ಮೆಮೊರಿ ಪವರ್ ಹೆಚ್ಚಿಸೋದು ಮಾತ್ರವಲ್ಲ, ಸೌಂದರ್ಯಕ್ಕೂ ಬೆಸ್ಟ್ ಬ್ರಾಹ್ಮಿ

Suvarna News   | Asianet News
Published : Feb 06, 2021, 05:00 PM IST

ಬ್ರಾಹ್ಮಿ ಬಗ್ಗೆ ಬಹಳಷ್ಟು ಮಂದಿ ಕೇಳಿರಬಹುದು. ಇದು ನೈಸರ್ಗಿಕವಾಗಿ ಕೆಸರು ಗದ್ದೆ ಮತ್ತು ಆಳವಿಲ್ಲದ ನೀರಿನಲ್ಲಿ ಬೆಳೆಯುವ ಒಂದು ಸಣ್ಣ ಗಿಡಮೂಲಿಕೆ. ಈ ಸಣ್ಣ ಗಿಡಮೂಲಿಕೆ ಹಲವು ಉಪಯುಕ್ತ ವೈದ್ಯಕೀಯ ಗುಣಗಳನ್ನು ಹೊಂದಿದೆ. ಇಡೀ ದೇಹದ ಶಕ್ತಿಯನ್ನು ಪ್ರಚೋದಿಸುವಲ್ಲಿ ಬ್ರಾಹ್ಮಿ ಪ್ರಸಿದ್ಧ. ಅಲ್ಲದೇ ರಾತ್ರಿ ವೇಳೆ ಶಾಂತ ಸ್ವಭಾವದಿಂದ ಇರುವಂತೆ ಮಾಡುತ್ತದೆ. ನಿದ್ರೆಯನ್ನು ಸರಿಪಡಿಸುವುದರ ಜೊತೆಗೆ, ಇದು ಟಾಕ್ಸಿನ್‌ಗಳ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕೀಲುಗಳ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.  

PREV
19
ಮೆಮೊರಿ ಪವರ್ ಹೆಚ್ಚಿಸೋದು ಮಾತ್ರವಲ್ಲ, ಸೌಂದರ್ಯಕ್ಕೂ ಬೆಸ್ಟ್ ಬ್ರಾಹ್ಮಿ

 ಬ್ರಾಹ್ಮಿಯನ್ನು ಅದ್ಭುತ ಗಿಡಮೂಲಿಕೆ ಎಂದು ಕರೆಯಲಾಗುತ್ತದೆ ಮತ್ತು  ಚರ್ಮ ಮತ್ತು ಕೂದಲಿನ ಮೇಲೂ ಸಹ ಬಳಸಿದಾಗ ಅದ್ಭುತ ಕೆಲಸ ಮಾಡುತ್ತದೆ. ಬ್ರಾಹ್ಮಿ  ಚರ್ಮ ಮತ್ತು ಕೂದಲಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ನೋಡಿ:

29

ಇದು ಚರ್ಮದ ಮೆಲನಿನ್ ವರ್ಣದ್ರವ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಬ್ರಾಹ್ಮಿಯನ್ನು ನೇರವಾಗಿ ಚರ್ಮಕ್ಕೆ ಅಥವಾ ನಿರಂತರ ಸೇವನೆ ಮೂಲಕ ಹಚ್ಚಿದರೆ, ಅದು ಚರ್ಮದ ಬಣ್ಣವನ್ನು ಹೆಚ್ಚಿಸುತ್ತದೆ. ಈ ಔಷಧೀಯ ಗಿಡಮೂಲಿಕೆಯು ಜೀವಕೋಶದ ನವೀಕರಣ ಮತ್ತು ಪುನರುತ್ಪಾದನೆಗೂ ಸಹಾಯ ಮಾಡುತ್ತದೆ.

39

ಎಸ್ಜಿಮಾದಂತಹ ಚರ್ಮದ ಸಮಸ್ಯೆಗೆ ಚಿಕಿತ್ಸೆ ನೀಡಲು ಇದು ಹೆಸರುವಾಸಿ. ಚರ್ಮ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಚರ್ಮದ ಸಮಸ್ಯೆ ಇರುವವರು ರಾಸಾಯನಿಕ ಉತ್ಪನ್ನಗಳಲ್ಲಿ ದೊಡ್ಡ ಪ್ರಮಾಣದ ಹಣ ತೊಡಗಿಸಲು ಬಯಸದಿದ್ದರೆ, ಈ ನೈಸರ್ಗಿಕ ಪದಾರ್ಥದ ಬಳಕೆಯನ್ನು ಖಂಡಿತವಾಗಿಯೂ ಮಾಡಬಹುದು.

49

ನಿಯಮಿತವಾಗಿ ಬ್ರಾಹ್ಮಿಯನ್ನು ಕೂದಲಿಗೆ ಹಚ್ಚಿಕೊಂಡರೆ ಒಣಗುವಿಕೆ ಕಡಿಮೆ ಮಾಡುತ್ತದೆ. ಕೂದಲು ಎಲ್ಲಾ ಸಮಯದಲ್ಲೂ ಆರೋಗ್ಯಕರ ಮತ್ತು ಪೋಷಣೆಯಿಂದ ಕೂಡಿರಲು ಪ್ರಾರಂಭಿಸುತ್ತದೆ.

59

ಈ ಸಣ್ಣ ಗಿಡಮೂಲಿಕೆಯು ಕೂದಲು ಉದುರುವುದನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಒಂದೇ ಸಮಯದಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸರಿಪಡಿಸಲು ಬ್ರಾಹ್ಮಿ ಒಂದು ಉತ್ತಮ ಪರಿಹಾರ. 

69

ಕೂದಲು ತೆಳುವಾಗಿರುವ ಅಥವಾ ಕಡಿಮೆಯಾದ ಪ್ರದೇಶಗಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಮೂಲಕ ಬ್ರಾಹ್ಮಿ ಯು ತಾತ್ಕಾಲಿಕ ಬೊಕ್ಕತಲೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇಂತಹ ಸಮಸ್ಯೆ ಎದುರಾದಾಗ ಈ ಆಯುರ್ವೇದ ಗಿಡಮೂಲಿಕೆಯನ್ನು  ನಿಜವಾಗಿಯೂ ಬಳಕೆ ಮಾಡಬಹುದು. 

79

ಗಿಡಮೂಲಿಕೆಯು ಕೂದಲಿನ ನಾರುಗಳ ಸುತ್ತ ಒಂದು ರಕ್ಷಣಾತ್ಮಕ ಪದರವನ್ನು ರಚಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಕಾಂತಿ ಮತ್ತು ಹೊಳಪು ಹೆಚ್ಚಿಸುತ್ತದೆ. 

89

 ಬ್ರಾಹ್ಮಿಯನ್ನು ಕೂದಲಿಗೆ ಬಳಸುವುದರಿಂದ ಕೂದಲು ಸುಂದರವಾಗಿ ಕಾಣುತ್ತದೆ ಮತ್ತು ಆರೋಗ್ಯಯುತವಾದ ಕೂದಲು ನಿಮ್ಮದಾಗುತ್ತದೆ. 

99

ಬ್ರಾಹ್ಮಿಯು ತಲೆಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡಲು ಸಹಾಯ ಮಾಡುತ್ತದೆ. 

click me!

Recommended Stories