ದಿನಕ್ಕೈದು ನಿಮಿಷ ಹೀಗೆ ಮಾಡಿದ್ರೆ ಹೊಳೆಯೋ ತ್ವಚೆ ನಿಮ್ಮದೇ: ಚರ್ಮ ತಜ್ಞೆ

First Published Feb 18, 2024, 12:24 PM IST

ಹೊಳೆಯುವ ಆರೋಗ್ಯವಂಥ ತ್ವಚೆಗಾಗಿ ಸಲ್ಲದ ಸರ್ಕಸ್ ಮಾಡುವ ಬದಲು ದಿನದಲ್ಲಿ 5 ನಿಮಿಷವನ್ನು ಸರಿಯಾಗಿ ವ್ಯಯಿಸಿದ್ರೂ ಸಾಕು ಅಂತಾರೆ ಸ್ಕಿನ್ ಎಕ್ಸ್‌ಪರ್ಟ್ ವಸುಧಾ ರೈ. 

ನಮ್ಮಲ್ಲಿ ಹೆಚ್ಚಿನವರು ತ್ವಚೆಯನ್ನು ಕಡೆಗಣಿಸುವುದೇ ಹೆಚ್ಚು. ಯಾವುದೋ ಕಾರ್ಯಕ್ರಮ ಹತ್ತಿರ ಬಂದಾಗ ಅದಕ್ಕೆ ಕೊಂಚ ಆರೈಕೆ ನೀಡುವುದರ ಹೊರತಾಗಿ ಪ್ರತಿದಿನ ಸ್ನಾನ, ಬಾಡಿ ಲೋಶನ್ ಬಿಟ್ಟರೆ ಅದನ್ನು ಅದರ ಪಾಡಿಗೆ ಬಿಟ್ಟು, ಕಡೆಗೆ ಮೇಕಪ್‌ನಿಂದ ನಮಗೆ ಬೇಕೆಂದಂತೆ ಪರಿವರ್ತಿಸಲು ನೋಡುತ್ತೇವೆ. ಆದರೆ, ಆರೋಗ್ಯವಂತ, ಹೊಳೆವ ತ್ವಚೆ ಪಡೆಯುವುದು ಕಷ್ಟವೇನಲ್ಲ ಅಂತಾರೆ ಸ್ಕಿನ್ ಎಕ್ಸ್‌ಪರ್ಟ್ ವಸುಧಾ ರೈ. 

'ಸೌಂದರ್ಯದ ವಿಷಯಕ್ಕೆ ಬಂದಾಗ ಮಹಿಳೆಯರು ಒಂದು ರೀತಿಯ ಸಿದ್ಧಸೂತ್ರವನ್ನಿಟ್ಟುಕೊಂಡು ಪ್ರತಿ ದಿನ ಅದನ್ನು ಪುನರಾವರ್ತನೆಗೊಳಿಸಬೇಕು. ಯಾವುದೇ ರೀತಿಯ ಆರೈಕೆ ಅತಿಯಾಗಲೂ ಬಾರದು. ಪ್ರತಿಯೊಂದೂ ಸರಿಯಾದ ಪ್ರಮಾಣದಲ್ಲಿದ್ದಾಗ ಕಾರ್ಯ ನಿರ್ವಹಿಸುತ್ತದೆ' ಎನ್ನುತ್ತಾರೆ ರೈ. 

ದಿ ಬುಕ್ ಆಫ್ ಹೋಲಿಸ್ಟಿಕ್ ಬ್ಯೂಟಿ ಎಂಬ ಪುಸ್ತಕವನ್ನು ಬರೆದಿರುವ ಆಕೆ, ನೀವು ನಿಯಮಿತವಾಗಿ ಮತ್ತು ಸತತವಾಗಿ ನಿಮ್ಮ ತ್ವಚೆಯನ್ನು ಕಾಳಜಿ ವಹಿಸಿದಾಗ ಮಾತ್ರ ರೂಪಾಂತರ ಸಾಧ್ಯ. ಇದಕ್ಕಾಗಿ ಪ್ರತಿ ನಿತ್ಯ 5 ನಿಮಿಷಗಳನ್ನು ಕಾಯ್ದಿರಿಸಿ ಸಾಕು ಎಂದು ಹೇಳುತ್ತಾರೆ. 

