ನಿಮ್ಮಲ್ಲಿ ಈ ಗುಣಗಳೆಲ್ಲಾ ಇವೆಯಾ, ಹಾಗಾದ್ರೆ ಗಂಡಸರು ಫಿದಾ ಆಗೋದು ಗ್ಯಾರಂಟಿ ಬಿಡಿ!

First Published Jan 31, 2023, 3:38 PM IST

ಪುರುಷರು ತಮ್ಮ ಸಂಗಾತಿಯಾಗಿ ಬರುವ ಮಹಿಳೆ ಕೆಲವು ವಿಶೇಷ ಗುಣಗಳನ್ನು ಹೊಂದಿರಬೇಕೆಂದು ಬಯಸುತ್ತಾರೆ. ಪುರುಷರನ್ನು ಅಟ್ರ್ಯಾಕ್ಟ್ ಮಾಡುವ ಆ ಗುಣಗಳು ಯಾವುವು ತಿಳಿಯೋಣ.

ಜೀವನದಲ್ಲಿ ಉತ್ತಮ ಸಂಗಾತಿಯನ್ನು ಪಡೆಯಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದರಲ್ಲೂ ಕೆಲವು ವಿಶೇಷ ಗುಣಗಳಿರುವವರು ಬೇಗನೇ ಇಷ್ಟವಾಗುತ್ತಾರೆ. ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ, ಯಾರಾದರೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರು ಹೀಗೆಯೇ ಇರಬೇಕೆಂದು ಅಂದುಕೊಳ್ಳುತ್ತಾರೆ.

ಅದರಲ್ಲೂ ಪುರುಷರು ತಮ್ಮ ಸಂಗಾತಿಯಾಗಿ ಬರುವ ಮಹಿಳೆ ಕೆಲವು ವಿಶೇಷ ಗುಣಗಳನ್ನು ಹೊಂದಿರಬೇಕೆಂದು ಬಯಸುತ್ತಾರೆ. ಪುರುಷರನ್ನು ಅಟ್ರ್ಯಾಕ್ಟ್ ಮಾಡುವ ಆ ಗುಣಗಳು ಯಾವುವು ತಿಳಿಯೋಣ.

ಪ್ರಾಮಾಣಿಕವಾಗಿರುವುದು ಮುಖ್ಯ: ಸಂಬಂಧದಲ್ಲಿ ಯಾವಾಗಲೂ ನಂಬಿಕೆ ಅನ್ನೋದು ತುಂಬಾ ಮುಖ್ಯವಾಗುತ್ತದೆ. ಹೀಗಾಗಿ ಸಂಬಂಧದಲ್ಲಿದ್ದಾಗ ಯಾವಾಗಲೂ ಪ್ರಾಮಾಣಿಕ ಮತ್ತು ಸತ್ಯವಂತರಾಗಿರಿ. ಆದರೆ ಮಿತಿಗಳನ್ನು ಗುರುತಿಸಿಕೊಳ್ಳುವುದನ್ನು ಮರೆಯದಿರಿ. ಪ್ರಾಮಾಣಿಕತೆಯ ಮಹತ್ವವನ್ನು ನಿಮ್ಮ ಸಂಗಾತಿಗೆ ಮನವರಿಕೆ ಮಾಡಿಕೊಡಿ. ಇದರಿಂದ  ಸಂಬಂಧವು ಅಭಿವೃದ್ಧಿ ಹೊಂದುತ್ತದೆ. ಪ್ರಾಮಾಣಿಕತೆ ನಿಜವಾಗಿಯೂ ಅತ್ಯುತ್ತಮ ನೀತಿಯಾಗಿದೆ. ಹೀಗೆ ಪ್ರಾಮಾಣಿಕ ಮಹಿಳೆಯರನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ.

ಹೆಚ್ಚು ಪ್ರೀತಿಸಬೇಕು: ಪ್ರೀತಿಯಿಲ್ಲದೆ ಯಾವ ಸಂಬಂಧವೂ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಸಂಗಾತಿಗಳ ಮಧ್ಯೆ ಪ್ರೀತಿಯಿರಬೇಕಾದುದು ತುಂಬಾ ಮುಖ್ಯ. ಪುರುಷರು ಮಹಿಳೆಯಲ್ಲಿ ಹುಡುಕುವ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು ಪ್ರೀತಿ. ದೈಹಿಕವಾಗಿ ನಿಮ್ಮ ಸಂಗಾತಿಗೆ ಹತ್ತಿರವಾಗುವುದಲ್ಲದೆ ಮಾನಸಿಕವಾಗಿಯೂ ಸಾಮೀಪ್ಯ ಪಡೆದುಕೊಳ್ಳಲು ಪ್ರೀತಿ ಬೇಕೇ ಬೇಕು. 

