ಮದುವೆ ಸಮಯದಲ್ಲಿ ವಧು-ವರರಿಗೆ ಅರಿಶಿನ ಶಾಸ್ತ್ರ ಮಾಡೋದ್ಯಾಕೆ?

Published : Jan 14, 2023, 04:39 PM IST

ವಿವಾಹ ಸಮಾರಂಭದಲ್ಲಿ ಅರಿಶಿನವನ್ನು ಬಳಸುವುದು ಮಂಗಳವೆಂದು ಪರಿಗಣಿಸಲಾಗುತ್ತದೆ, ಆದರೆ ಮದುವೆಯಲ್ಲಿ ಅರಿಶಿನವನ್ನು ಬಳಸುವ ಪ್ರಯೋಜನಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? ಬನ್ನಿ ಮದುವೆಯಲ್ಲಿ ಅರಿಶಿಣ ಬಳಸುವುದರ ಪ್ರಯೋಜನಗಳು ಯಾವುವು ಅನ್ನೋದರ ಬಗ್ಗೆ ಡೀಟೇಲ್ ಆಗಿ ತಿಳಿಯೋಣ.

PREV
16
ಮದುವೆ ಸಮಯದಲ್ಲಿ ವಧು-ವರರಿಗೆ ಅರಿಶಿನ ಶಾಸ್ತ್ರ ಮಾಡೋದ್ಯಾಕೆ?

ವಿವಾಹ ಸಮಾರಂಭದಲ್ಲಿ ಅರಿಶಿನ ಬಳಸುವುದು ಒಂದು ಸಂಪ್ರದಾಯ. ಈ ಸಂಪ್ರದಾಯದ ಪ್ರಕಾರ ಮದುವೆ ಹಿಂದಿನ ದಿನ, ಅಥವಾ ಮದುವೆ ದಿನ ಬೆಳಗ್ಗೆ ವಧುವಿಗೆ ಮತ್ತು ವರನಿಗೆ ಅರಿಶಿನ ಶಾಸ್ತ್ರ  (Haldi ceremony) ಮಾಡಲಾಗುತ್ತೆ. ಈ ಸಮಯದಲ್ಲಿ ವಧುವಿನ ಬಂಧುಗಳು, ಕುಟುಂಬದವರು ಸೇರಿ ಅರಿಶಿನವನ್ನು ಹಚ್ಚುತ್ತಾರೆ. ಹೀಗೆ ಮಾಡೋದು ಯಾಕೆ? ಇದರಿಂದ ಏನು ಪ್ರಯೋಜನವಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ. 

26

ಅರಿಶಿನದಿಂದ ಅನೇಕ ಪ್ರಯೋಜನಗಳಿವೆ, ಇದನ್ನು ವಿಜ್ಞಾನಿಗಳು ಕಾಲಕಾಲಕ್ಕೆ ಸಾಬೀತುಪಡಿಸಿದ್ದಾರೆ. ಅರಿಶಿಣ ವಧುವಿನ ದೇಹವನ್ನು ಸ್ವಚ್ಛ ಮತ್ತು ಸುಂದರವಾಗಿಸುವ ಕ್ಲೆನ್ಸರ್ ಆಗಿದೆ. ವಧುವಿಗೆ ಅರಿಶಿನ ಪೇಸ್ಟ್ (haldi paste) ಮಾಡಿ ಹಚ್ಚಲಾಗುತ್ತದೆ. ಇದರಿಂದ ಅವಳು ಮದುವೆಯ ದಿನದಂದು ಹೆಚ್ಚು ಸುಂದರವಾಗಿ ಕಾಣುತ್ತಾಳೆ. ಮದುವೆಗೆ ಕೆಲವು ದಿನಗಳ ಮೊದಲು, ವಧು ಮತ್ತು ವರನಿಗೆ ಅರಿಶಿನವನ್ನು ಹಚ್ಚುವ ಆಚರಣೆ ಪ್ರಾರಂಭವಾಗುತ್ತದೆ.

36

ಅರಿಶಿನವನ್ನು ಆಶೀರ್ವಾದವಾಗಿಯೂ ಬಳಸಲಾಗುತ್ತದೆ. ಈ ಕಾರಣಕ್ಕಾಗಿಯೇ ವಧು ಮತ್ತು ವರನಿಗೆ (bride and groom) ಅರಿಶಿನದ ದಿನವನ್ನು ನಿಗದಿಪಡಿಸಲಾಗುತ್ತದೆ ಮತ್ತು ಈ ದಿನದಂದು ಮನೆಯ ಎಲ್ಲಾ ಹಿರಿಯರು ವಧು ಮತ್ತು ವರನನ್ನು ಸ್ಪರ್ಶಿಸಿ ಅವರನ್ನು ಆಶೀರ್ವದಿಸುತ್ತಾರೆ. ಈ ರೀತಿಯಾಗಿ, ವಧು ಮತ್ತು ವರರು ಉತ್ತಮ ವೈವಾಹಿಕ ಜೀವನಕ್ಕಾಗಿ ಆಶೀರ್ವದಿಸಲ್ಪಡುತ್ತಾರೆ.

46

ಅರಿಶಿನವು ಮ್ಯಾಜಿಕಲ್ ಗುಣಗಳನ್ನು (magical power) ಹೊಂದಿದೆ, ಆದ್ದರಿಂದ ಇದನ್ನು ಆಹಾರ ಮತ್ತು ಹಾಲಿನಲ್ಲಿ ಹಾಕುವ ಮೂಲಕ ಔಷಧಿಯಾಗಿ ಸೇವಿಸುವುದು ಮಾತ್ರವಲ್ಲದೆ, ಇದನ್ನು ವಧು ಮತ್ತು ವರನ ಚರ್ಮದ ಮೇಲೂ ಅನ್ವಯಿಸಲಾಗುತ್ತದೆ. ಇದನ್ನು ಮಾಡುವುದರಿಂದ, ವಧು ಮತ್ತು ವರನ ದೇಹ ಹೊಳೆಯುತ್ತದೆ. ಈ ಕಾರಣದಿಂದಾಗಿ, ವಧು ಮತ್ತು ವರರು ಪರಸ್ಪರ ಆಕರ್ಷಿತರಾಗುತ್ತಾರೆ.

56

ಅರಿಶಿಣ ದೃಷ್ಟಿ ನಿವಾರಿಸಲು ಸಹ ಬಳಸಲಾಗುತ್ತದೆ. ಈ ಕಾರಣಕ್ಕಾಗಿಯೇ ವಧು ಮತ್ತು ವರನಿಗೆ ಅರಿಶಿನವನ್ನು ಆಶೀರ್ವಾದದ ರೂಪದಲ್ಲಿ ನೀಡಲಾಗುತ್ತದೆ. ಇದು ವಧು ಮತ್ತು ವರನನ್ನು ದುಷ್ಟ ಶಕ್ತಿಗಳಿಂದ (evil eye) ರಕ್ಷಿಸುತ್ತದೆ. ಹಲ್ದಿ ಸಮಾರಂಭದ ನಂತರ, ವಧು ಮತ್ತು ವರರು ಮದುವೆಯವರೆಗೆ ಮನೆಯಿಂದ ಹೊರಹೋಗಬಾರದು ಎಂಬುದಕ್ಕೆ ಇದು ಕಾರಣವಾಗಿದೆ.

66

ಅರಿಶಿನವನ್ನು ಹಚ್ಚುವ ಮೂಲಕ ಇಬ್ಬರ ನಡುವೆ ಉತ್ತಮ ಭಾಂದವ್ಯ ಬೆಳೆಯಲಿ ಎಂದು ಹಿರಿಯರು ಆಶೀರ್ವಾದ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮದುವೆಯ ನಂತರ ವಧು ಮತ್ತು ವರರು ಜಗಳವಾಡದಂತೆ ಮತ್ತು ಇಬ್ಬರ ವೈವಾಹಿಕ ಜೀವನವು (married life) ಸಂತೋಷದಿಂದ ತುಂಬಿರುತ್ತದೆ ಎಂದು ನಂಬಲಾಗಿದೆ.

Read more Photos on
click me!

Recommended Stories