ಡ್ರೈ ಫ್ರೂಟ್ಸ್ ನಿಂದ ಆರೋಗ್ಯದೊಂದಿಗೆ ಸೌಂದರ್ಯ... ಹೇಗೆ ಬಳಸೋದು?

First Published | Feb 1, 2021, 6:03 PM IST

ಡ್ರೈ ಫ್ರೂಟ್ಸ್ ಒಟ್ಟಾರೆ ಆರೋಗ್ಯವನ್ನು ಹೇಗೆ ಉತ್ತಮ ಮಾಡುತ್ತದೆ ಎಂಬುದನ್ನು ಎಲ್ಲರು ತಿಳಿದಿರಬಹುದು. ಭಾರತೀಯ ಕುಟುಂಬಗಳು ವಿಶೇಷ ಸಂದರ್ಭಗಳಲ್ಲಿ ಮತ್ತು ಹಬ್ಬದ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಗಳನ್ನು ನೀಡಲು ಇಷ್ಟಪಡುತ್ತಾರೆ.  ಆದರೆ ನಿಮಗೆ ಗೊತ್ತಿಲ್ಲದ ಒಣ ಹಣ್ಣಿನ ಕತೆ  ಹೇಳುತ್ತೇವೆ

ಡ್ರೈ ಫ್ರೂಟ್ಸ್ ಬಳಸುವ ಸರಳ ವಿಧಾನವೆಂದರೆ ಸ್ಕಿನ್ ಕೇರ್ ದಿನಚರಿ. ಹೊಳೆಯುವ ಮತ್ತು ದೋಷರಹಿತ ಚರ್ಮವನ್ನು ಪಡೆಯಲು ಕೆಲವು ಡ್ರೈ ಫ್ರೂಟ್ಸ್ ಗಳನ್ನು ಎಷ್ಟು ಸುಲಭವಾಗಿ ಬಳಸಬಹುದು ಎಂಬುದರ ಬಗ್ಗೆ ಕೆಲವು ಸಲಹೆಗಳನ್ನು ಇಲ್ಲಿವೆ.
undefined
ಬಾದಾಮಿ: ಈ ನಟ್ ತ್ವಚೆಯ ನೈಸರ್ಗಿಕ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೆ ಹೈಡ್ರೇಶನ್ ಅನ್ನು ