ಗರ್ಭಾವಸ್ಥೆಯ(Pregnancy) ಆಹಾರದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಸೇರಿಸೋದು ಸೂಕ್ತ. ವಿಭಿನ್ನ ಆಹಾರಗಳನ್ನು ಸೇವಿಸುವ ಮೂಲಕ, ತಾಯಿಯ ದೇಹವು ಸಾಕಷ್ಟು ಪೌಷ್ಠಿಕಾಂಶ ಪಡೆಯುತ್ತೆ ಮತ್ತು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತೆ. ಅನೇಕ ಮಹಿಳೆಯರು ಸುವರ್ಣ ಗೆಡ್ಡೆಯನ್ನು ತುಂಬಾ ಇಷ್ಟಪಡುತ್ತಾರೆ, ಆದರೆ ಅವರು ಗರ್ಭಾವಸ್ಥೆಯಲ್ಲಿ ಸುವರ್ಣ ಗೆಡ್ಡೆ ತಿನ್ನಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಅವರಿಗೆ ಸಂದೇಹಗಳಿವೆ.
ನೀವು ಸಹ ಗರ್ಭಿಣಿಯಾಗಿದ್ದರೆ, ಗರ್ಭಾವಸ್ಥೆಯಲ್ಲಿ ನೀವು ಸುವರ್ಣ ಗೆಡ್ಡೆ(Yam) ತಿನ್ನಬೇಕೇ ಅಥವಾ ಬೇಡವೇ ಎಂದು ಇಲ್ಲಿ ತಿಳಿದುಕೊಳ್ಳಬಹುದು. ತಿನ್ನುವ ಮೊದಲು ತಜ್ಞರ ಬಳಿ ಕೇಳಿಕೊಳ್ಳುವುದು ಸಹ ಉತ್ತಮ. ಸುವರ್ಣ ಗೆಡ್ಡೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಗರ್ಭಾವಸ್ಥೆಯಲ್ಲಿ ಸುವರ್ಣ ಗೆಡ್ಡೆ ತಿನ್ನಬಹುದೇ?
ಗರ್ಭಾವಸ್ಥೆಯಲ್ಲಿ ಸುವರ್ಣ ಗೆಡ್ಡೆ ತಿನ್ನೋದು ಉತ್ತಮ. ಇದು ತಾಯಿ ಮತ್ತು ಮಗು ಇಬ್ಬರಿಗೂ ಅನೇಕ ಪ್ರಯೋಜನಗಳನ್ನು ನೀಡುತ್ತೆ. ಸುವರ್ಣ ಗೆಡ್ಡೆ ಅನೇಕ ವಿಟಮಿನ್ಸ್ ಗಳಿಂದ ಸಮೃದ್ಧವಾಗಿದೆ ಮತ್ತು ಫೋಲಿಕ್ ಆಸಿಡ್ (Folic acid) ಮತ್ತು ಪೊಟ್ಯಾಸಿಯಮ್ ಸಹ ಹೊಂದಿದೆ, ಇದು ಗರ್ಭಧಾರಣೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ರಕ್ಷಿಸಲು ಮತ್ತು ಆರೋಗ್ಯಕರ ಮಗುವಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತೆ.
ಮಾರ್ನಿಂಗ್ ಸಿಕ್ಕ್ನೆಸ್ಸ್ (Mornig sickness) ಮೇಲೆ ಪರಿಣಾಮ
ಮಾರ್ನಿಂಗ್ ಸಿಕ್ಕ್ನೆಸ್ಸ್ ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತೆ ಮತ್ತು ನೀವು ಇದನ್ನು ಗರ್ಭಧಾರಣೆಯ ಸಾಮಾನ್ಯ ಲಕ್ಷಣ ಎಂದು ಕರೆಯಬಹುದು. ಸುವರ್ಣ ಗೆಡ್ಡೆ ಸಾಕಷ್ಟು ಪ್ರಮಾಣದ ವಿಟಮಿನ್ ಬಿ 6 ಹೊಂದಿದೆ, ಇದು ವಾಕರಿಕೆ ಮತ್ತು ವಾಂತಿಯನ್ನು ನಿವಾರಿಸುತ್ತೆ .
ಬಿಪಿ(BP) ನಿಯಂತ್ರಿಸುತ್ತೆ
ಸುವರ್ಣ ಗೆಡ್ಡೆಯಲ್ಲಿ ಪೊಟ್ಯಾಷಿಯಮ್ ಸಮೃದ್ಧ ಮತ್ತು ಇದು ಬಿಪಿಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತೆ. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವು (High Blood Pressure) ಅನೇಕ ತೊಡಕುಗಳಿಗೆ ಕಾರಣವಾಗಬಹುದು. ಇದಲ್ಲದೆ, ಸುವರ್ಣ ಗೆಡ್ಡೆಯಲ್ಲಿರುವ ವಿಟಮಿನ್ ಬಿ 6 ಮಗುವಿನಲ್ಲಿ ಕಡಿಮೆ ಬರ್ತ್ ವೆಯಿಟ್ ಅಪಾಯವನ್ನು ಕಡಿಮೆ ಮಾಡುತ್ತೆ.
ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ
ಸುವರ್ಣ ಗೆಡ್ಡೆ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಸಿ(Vitamin C) ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತೆ. ಸಾಮಾನ್ಯ ಕಾಯಿಲೆಯ ವಿರುದ್ಧ ಹೋರಾಡಲು, ಆಕ್ಸಿಡೇಟಿವ್ ಒತ್ತಡ ತಡೆಗಟ್ಟಲು ಮತ್ತು ಕ್ಯಾನ್ಸರ್ನಿಂದ ರಕ್ಷಿಸಲು ಅವು ನಿಮಗೆ ಸಹಾಯ ಮಾಡುತ್ತವೆ. ಎನ್ಸಿಬಿಐನ ಸಂಶೋಧನೆಯ ಪ್ರಕಾರ, ಸುವರ್ಣ ಗೆಡ್ಡೆ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಹೊಂದಿದೆ, ಇದು ಕ್ಯಾನ್ಸರ್ನಿಂದ ರಕ್ಷಿಸುತ್ತೆ.
ಹಾರ್ಮೋನ್ ಏರಿಳಿತ, ಬೆಳೆಯುತ್ತಿರುವ ಗರ್ಭಾಶಯ, ಇತ್ಯಾದಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಸುವರ್ಣ ಗೆಡ್ಡೆ ಆರೋಗ್ಯಕರ ಸ್ಟಾರ್ಚ್ ಹೊಂದಿದೆ, ಇದು ಜೀರ್ಣಿಸಿಕೊಳ್ಳಲು ಸುಲಭ. ಸುವರ್ಣ ಗೆಡ್ಡೆ ಆಹಾರದ ಫೈಬರ್ ಸಹ ಹೊಂದಿರುತ್ತೆ, ಇದು ಮಲಬದ್ಧತೆಗೆ(Constipation) ಚಿಕಿತ್ಸೆ ನೀಡುತ್ತೆ.
ರಕ್ತಹೀನತೆಯಿಂದ ರಕ್ಷಿಸುತ್ತೆ
ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಸಾಮಾನ್ಯ ಸಮಸ್ಯೆಯಾಗಿದೆ.ಸುವರ್ಣ ಗೆಡ್ಡೆ ಜಿಂಕ್(Zinc), ಕಾಪರ್ ಮತ್ತು ಕಬ್ಬಿಣದಂತಹ ಖನಿಜಗಳನ್ನು ಹೊಂದಿದೆ, ಇದು ರಕ್ತಹೀನತೆಯನ್ನು ತಡೆಗಟ್ಟುವಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಗರ್ಭಾವಸ್ಥೆಯಲ್ಲಿ ಫೋಲೇಟ್ ಅಥವಾ ಫೋಲಿಕ್ ಆಸಿಡ್ ನ ಅಗತ್ಯವಿದೆ. ಫೋಲಿಕ್ ಆಸಿಡ್ ಮಗುವನ್ನು ನ್ಯೂರಲ್ ಟ್ಯೂಬ್ ದೋಷಗಳಿಂದ ರಕ್ಷಿಸುತ್ತೆ. ಸುವರ್ಣ ಗೆಡ್ಡೆ ಹೆಚ್ಚಿನ ಪ್ರಮಾಣದ ಫೋಲೇಟ್ ಹೊಂದಿರುತ್ತೆ ಮತ್ತು ಗರ್ಭಾವಸ್ಥೆಯಲ್ಲಿ ಸೇವಿಸಬೇಕು.
ಅಕಾಲಿಕ ಜನನ(Premature birth)
ಕಬ್ಬಿಣದ ಕೊರತೆಯು ಅಕಾಲಿಕ ಜನನಕ್ಕೆ ಪ್ರಮುಖ ಕಾರಣವಾಗಿದೆ. ಆಹಾರದಲ್ಲಿ ಕಬ್ಬಿಣಾಂಶ ಭರಿತ ಸುವರ್ಣ ಗೆಡ್ಡೆಯನ್ನು ಸೇರಿಸೋದರಿಂದ ಅಕಾಲಿಕ ಜನನವನ್ನು ತಡೆಯಲು ಸಹಾಯ ಮಾಡುತ್ತೆ. ಆದರೆ ಇದನ್ನು ಯಥೆಚ್ಚವಾಗಿ ಬಳಕೆ ಮಾಡುವ ಮುನ್ನ ವೈದ್ಯರ ಬಳಿ ಮಾಹಿತಿ ತಿಳಿದುಕೊಳ್ಳೋದು ಉತ್ತಮ.
ಗರ್ಭಾವಸ್ಥೆಯಲ್ಲಿ ಮೂಳೆಗಳು ಬಲವಾಗಿರಬೇಕು. ಬೆಳೆಯುತ್ತಿರುವ ಮಗುವಿಗೆ ಅದರ ಮೂಳೆಗಳನ್ನು ನಿರ್ಮಿಸಲು ಕ್ಯಾಲ್ಸಿಯಂ(Calcium) ಬೇಕು. ಹಾಗಾಗಿ ನೀವು ನಿಮ್ಮ ಆಹಾರದಲ್ಲಿ ಸುವರ್ಣ ಗೆಡ್ಡೆಯನ್ನು ಸೇರಿಸಬಹುದು. ಇದು ಮಗುವನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ.