ಲೌಡ್ ಮ್ಯೂಸಿಕ್ ಕೇಳೋದ್ರಿಂದ ಗರ್ಭದಲ್ಲಿರುವ ಮಗುವಿಗೆ ಅಪಾಯ!

Published : Sep 07, 2022, 12:52 PM IST

ಗರ್ಭಧಾರಣೆ ಸಮಯ ತಾಯಿ ಮತ್ತು ಮಗು ಇಬ್ಬರಿಗೂ ತುಂಬಾನೆ ಸೂಕ್ಷ್ಮ ಸಮಯ. ತಾಯಿಯ ಪ್ರತಿಯೊಂದು ಚಟುವಟಿಕೆಯು ಮಗುವಿನ ಮೇಲೆ ಭಾರಿ ಪರಿಣಾಮ ಬೀರಬಹುದು. ಆದ್ದರಿಂದ, ಈ ದಿನಗಳಲ್ಲಿ ತಾಯಿ ತನ್ನ ಮತ್ತು ಮಗುವಿನ ಬಗ್ಗೆ ವಿಶೇಷ ಕಾಳಜಿ (Special care) ವಹಿಸುವುದು ಬಹಳ ಮುಖ್ಯ. ಎಲ್ಲಾ ವಿಷಯಗಳ ಕಡೆಗೆ ಗಮನ ಹರಿಸುವಂತೆ, ತಾಯಿ ದೊಡ್ಡ ಶಬ್ಧಗಳ ಬಗ್ಗೆ ಸಹ ಕಾಳಜಿ ವಹಿಸಬೇಕು. ಯಾಕಂದ್ರೆ ದೊಡ್ಡ ಶಬ್ದಕ್ಕೆ ನಿರಂತರವಾಗಿ ಒಡ್ಡಿಕೊಳ್ಳೋದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಪಾಯ. 

PREV
19
ಲೌಡ್ ಮ್ಯೂಸಿಕ್ ಕೇಳೋದ್ರಿಂದ ಗರ್ಭದಲ್ಲಿರುವ ಮಗುವಿಗೆ ಅಪಾಯ!

ಎರಡನೇ ತ್ರೈಮಾಸಿಕದ ಆರಂಭದಿಂದ, ಮಗು ಶಬ್ದಗಳನ್ನು ಕೇಳಲು ಪ್ರಾರಂಭಿಸುತ್ತೆ. ಹಾಗಾಗಿ, ದೊಡ್ಡ ಶಬ್ದಕ್ಕೆ ಒಡ್ಡಿಕೊಳ್ಳೋದು ಮಗು ಮತ್ತು ತಾಯಿಗೆ (Mother) ಕಿವಿ ಸಮಸ್ಯೆಗಳನ್ನು ಉಂಟು ಮಾಡಬಹುದು. ತಾಯಿಗೆ ಒತ್ತಡವಾಗಬಹುದು. ಆದುದರಿಂದ ಸಾಧ್ಯವಾದಷ್ಟು ದೊಡ್ಡ ಶಬ್ಧ ಕೇಳುವುದನ್ನು ಅವಾಯ್ಡ್ ಮಾಡಿ. 

29

ಎಲ್ಲಾ ಧ್ವನಿಗಳು ಗರ್ಭಿಣಿಯರಿಗೆ ಹಾನಿಕಾರಕವಲ್ಲ. ನೀವು ಅಹಿತಕರವೆಂದು ಭಾವಿಸುವ ಶಬ್ದಗಳು ನಿಮ್ಮ ಮಗುವಿಗೆ ಹಾನಿಕಾರಕವಾಗಬಹುದು. ಸಂಚಾರದಿಂದ ಬರುವ ಶಬ್ದ(Sound), ಎಮರ್ಜೆನ್ಸಿ ಸೈರನ್ , ಧ್ವನಿವರ್ಧಕ, ಸ್ಫೋಟಗಳು, ಜೋರಾದ ಸಂಗೀತ ಮತ್ತು ಯಂತ್ರಗಳಿಂದ ದೊಡ್ಡ ಶಬ್ದಗಳಿಗೆ ಒಡ್ಡಿಕೊಳ್ಳೋದು ಮಗುವಿನ ಬೆಳವಣಿಗೆಗೆ ಹಾನಿಯನ್ನುಂಟು ಮಾಡುತ್ತೆ. ಇದರಿಂದ ಮಗುವಿಗೆ ಶ್ರವಣ ಸಮಸ್ಯೆ ಉಂಟಾಗಬಹುದು ಅಥವಾ ಮಗು ಅಕಾಲಿಕವಾಗಿ ಜನಿಸಬಹುದು. 

39
ಗರ್ಭಾವಸ್ಥೆಯಲ್ಲಿ ಮಗುವಿನ ಮೇಲೆ ದೊಡ್ಡ ಶಬ್ದ ಭಾರಿ ಪರಿಣಾಮ ಬೀರುತ್ತೆ

ಶ್ರವಣ ಸಮಸ್ಯೆಗಳು(Hearing problem) - ಗರ್ಭಿಣಿಯರು ಹೆಚ್ಚು ಶಬ್ದಕ್ಕೆ ಒಡ್ಡಿಕೊಂಡಾಗ, ಅದು ಮಗುವಿಗೆ ಶ್ರವಣ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ಮಗುವಿಗೆ ಕಿವಿ ಕೇಳದೇ ಇರಬಹುದು, ಅಥವಾ ಕಿವಿಗೆ ಸಂಬಂಧಿಸಿದ ಇತರ ಸಮಸ್ಯೆಗಳು ಉಂಟಾಗುತ್ತವೆ.

