Cleaning Tips: ಹಲ್ಲುಜ್ಜಲು ಮಾತ್ರವಲ್ಲ ಟೂತ್‌ಪೇಸ್ಟ್‌ನ್ನು ಹೀಗೆಲ್ಲಾ ಬಳಸ್ಬೋದು

Published : Sep 05, 2022, 01:28 PM ISTUpdated : Sep 05, 2022, 02:09 PM IST

ಸಾಮಾನ್ಯವಾಗಿ ಹಲ್ಲುಜ್ಜಲು ಎಲ್ಲರೂ ಟೂತ್‌ಪೇಸ್ಟ್‌ನ್ನು ಬಳಸ್ತಾರೆ. ಆದ್ರೆ ಹಲ್ಲನ್ನು ಸ್ವಚ್ಛಗೊಳಿಸುತ್ತೆ ಎಂದು ನಾವೆಲ್ಲರೂ ಅಂದುಕೊಂಡಿರುವ ಟೂತ್‌ಪೇಸ್ಟ್‌ನ ಪ್ರಯೋಜನ ಅಷ್ಟಕ್ಕೇ ಸೀಮಿತವಾಗಿಲ್ಲ. ಮತ್ತೇನಕ್ಕೆಲ್ಲಾ ಇದನ್ನು ಬಳಸ್ತಾರೆ. ನೀವು ತಿಳಿದಿರದ ಹಲವು ಮಾಹಿತಿಗಳು ಇಲ್ಲಿವೆ.

PREV
17
Cleaning Tips: ಹಲ್ಲುಜ್ಜಲು ಮಾತ್ರವಲ್ಲ ಟೂತ್‌ಪೇಸ್ಟ್‌ನ್ನು ಹೀಗೆಲ್ಲಾ ಬಳಸ್ಬೋದು

ಟೂತ್‌ಪೇಸ್ಟ್‌ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮಾತ್ರ ಕೆಲಸ ಮಾಡುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಅನೇಕ ಇತರ ಪ್ರಯೋಜನಗಳನ್ನು ಹೊಂದಿದೆ. ಟೂತ್ ಪೇಸ್ಟ್‌ನ್ನು ಸಾಮಾನ್ಯವಾಗಿ ಹಲವು ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಹೀಗಾಗಿ ಇದು ಯಾವುದೇ ರೀತಿಯ ಕಠಿಣ ಕಲೆಗಳನ್ನು ತೆಗೆದುಹಾಕುತ್ತದೆ. ಟೂತ್ ಪೇಸ್ಟ್ ಬಳಸಿ ಮನೆಯಲ್ಲಿ ಯಾವೆಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸಬಹುದು ಎಂದು ತಿಳಿಯೋಣ.

27

ಫೋನ್ ಕವರ್
ಫೋನ್ ಅಥವಾ ಕವರ್ ಅನ್ನು ಪ್ರತ್ಯೇಕವಾಗಿ ಸ್ವಚ್ಛಗೊಳಿಸಲಾಗುವುದಿಲ್ಲ. ಅದಕ್ಕಾಗಿಯೇ ಅದರ ಮೇಲೆ ಕಲೆಗಳು ಉಳಿಯುತ್ತವೆ. ಆದರೆ ಟೂತ್ ಪೇಸ್ಟ್ ಬಳಸಿ ಫೋನ್ ಕವರ್ ಕ್ಲೀನ್ ಮಾಡಬಹುದು. ಇದಕ್ಕಾಗಿ, ಟೂತ್‌ಪೇಸ್ಟ್ ಅನ್ನು ಕವರ್‌ನಲ್ಲಿ 2ರಿಂದ 3 ನಿಮಿಷಗಳ ಕಾಲ ಇರಿಸಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಕಾರಣದಿಂದಾಗಿ, ಫೋನ್‌ ಕಲೆಗಳಲ್ಲಿರುವ ಹಳದಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಾಗುತ್ತದೆ.

37

ಲಿಪ್‌ಸ್ಟಿಕ್ ಕಲೆಗಳು
ಬಟ್ಟೆಯ ಮೇಲಿನ ಲಿಪ್‌ಸ್ಟಿಕ್ ಕಲೆಗಳನ್ನು ಸುಲಭವಾಗಿ ತೆಗೆಯಲಾಗುವುದಿಲ್ಲ. ಎಷ್ಟು ತೊಳೆದರೂ ಬಣ್ಣ ಹಾಗೆಯೇ ಎದ್ದು ಕಾಣುತ್ತಿರುತ್ತದೆ. ಆದರೆ, ಇಂಥಾ ಕಲೆಗಳನ್ನು ತೆಗೆದುಹಾಕುವಲ್ಲಿ ಟೂತ್‌ಪೇಸ್ಟ್‌ ಪರಿಣಾಮಕಾರಿಯಾಗಿದೆ. ಇದಕ್ಕಾಗಿ ಲಿಪ್ ಸ್ಟಿಕ್ ಕಲೆಗಳಿರುವ ಜಾಗದಲ್ಲಿ ಟೂತ್ ಪೇಸ್ಟ್ ಹಚ್ಚಿ ಸ್ವಲ್ಪ ಸಮಯದ ನಂತರ ಬ್ರಶ್ ನಿಂದ ಸ್ವಚ್ಛಗೊಳಿಸಿದರೆ ಕಲೆಗಳು ಮಾಯವಾಗುತ್ತವೆ.