ಉಸಿರಾಟ ಮ್ಯಾಜಿಕ್
ಡರ್ಮಾ ಫೇಶಿಯಲ್‌ ಅಥವಾ ಯಾವುದೇ ರೀತಿಯ ತ್ವಚೆಯ ಮಸಾಜ್ ನಲ್ಲಿ ಸ್ಥಿರತೆ ಮುಖ್ಯ. ಪ್ರತಿದಿನ ನಿಮ್ಮ ಚರ್ಮದ ಮೇಲೆ ಐದು ನಿಮಿಷಗಳನ್ನು ಕಳೆದರೆ, ಅದು ಪುನರುಜ್ಜೀವನಗೊಂಡು ಆರೋಗ್ಯಕರವಾಗಿ ಕಾಣುತ್ತದೆ ಎಂದು ನೀವು ಕಂಡುಕೊಳ್ಳುತ್ತೀರಿ.

ಅಂದ ಹಾಗೆ, ತ್ವಚೆಗೆ ಸಂಬಂಧಿಸಿದಂತೆ ಎಲ್ಲರಿಗೂ ಕೆಲಸ ಮಾಡುವ ಯಾವುದೇ ಒಂದು ವಿಧಾನ ಇಲ್ಲ ಎನ್ನುವ ವಸುಧಾ, ನಾವೆಲ್ಲರೂ ಅನನ್ಯರಾಗಿದ್ದೇವೆ. ಆದರೆ, ಉಸಿರಾಟದಂತಹ ಜಾಗರೂಕ ಚಟುವಟಿಕೆಯನ್ನು ಸೇರಿಸುವುದರಿಂದ ಪ್ರತಿಯೊಬ್ಬರ ಚರ್ಮದಲ್ಲಿ ವ್ಯತ್ಯಾಸವಾಗುತ್ತದೆ ಎನ್ನುತ್ತಾರೆ.

ಸುಮ್ಮನೆ ಕೆಲಸದ ಮಧ್ಯೆ ಬ್ರೇಕ್ ಎಂಬಂತೆ ಉಸಿರಾಟಕ್ಕೆ ಗಮನ ಕೊಡಿ. ಪ್ರಾಣಾಯಾಮವನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಆರೋಗ್ಯದ ಜೊತೆಗೆ ತ್ವಚೆಗೂ ಸಹಾಯಕವಾಗಿದೆ. 

ಇದಲ್ಲದೆ, ತ್ವಚೆಗೆ ಸಂಬಂಧಿಸಿದಂತೆ ಪ್ರತಿ ರಾತ್ರಿ ಮಲಗುವಾಗ ಮುಖ ತೊಳೆದು, ಮಾಯಿಶ್ಚರೈಸರ್ ಹಚ್ಚಿಯೇ ಮಲಗಿ. ವಾರಕ್ಕೊಮ್ಮೆ ಸ್ಕ್ರಬ್ ಹಾಗೂ ಮನೆಯಲ್ಲಿಯೇ ಸಿಗುವ ವಸ್ತುಗಳ ಫೇಶಿಯಲ್ ಸಾಕಾಗುತ್ತದೆ.

ಇದಲ್ಲದೆ, ಪ್ರತಿ ದಿನ ಸ್ನಾನದ ಬಳಿಕ ಉತ್ತಮ ಮಾಯಿಶ್ಚರೈಸರ್ ಹಚ್ಚಿ. ಹಚ್ಚುವಾಗ ಮುಖಕ್ಕೆ ಹೆಚ್ಚು ಮಸಾಜ್ ಮಾಡಿ. ಮೇಕಪ್‌ನೊಂದಿಗೆ ಎಂದಿಗೂ ಮಲಗಬೇಡಿ. ಇದಿಷ್ಟನ್ನೇ ನಿಯಮಿತವಾಗಿ ಫಾಲೋ ಮಾಡಿದರೂ ಚರ್ಮದ ಆರೋಗ್ಯ ಬದಲಾಗುತ್ತದೆ ಎನ್ನುತ್ತಾರೆ ತಜ್ಞರು.
 

click me!