ಮೇಕಪ್‌ ಎಡವಟ್ಟು: ವಿಕಾರವಾಯ್ತು ಮದುಮಗಳ ಮುಖ, ಮದುವೆ ಕ್ಯಾನ್ಸಲ್ ಮಾಡಿದ ವರ!

Published : Mar 03, 2023, 12:08 PM ISTUpdated : Mar 03, 2023, 12:29 PM IST

ಮದ್ವೆ ಅಂದ್ಮೇಲೆ ರೆಡಿಯಾಗೋಕೆ ಬ್ಯೂಟಿಪಾರ್ಲರ್‌ಗೆ ಹೋಗೋಕೆ ಇರದೇ ಆಗುತ್ತಾ ? ಹಾಗೆಯೇ ಇಲ್ಲೊಬ್ಬಳು ವಧು ಮದ್ವೆಯಲ್ಲಿ ಸಖತ್ತಾಗಿ ಕಾಣ್ಬೇಕು ಅಂತ ಮುಖವನ್ನು ಅಂದಗೊಳಿಸಲು ಪಾರ್ಲರ್‌ಗೆ ಹೋದ್ರೆ, ಮುಖ ಪರಿಚಯವೇ ಸಿಗದಷ್ಟು ವಿರೂಪವಾಗಿ ಹೋಗಿದೆ. ಸಾಲದ್ದಕ್ಕೆ ವಧು ಆಸ್ಪತ್ರೆಗೆ ಕೂಡಾ ಸೇರಿದ್ದಾಳೆ.

PREV
17
ಮೇಕಪ್‌ ಎಡವಟ್ಟು: ವಿಕಾರವಾಯ್ತು ಮದುಮಗಳ ಮುಖ, ಮದುವೆ ಕ್ಯಾನ್ಸಲ್ ಮಾಡಿದ ವರ!

ಮದುವೆ ಅಂದಾಗ ಹುಡುಗಿಯರು ಬ್ಯೂಟಿಪಾರ್ಲರ್‌ಗೆ ಹೋಗೇ ಹೋಗ್ತಾರೆ. ಮದುವೆ ದಿನ ಚೆನ್ನಾಗಿ ಕಾಣಿಸಬೇಕೆಂದು ಬೆಸ್ಟ್ ಮೇಕಪ್ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬಳು ಯುವತಿ ಅದಕ್ಕಾಗಿ ಪಾರ್ಲರ್‌ಗೆ ತೆರಳಿ ಮುಖವನ್ನು ಅಂದಗೊಳಿಸಲು ಹೋಗಿ ಮುಖವೇ ವಿರೂಪ ಮಾಡಿಕೊಂಡಿದ್ದಾಳೆ. ಈ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.

27

ಮದುವೆ ಸಡಗರ ಸಂಭ್ರಮದಲ್ಲಿದ್ದ ವಧು ಮೇಕಪ್ ಮಾಡಿದ ಕಾರಣ ಎಡವಟ್ಟಾಗಿ ಆಸ್ಪತ್ರೆ ಸೇರಿದ್ದಾಳೆ. ಮದುವೆಯಾಗಿ ಹನಿಮೂನ್ ಹೋಗಬೇಕಾದ ಯುವತಿ ಆಸ್ಪತ್ರೆಯ ಐಸಿಯು ಸೇರಿದ್ದಾಳೆ. ಯುವತಿ ಹೊಸ ಮಾದರಿಯ ಮೇಕಪ್‍ ಮಾಡಿಯಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ. ಬ್ಯೂಟಿ ಪಾರ್ಲರ್‌ನವರು ಮೇಕಪ್ ಮಾಡುವುದಾಗಿ ಹೇಳಿ ಸ್ಟೀಮ್ ತೆಗೆದುಕೊಂಡಿದ್ದು. ಇದಾದ ಬಳಿಕ ವಧುವಿನ ಮುಖ ಊದಿಕೊಂಡು, ಸುಟ್ಟಂತೆ ಕಪ್ಪಾಗಿದೆ.