47

ಚಹಾ ಕಲೆಗಳು
ಮೇಜಿನ ಮೇಲಿನ ಚಹಾ ಕಲೆಗಳು ಹಾಗೆಯೇ ಇರುತ್ತವೆ. ಚಹಾದ ಕಲೆಗಳು ದೀರ್ಘಕಾಲದವರೆಗೆ ಬಿಟ್ಟರೆ ಇನ್ನಷ್ಟು ಗಾಢವಾಗುತ್ತದೆಯೇ ವಿನಃ ಏನೇ ಮಾಡಿದರೂ ಇವುಗಳನ್ನು ತೆಗೆಯಲಾಗುವುದಿಲ್ಲ. ಆದರೆ ಈ ಕಲೆಗಳಿಗೆ ಸ್ವಲ್ಪ ಟೂತ್ ಪೇಸ್ಟ್ ಹಚ್ಚಿ ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿದರೆ ಕಲೆಗಳು ಮಾಯವಾಗುತ್ತವೆ.

57

ಬೆಳ್ಳಿ ಆಭರಣ
ಬೆಳ್ಳಿ ಆಭರಣಗಳು ಬಹುದಿನಗಳ ನಂತರ ಹಳೆಯದಾಗಿ ಕಪ್ಪಾಗುತ್ತವೆ. ಆದರೆ ಅನೇಕ ಜನರು ಅವುಗಳನ್ನು ಸ್ವಚ್ಛಗೊಳಿಸಲು ಸೋಪ್ ಅನ್ನು ಬಳಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಬೆಳ್ಳಿಯಾಭರಣ ಸಂಪೂರ್ಣವಾಗಿ ಕ್ಲೀನ್ ಆಗುವುದಿಲ್ಲ. ಇಂಥಾ ಸಂದರ್ಭದಲ್ಲಿ ಆಭರಣಗಳನ್ನು ಸ್ವಚ್ಛಗೊಳಿಸಲು ಟೂತ್‌ಪೇಸ್ಟ್ ಬಳಸಬಹುದು. ಟೂತ್‌ಪೇಸ್ಟ್ ಬೆಳ್ಳಿಯ ಆಭರಣಗಳನ್ನು ಬೆಳ್ಳಗೆ ಹೊಳೆಯುವಂತೆ ಮಾಡುತ್ತದೆ. ಬೆಳ್ಳಿ ಆಭರಣಗಳಿಗೆ ಟೂತ್ ಪೇಸ್ಟ್ ಹಚ್ಚಿ 20 ನಿಮಿಷಗಳ ಕಾಲ ಬ್ರಷ್ ನಿಂದ ಕ್ಲೀನ್ ಮಾಡಿದರೆ ಕಪ್ಪು ಕಲೆಯೆಲ್ಲಾ ಹೋಗುತ್ತದೆ.

67

ವಾಟರ್ ಬಾಟಲ್‌
ಕುಡಿಯುವ ನೀರಿನ ಬಾಟಲಿಯನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸುವುದು ತುಂಬಾ ಮುಖ್ಯ. ಆದ್ರೆ ತುಂಬಾ ಮಂದಿ ಸುಮ್ಮನೆ ನೀರು ಹಾಕಿ ಕುಲುಕಿಸಿ ವಾಟರ್‌ ಬಾಟಲ್ ತೊಳೆಯುವುನ್ನು ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಬಾಟಲಿ ಸ್ವಚ್ಛವಾಗುವುದಿಲ್ಲ. ಇದರ ಬದಲು ಬಾಟಲಿಯೊಳಗೆ ಸ್ಪಲ್ಪ ಟೂತ್‌ಪೇಸ್ಟ್ ಹಾಕಿ ನೀರು ಹಾಕಿ ತೊಳದರೆ ಬಾಟಲಿ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. 

77

ಕ್ರಯಾನ್ಸ್‌ ಕಲೆ
ಮಕ್ಕಳು ಕ್ರಯಾನ್ಸ್‌ನಲ್ಲಿ ಚಿತ್ರ ಬಿಡಿಸೋದಕ್ಕೆ ಇಷ್ಟ ಪಡ್ತಾರೆ. ಜೊತೆಗೆ ಅವುಗಳನ್ನು ಬಳಸಿಕೊಂಡು ಗೋಡೆಯಲ್ಲಿ ಸಿಕ್ಕಿದ್ದನ್ನೆಲ್ಲಾ ಗೀಚುತ್ತಾ ಆಟವಾಡುತ್ತಾರೆ. ಮಕ್ಕಳು ಹೀಗೆ ಆಟವಾಡುವಾಗ ನೋಡೋಕೇನೋ ಚೆನ್ನಾಗಿರುತ್ತದೆ. ಆದ್ರೆ ಗೋಡೆಯಲ್ಲಿ ಮೂಡುವ ಇಂಥಾ ಕ್ರಯಾನ್ಸ್ ಕಲೆಗಳನ್ನು ತೆಗೆಯುವುದು ಕಷ್ಟ. ಆದ್ರೆ ಟೂತ್‌ಪೇಸ್ಟ್‌ನಿಂದ ಇಂಥಾ ಕಲೆಯನ್ನು ತೆಗೆಯಲು ಸಾಧ್ಯವಾಗುತ್ತದೆ. 

click me!

Recommended Stories