49

ಭ್ರೂಣದ ಬೆಳವಣಿಗೆಯಲ್ಲಿ ಅಡಚಣೆ(Immature deveploment) - ಗರ್ಭಿಣಿ ಮಹಿಳೆಯರು ಹೆಚ್ಚು ಜೋರಾಗಿ ಶಬ್ದಗಳನ್ನು ಕೇಳೋದು ಭ್ರೂಣದ ಸಾಮಾನ್ಯ ಬೆಳವಣಿಗೆಗೆ ಅಡ್ಡಿಯಾಗುತ್ತೆ. ಇದರಿಂದಾಗಿ ಮಗು ಮಾನಸಿಕವಾಗಿ ದುರ್ಬಲವಾಗಬಹುದು. ಮಗುವಿನ ಬೆಳವಣಿಗೆಗೆ ಸಹ ಇದು ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತೆ.

59
ಅಕಾಲಿಕ ಜನನ (Premature baby)

 ಗರ್ಭಾವಸ್ಥೆಯಲ್ಲಿ ದೊಡ್ಡ ಶಬ್ದಗಳನ್ನು ಕೇಳೋದರಿಂದ ಮಗು ಅಕಾಲಿಕವಾಗಿ ಜನಿಸಬಹುದು, ಇದು ಮಗುವಿಗೆ ಮತ್ತು ತಾಯಿಗೆ ಹಾನಿಕಾರಕ. ಮಗು ಅಕಾಲಿಕವಾಗಿ ಜನಿಸಿದರೆ ಅದು ಹೆಚ್ಚು ಸಮಯ ಬದುಕುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ. ಆದುದರಿಂದ ಶಬ್ಧಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. 

69
ಜನನ ದೋಷ

- ಜನನ ದೋಷವು ಮಗುವಿನ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ(Mental) ಪರಿಣಾಮ ಬೀರುತ್ತೆ. ದೊಡ್ಡ ಶಬ್ದಗಳನ್ನು ಕೇಳೋದು ಮಗುವಿನಲ್ಲಿ ಜನನ ದೋಷಗಳ ಅಪಾಯವನ್ನು ಹೆಚ್ಚಿಸುತ್ತೆ. ಆದುದರಿಂದ ದೊಡ್ಡ ಶಬ್ಧ ಇರುವ ಕಡೆಗೆ ನೀವು ಹೋಗದೇ ಇದ್ದರೆ ಉತ್ತಮ. 

79
ಗರ್ಭಿಣಿಯರ(Pregnant) ಮೇಲೆ ಭಾರಿ ಶಬ್ದದ ಪರಿಣಾಮಗಳು

ಅತಿಯಾದ ಶಬ್ದವು ಗರ್ಭಿಣಿ ಮಹಿಳೆಯರ ಶ್ರವಣ ವ್ಯವಸ್ಥೆಯನ್ನು ಹಾನಿಗೊಳಿಸಬಹುದು. ಇದು ಗರ್ಭಿಣಿಯರಿಗೆ ಶ್ರವಣ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂದರೆ ಅವರು ಕಿವುಡಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತೆ.
ಗರ್ಭಿಣಿಯರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಾದ ನಿದ್ರೆಯನ್ನು ಪಡೆಯಬೇಕು. ಆದರೆ, ಅತಿಯಾದ ಶಬ್ದದಿಂದಾಗಿ ನಿದ್ರೆಯು ಪೂರ್ಣಗೊಳ್ಳೋದಿಲ್ಲ, ಇದು ಒತ್ತಡಕ್ಕೆ ಕಾರಣವಾಗಬಹುದು. ಇದರಿಂದ ಮಹಿಳೆಯರು ಮಾನಸಿಕವಾಗಿ ಹೆಚ್ಚು ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. 

89

ಹೆಚ್ಚಿನ ಮಟ್ಟದ ಶಬ್ದಕ್ಕೆ ಒಡ್ಡಿಕೊಳ್ಳೋದು ಗರ್ಭಿಣಿಯರಲ್ಲಿ ಒತ್ತಡದ ಅಪಾಯವನ್ನು ಹೆಚ್ಚಿಸುತ್ತೆ. ಒತ್ತಡದ ಹಾರ್ಮೋನುಗಳ ಹೆಚ್ಚಳವು ಅಕಾಲಿಕ ಜನನದ ಅಪಾಯ ಹೆಚ್ಚಿಸುತ್ತೆ. ಆದುದರಿಂದ ಮಹಿಳೆಯರು ಸಾಧ್ಯವಾದಷ್ಟು ಪ್ರಶಾಂತವಾಗಿರುವ(Peace) ಸ್ಥಳದಲ್ಲಿ ಇರೋದು ಉತ್ತಮ ಎಂದು ಹೇಳಲಾಗುತ್ತೆ.

99

ಗರ್ಭಿಣಿಯರು 8 ಗಂಟೆವರೆಗೆ 80 ಡೆಸಿಬೆಲ್ ಗಿಂತ ಹೆಚ್ಚಿನ ಧ್ವನಿಯಲ್ಲಿ ಮ್ಯೂಸಿಕ್ (Music)ಕೇಳುತ್ತಿದ್ದರೆ, ಅದರಿಂದ ಅಕಾಲಿಕ ಹೆರಿಗೆಯ ಅಪಾಯವು ಹೆಚ್ಚಾಗಬಹುದು. 
ಅತಿಯಾದ ಶಬ್ದಕ್ಕೆ ನಿರಂತರವಾಗಿ ಒಡ್ಡಿಕೊಳ್ಳೋದು ಮಗುವಿನಲ್ಲಿ ಕಡಿಮೆ ಜನನ ತೂಕಕ್ಕೆ ಕಾರಣವಾಗಬಹುದು. 

Read more Photos on
click me!

Recommended Stories