ಎಚ್ಚರ! ಗರ್ಭಾವಸ್ಥೆಯಲ್ಲಿ ಈ ಆಹಾರ ಸೇವಿಸೋದ್ರಿಂದ ಬರುತ್ತೆ ಅಕಾಲಿಕ ಹೆರಿಗೆ ನೋವು

Published : Apr 25, 2023, 03:29 PM IST

ಗರ್ಭಾವಸ್ಥೆಯಲ್ಲಿ ಮಹಿಳೆಯರು ವಿಶೇಷ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಯಾವುದೇ ಆಹಾರ ಸೇವಿಸುವಾಗಲೂ ತುಂಬಾ ಯೋಚನೆ ಮಾಡಬೇಕು. ಕೆಲವೊಂದು ಆಹಾರ ಸೇವಿಸಿದ್ರೆ ಅದರಿಂದ ಹೆರಿಗೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತೆ. ಅಂತಹ ಆಹಾರಗಳು ಯಾವುವು? ಅವುಗಳನ್ನು ಯಾಕೆ ಅವಾಯ್ಡ್ ಮಾಡಬೇಕು ನೋಡೋಣ… 

PREV
18
ಎಚ್ಚರ! ಗರ್ಭಾವಸ್ಥೆಯಲ್ಲಿ ಈ ಆಹಾರ ಸೇವಿಸೋದ್ರಿಂದ ಬರುತ್ತೆ ಅಕಾಲಿಕ ಹೆರಿಗೆ ನೋವು

ಗರ್ಭಾವಸ್ಥೆಯಲ್ಲಿ (pregnancy) ಯಾವುದೇ ಆಹಾರ ತಿನ್ನುವಾಗ ಯೋಚಿಸಿ ಸೇವಿಸಬೇಕು. ಇಲ್ಲಾಂದ್ರೆ ಅದರಿಂದ ಹುಟ್ಟಲಿರುವ ಮಕ್ಕಳಿಗೂ ಸಮಸ್ಯೆಯಾಗುತ್ತೆ. ಅಥವಾ ಬೇಗನೆ ಹೆರಿಗೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ. ಇದರಿಂದ ಗರ್ಭಪಾತವೂ ಆಗಬಹುದು. ಹಾಗಾದ್ರೆ ಬನ್ನಿ, ಗರ್ಭಿಣಿ ಮಹಿಳೆಯರು ಯಾವ ಆಹಾರ ಸೇವಿಸಬಾರದು ನೋಡೋಣ… 

28

ಜೀರಿಗೆ ಚಹಾ (jeera water)
ಗರ್ಭಾವಸ್ಥೆಯಲ್ಲಿ ಬಿಸಿ ಜೀರಿಗೆ ಚಹಾ ಕುಡಿಯುವುದರಿಂದ ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಇದು ಎಷ್ಟೇ ಆರೋಗ್ಯಕರವಾಗಿದ್ದರೂ  ಗರ್ಭಾವಸ್ಥೆಯಲ್ಲಿ ಜೀರಿಗೆ ಚಹಾ ಸೇವಿಸುವ ತಪ್ಪು ಮಾಡಬಹುದು. 

38

ವಿನೆಗರ್ (Vinegar)
ಗರ್ಭಾವಸ್ಥೆಯಲ್ಲಿ, ವಿನೆಗರ್ ಸೇವಿಸುವ ತಪ್ಪನ್ನು ಯಾವತ್ತೂ ಮಾಡಲೇಬೇಡಿ. ವಿನೆಗರ್ ಹೆರಿಗೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ. ವಿನೇಗರ್ ಸೇವಿಸೋದು ಗರ್ಭಿಣಿ ಮಹಿಳೆಯರಿಗೆ ಹಾನಿಕಾರಕ ಎಂದು ತಿಳಿದು ಬಂದಿದೆ. 

48

ಪಪ್ಪಾಯಿ (Papaya)
ಗರ್ಭಾವಸ್ಥೆಯಲ್ಲಿ ಪಪ್ಪಾಯಿ ತಿನ್ನಬಾರದು ಎಂದು ಹಿಂದಿನ ಕಾಲದಿಂದಾನೂ ಹೇಳಿರೋದನ್ನು ಕೇಳಿರುತ್ತೇವೆ. ಹಸಿ ಪಪ್ಪಾಯಿಯಲ್ಲಿ ಪಪೈನ್ ಎಂಬ ಕಿಣ್ವವಿದೆ. ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸುತ್ತದೆ. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಇದನ್ನು ತೆಗೆದುಕೊಳ್ಳಬಾರದು.  

58

ಅನಾನಸ್ (Pineapple)
ಅನಾನಸ್ ಬ್ರೊಮೆಲೈನ್ ಅನ್ನು ಹೊಂದಿರುತ್ತದೆ. ಇದನ್ನು ತಿನ್ನೋದರಿಂದ ಗರ್ಭಿಣಿಯರಲ್ಲಿ ಅಕಾಲಿಕ ಹೆರಿಗೆ ನೋವು (pain in pregnancy) ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಇದನ್ನು ತೆಗೆದುಕೊಳ್ಳಬಾರದು.  

68

ಮಸಾಲೆಯುಕ್ತ ಆಹಾರ (spicy food)
ಹೆಚ್ಚಿನ ಜನರು ಮಸಾಲೆಯುಕ್ತ ಆಹಾರ ಸೇವಿಸಲು ಇಷ್ಟ ಪಡ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಅಥವಾ ಖಾರವಾದ ಅಥವಾ ಎಣ್ಣೆಯುಕ್ತ ಆಹಾರವು ಹೆರಿಗೆ ನೋವನ್ನು ಪ್ರಚೋದಿಸುತ್ತದೆ. ಆದ್ದರಿಂದ, ಇದನ್ನು ಸಹ ತಪ್ಪಿಸಬೇಕು.  

78

ರಾಸ್ಪ್ಬೆರಿ ಚಹಾ (Raspberry tea)

ರಾಸ್ಪೆರಿ ಚಹಾ ಆರೋಗ್ಯಕ್ಕೆ ಉತ್ತಮ ಅನ್ನೋದನ್ನು ನೀವು ಕೇಳಿರಬಹುದು. ಆದರೆ ಇದು ಗರ್ಭಿಣಿಯರಿಗೆ ಒಳ್ಳೇಯದಲ್ಲ. ರಾಸ್ಪ್ಬೆರಿ ಚಹಾವು ಗರ್ಭಾಶಯದ ಸ್ನಾಯುಗಳನ್ನು ಸಂಕುಚಿತಗೊಳಿಸಲು ಮತ್ತು ಟೋನ್ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಗರ್ಭಿಣಿಯರು ಇದನ್ನು ತೆಗೆದುಕೊಳ್ಳಬಾರದು.  

88

ಮುಲೇಟಿ (Mulethi or Jesthamadhu)
ಮುಲೇಟಿ ಅಥವಾ ಜೇಷ್ಠ ಮಧುವಿನಲ್ಲಿ ಲೈಕೋರೈಸ್ ಗ್ಲೈಸಿರ್ಹಿಜೆನ್ಸ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಗರ್ಭಾಶಯದ ಸಂಕೋಚನಗಳಲ್ಲಿ ಒಳಗೊಂಡಿರುವ ಪ್ರೊಸ್ಟಗ್ಲಾಂಡಿನ್‌ಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಇದನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.  

Read more Photos on
click me!

Recommended Stories