37

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಇಂತಹ ಘಟನೆ ನಡೆದಿದೆ. ಅರಸೀಕೆಯ ನಿಶ್ಚಿತಾರ್ಥವಾಗಿದ್ದ ಯುವತಿ ಮದುವೆಗಾಗಿ ಮೇಕಪ್ ಮಾಡಿಸಿಕೊಳ್ಳಲು ಗಂಗಾ ಬ್ಯೂಟಿ ಪಾರ್ಲರ್ ಗೆ ಹೋಗಿದ್ದಳು. ಈ ವೇಳೆ ಬ್ಯೂಟಿ ಪಾರ್ಲರ್‌ ಆಂಟಿ ಮೇಕಪ್ ಮಾಡಿದ್ದಳು. ಅದ್ಯಾವ ಮೇಕಪ್ ಕ್ರೀಮ್ ಹಾಕಿದಳೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಮುಖ ಉರಿ ಬಂದಿದೆ. ಅಲ್ಲದೇ ಇಡೀ ಮುಖ ಕಪ್ಪಾಗಿ ಊದಿಕೊಂಡಿದೆ. ಬ್ಯೂಟಿಪಾರ್ಲರ್‌ನಾಕೆ ಮಾಡಿದ ಮೇಕಪ್ ವಧುವಿನ ಮುಖವನ್ನೇ ವಿರೂಪಗೊಳಿಸಿದೆ. 

47

ಮೇಕಪ್ ಎಫೆಕ್ಟ್ ನಿಂದಾಗಿ ವಧು ಆಸ್ಪತ್ರೆ ಸೇರಿದ್ದಾಳೆ. ಮದುವೆ ಮುಂದೂಡಿಕ ಮಾಡಿಕೊಳ್ಳಲಾಗಿದೆ. ಮುಖ ವಿರೂಪಗೊಂಡಿರುವ ಜಾಜೂರು ಮೂಲದ ಯುವತಿ  ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅರಸೀಕೆರೆ ಗಂಗಾಶ್ರೀ ಹರ್ಬಲ್ ಬ್ಯೂಟಿ ಪಾರ್ಲರ್ & ಅಂಡ್ ಸ್ಪಾ‌ನಲ್ಲಿ ಯುವತಿ ಮೇಕಪ್ ಮಾಡಿಸಿಕೊಂಡಿದ್ದಳು. 

57

ಬ್ಯೂಟಿಪಾರ್ಲರ್‌ನ ಮಾಲೀಕಳಾದ ಗಂಗಾ ಎಂಬುವವರು ಹೊಸ ಮಾದರಿಯ ಮೇಕಪ್ ಬಂದಿದೆ ಎಂದು ಯುವತಿ ಮೇಕಪ್ ಮಾಡಿದ್ದರು, ಸ್ಟಿಮ್ ನೀಡಿ ಹೊಸತರ ಮೇಕಪ್ ಮಾಡಿದ್ದಳು ಗಂಗಾ.ಮೇಕಪ್ ನಂತರ ಮುಖ ಊದಿಕೊಂಡು, ಸುಟ್ಟಂತೆ ಆಗಿ ವಿರೂಪಗೊಂಡಿತ್ತು. ನಂತರ ತಕ್ಷಣವೇ ಮದ್ವೆ ಕ್ಯಾನ್ಸಲ್ ಮಾಡಲಾಯಿತು.

67

ಬ್ಯೂಟಿ‌ಪಾರ್ಲರ್ ಮಾಲೀಕಳನ್ನು ಕರೆದು ಘಟನೆ ಬಗ್ಗೆ  ಅರಸೀಕೆರೆ ನಗರ ಠಾಣೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.

77

ಅದೇನೆ ಇರ್ಲಿ ಮದ್ವೆ ದಿನ ಸಿಕ್ಕಾಪಟ್ಟೆ ಚೆಂದ ಕಾಣ್ಬೇಕು ಅಂತ ಹೊಸ ಹೊಸ ಮೇಕಪ್ ಮಾಡ್ಕೊಳ್ಳೋ ಯುವತಿಯರು ಇಂಥಾ ಘಟನೆಗಳಿಂದನಾದ್ರೂ ಪಾಠ ಕಲಿಯಬೇಕಿದೆ.

Read more Photos on
click me!

Recommended Stories