ಸಹೃದಯತೆ: ದಯೆ, ಕರುಣೆ, ಸಹಾನೂಭೂತಿ ಎಲ್ಲರಲ್ಲಿಯೂ ಇರಬೇಕಾದ ಗುಣಗಳಾಗಿವೆ. ಆದರೆ ಸ್ತ್ರೀಯಲ್ಲಿ ಈ ಗುಣಗಳು ತುಸು ಹೆಚ್ಚಾಗಿಯೇ ಇರುತ್ತದೆ. ಸಹೃದಯತೆ ಇರುವ ಮಹಿಳೆಯರ ಮನಸ್ಸು ಪರಿಶುದ್ಧವಾಗಿರುತ್ತದೆ. ಪುರುಷರು ಇಂಥಾ ಮಹಿಳೆಯರನ್ನು ಹೆಚ್ಚು ಇಷ್ಟಪಡುತ್ತಾರೆ. 

ವಿಪರೀತ ಬೇಡಿಕೆಗಳು: ಮದುವೆಯಾದ ಮೇಲೆ ಬಹುತೇಕ ಹೆಂಡ್ತಿಯರ ಡಿಮ್ಯಾಂಡ್‌ಗಳು ಹೆಚ್ಚುತ್ತಾ ಹೋಗುತ್ತವೆ. ಗಂಡನಾದವನು ಇದನ್ನು ಪೂರೈಸಲು ಒದ್ದಾಡಬೇಕಾಗುತ್ತದೆ. ಇದರಲ್ಲಿ ಎಲ್ಲಾ ಒತ್ತಡವು ಹಣ ಅಥವಾ ಕೆಲಸಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅವನ ವೃತ್ತಿಜೀವನದ ಬಗ್ಗೆ ಅವನಿಗೆ ಕೆಟ್ಟ ಭಾವನೆ ಮೂಡಿಸುವ ಪ್ರಯತ್ನಗಳು ಮತ್ತು ಸಂಬಂಧವನ್ನು ಕೊನೆಗೊಳಿಸಲು ಅವನನ್ನು ಬ್ಲ್ಯಾಕ್‌ಮೇಲ್ ಮಾಡುವ ಪುನರಾವರ್ತಿತ ಪ್ರಯತ್ನಗಳು ಸೇರಿವೆ. ಇಂಥವರನ್ನು ಪುರುಷರು ಇಷ್ಟಪಡುವುದಿಲ್ಲ.

ಮಾತುಗಳನ್ನು ಆಲಿಸುವುದು ಮುಖ್ಯ: ಹೆಂಗಸರಿಗೆ ಸಾಮಾನ್ಯವಾಗಿ ವಾದಿಸುವ ಬುದ್ಧಿ ಹೆಚ್ಚಾಗಿರುತ್ತದೆ. ಏನೇ ಮಾತನಾಡಿದರೂ ಅದಕ್ಕೆ ಪ್ರತ್ಯುತ್ತರವನ್ನು ನೀಡೇ  ನೀಡುತ್ತಾರೆ. ಹೀಗೆ ಮಾಡುವುದು ಎಲ್ಲಾ ಗಂಡಸರಿಗೂ ಇಷ್ಟವಾಗುವುದಿಲ್ಲ. ತಮ್ಮ ಮಾತುಗಳನ್ನು ಕೇಳುವವರು ಸಹ ಇರಬೇಕು ಎಂದು ಅವರು ಅಂದುಕೊಳ್ಳುತ್ತಾರೆ. ತಮ್ಮ ಮಾತನ್ನು ಆಲಿಸುವವರು ಅವರಿಗೆ ಹೆಚ್ಚು ಇಷ್ಟವಾಗುತ್ತಾರೆ.

ಕಷ್ಟ ಬಂದಾಗ ಜೊತೆ ನಿಲ್ಲುವವರು: ಪುರುಷರು ಬೆಂಬಲ, ಪ್ರೋತ್ಸಾಹ ಮತ್ತು ಸಹಾನುಭೂತಿಯನ್ನು ನೀಡುವ ಮಹಿಳೆಯರನ್ನು ಹುಡುಕುತ್ತಾರೆ. ನಿರಂತರವಾಗಿ ದೂರು ನೀಡುವ ಅಥವಾ ಕ್ಷುಲ್ಲಕ ವಿಷಯಗಳನ್ನು ಪ್ರಸ್ತಾಪಿಸುವ ವ್ಯಕ್ತಿಯೊಂದಿಗೆ ಸಮಯ ಕಳೆಯಲು ಯಾರೂ ಇಷ್ಟಪಡುವುದಿಲ್ಲ. ಕಷ್ಟದ ಸಂದರ್ಭಗಳಲ್ಲಿ ತಮ್ಮೊಂದಿಗೆ ನಿಲ್ಲುವ ಮಹಿಳೆಯನ್ನು ಪುರುಷರು ಬಯಸುತ್ತಾರೆ.

click me!