Budget 2023: ಕೈಮಗ್ಗ ಸೀರೆಯ ಮೇಲಿನ ಪ್ರೀತಿ ಸಾಬೀತುಪಡಿಸಿದ ಸಚಿವೆ, ಕೆಂಪು ಬಣ್ಣದ ಇಳಕಲ್ ಸೀರೆಯಲ್ಲಿ ನಿರ್ಮಲಾ

First Published | Feb 1, 2023, 10:23 AM IST

ಕೇಂದ್ರ ಬಜೆಟ್ 2023 ಇಂದು ಮಂಡನೆಯಾಗ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್ ದಿನದ ಸೀರೆಗಳು ಯಾವಾಗಲೂ ಮಹತ್ವದ್ದಾಗಿವೆ. ಕಳೆದ ನಾಲ್ಕು ಬಜೆಟ್ ಅಧಿವೇಶನಗಳಲ್ಲಿ ಅವರು ಏನು ಧರಿಸಿದ್ದರು ಎಂಬುದನ್ನು ನೋಡೋಣ:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದು ಅವರ 5ನೇ ಬಜೆಟ್‌. 2024ರ ಲೋಕಸಭಾ ಚುನಾವಣೆಗೂ ಮುನ್ನ ಇದು ಕೊನೆಯ ಪೂರ್ಣ ಬಜೆಟ್ ಆಗಿದೆ. ಪ್ರತಿ ಬಾರಿಯೂ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಆಯ್ಕೆ ಮಾಡಿಕೊಳ್ಳುವ ಸೀರೆ ಹೆಚ್ಚು ಮಹತ್ವ ವಹಿಸುತ್ತದೆ. ಈ ಬಾರಿ ಬಜೆಟ್ ಮಂಡನೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಕಪ್ಪು ಅಂಚು ಹೊಂದಿರುವ ಗಾಢ ಕೆಂಪು ಸೀರೆಯನ್ನು ಆಯ್ಕೆ ಮಾಡಿದ್ದಾರೆ. ಸಾಂಪ್ರದಾಯಿಕ ಕಾಟನ್ ಇಳಕಲ್‌ ಸೀರೆ ಟೆಂಪಲ್ ಬಾರ್ಡರ್ ಹೊಂದಿತ್ತು.

ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕೈಮಗ್ಗ ಸೀರೆಯ ಮೇಲಿನ ಪ್ರೀತಿ ಹೊಸದೇನಲ್ಲ, ಆದರೆ ಬಜೆಟ್ ದಿನದಂದು ಅವರ ಉಡುಗೆಯ ಆಯ್ಕೆಯು ಯಾವಾಗಲೂ ಆಸಕ್ತಿಯ ವಿಷಯವಾಗಿ ಉಳಿದಿದೆ, ಅವರು ಧರಿಸಲು ಆಯ್ಕೆ ಮಾಡುವ ಬಣ್ಣದಿಂದ ಬಜೆಟ್‌ನ ಒಟ್ಟಾರೆ ಮನಸ್ಥಿತಿಯ ಬಗ್ಗೆ ಯಾವುದೇ ಸುಳಿವುಗಳನ್ನು ಹುಡುಕುತ್ತಾರೆ. ಸಾಮಾನ್ಯವಾಗಿ, ಹಣಕಾಸು ಸಚಿವರು ಬಜೆಟ್ ದಿನದಂದು ಗಾಢ ಬಣ್ಣದ ಸೀರೆಯನ್ನು ಆರಿಸಿಕೊಳ್ಳುತ್ತಾರೆ. 

Latest Videos


ಕೇಂದ್ರ ಬಜೆಟ್ 2022
2022ರಲ್ಲಿ ಬಜೆಟ್ ಮಂಡಿಸುವಾಗ, ಹಣಕಾಸು ಸಚಿವೆ ಮೆರೂನ್ ಕೈಮಗ್ಗದ ಬೊಮ್ಕೈ ನೇಯ್ಗೆ ಸೀರೆ ಧರಿಸಿದ್ದರು.ಇದರ ಬಾರ್ಡರ್‌ನಲ್ಲಿ ಬೆಳ್ಳಿ ದಾರದ ಕುಸುರಿ ಕೆಲಸ ಮಾಡಲಾಗಿತ್ತು. ಬೊಮ್ಕೈ ಸೀರೆಯನ್ನು ಸಾಮಾನ್ಯವಾಗಿ ಒಡಿಶಾದಲ್ಲಿ ತಯಾರಿಸಲಾಗುತ್ತದೆ. ಮಣ್ಣಿನ ಬಣ್ಣದ ಸೀರೆ ಮತ್ತು ವಿನ್ಯಾಸವು ಸಚಿವರ ಸರಳತೆಯನ್ನು ಸೂಚಿಸಿತ್ತು.

