಜನ ಯಾಕೆ ಮೇಡಂ ಗಂಡನ ಜೊತೆ ಒಂದೂ ಫೋಟೋನೂ ಹಾಕೋದಿಲ್ಲ, ಅವರನ್ನ ಯಾಕೆ ಹೈಡ್ ಮಾಡ್ತೀರಿ. ಗಂಡನ ಜೊತೆಗೂ ಫೋಟೋ ತೆಗೆಸಿ ಮೇಡಮ್ ಎಂದೆಲ್ಲಾ ಹೇಳಿದ್ದಾರೆ. 
 

Latest Videos

click me!