ಕೇಂದ್ರ ಬಜೆಟ್ 2021
2021ರಲ್ಲಿ, ನಿರ್ಮಲಾ ಸೀತಾರಾಮನ್ ಕೆಂಪು ಮತ್ತು ಬಿಳಿ ಬಣ್ಣದ ರೇಷ್ಮೆ ಪೊಚಂಪಲ್ಲಿ ಸೀರೆಯನ್ನು ಇಕ್ಕತ್‌ ಮಾದರಿಯೊಂದಿಗೆ ಧರಿಸಿದ್ದರು.
ಇದಕ್ಕೆ ಹೊಂದಿಕೆಯಾಗುವ ಕೆಂಪು ಬ್ಲೌಸ್‌ ಪೇರ್ ಮಾಡಿದ್ದರು. ಪೋಚಂಪಲ್ಲಿ ಇಕ್ಕತ್‌ ಅನ್ನು ಸಾಂಪ್ರದಾಯಿಕವಾಗಿ ತೆಲಂಗಾಣದ ಭೂದಾನ ಪೋಚಂಪಲ್ಲಿಯಲ್ಲಿ ತಯಾರಿಸಲಾಗುತ್ತದೆ. ಪೋಚಂಪಲ್ಲಿಯನ್ನು 'ಭಾರತದ ರೇಷ್ಮೆ ನಗರ' ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.

ಕೇಂದ್ರ ಬಜೆಟ್ 2020
2020ರಲ್ಲಿ, ಬಜೆಟ್ ದಿನದ ಸೀರೆ, ನೀಲಿ ಬಣ್ಣದ ಅಂಚು ಹೊಂದಿರುವ ಹಳದಿ ರೇಷ್ಮೆ ಸೀರೆಯಾಗಿತ್ತು. ನೀಲಿ ಬಾರ್ಡರ್‌ನ ಹಳದಿ ಚಿನ್ನದ ರೇಷ್ಮೆ ಸೀರೆಯನ್ನು ಮತ್ತು ಮ್ಯಾಚಿಂಗ್ ಬ್ಲೌಸ್ ಅನ್ನು ಆಯ್ಕೆ ಮಾಡಿದರು. ಸಮೃದ್ಧಿಯನ್ನು ಸೂಚಿಸುವ ಗಾಢವಾದ ಬಣ್ಣ, ಮತ್ತು ಕಡಿಮೆ-ಅಭಿಲಾಷೆಯ ಶೈಲಿಯ ಉಡುಪುಗಳು ವರ್ಷದ 'ಆಕಾಂಕ್ಷೆಯ ಭಾರತ' ಥೀಮ್‌ಗೆ ಅನುಗುಣವಾಗಿತ್ತು.

ಕೇಂದ್ರ ಬಜೆಟ್ 2019
ಚೊಚ್ಚಲ ಬಜೆಟ್‌ನಲ್ಲಿ, ಸೀತಾರಾಮನ್, ಗುಲಾಬಿ ಮಂಗಳಗಿರಿ ರೇಷ್ಮೆಯನ್ನು ಧರಿಸಿದ್ದರು. ಇದು ಚಿನ್ನದ ಬಾರ್ಡರ್‌ ಹೊಂದಿತ್ತು. ಬಜೆಟ್ ಮಂಡನೆಯ ಮೊದಲು ಅವರು ಬ್ರೀಫ್‌ಕೇಸ್‌ನ ಬದಲಿಗೆ ಬಜೆಟ್ ಪೇಪರ್‌ಗಳನ್ನು ಕಟ್ಟಲು ಸಾಂಪ್ರದಾಯಿಕ 'ಬಹಿ ಖಾತಾ'ವನ್ನು ಆರಿಸಿಕೊಂಡರು.

2019ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಹಣಕಾಸು ಸಚಿವರು ಪ್ರತಿ ವರ್ಷ ಕೇಂದ್ರ ಬಜೆಟ್ ಮಂಡಿಸುವಾಗ ಅರ್ಥಪೂರ್ಣವಾದ ಕೈಮಗ್ಗ ಸೀರೆಗಳನ್ನು ಧರಿಸುತ್ತಾರೆ. ಭಾರತೀಯ ಜವಳಿ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿರುವ ಸೀತಾರಾಮನ್ ಅವರು ಕೈಮಗ್ಗದ ಸೀರೆಗಳನ್ನು ಉತ್ತೇಜಿಸುವ ಬಗ್ಗೆ ಯಾವಾಗಲೂ ಧ್ವನಿಯೆತ್ತಿದ್ದಾರೆ. 2019ರಲ್ಲಿ, ಅವರು ಭಾರತೀಯ ಜವಳಿಗಳ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ರೇಷ್ಮೆ ಅಥವಾ ಹತ್ತಿ, ಒರಿಸ್ಸಾ-ಕೈಮಗ್ಗ ಸೀರೆಗಳು ನನ್ನ ಮೆಚ್ಚಿನವುಗಳಲ್ಲಿ ಒಂದಾಗಿದೆ- ಬಣ್ಣ, ನೇಯ್ಗೆ, ವಿನ್ಯಾಸ, ತುಂಬಾ ಒಳ್ಳೆಯದು ಎಂದು ಸಚಿವೆ ಹೇಳಿದ್ದರು.

click me!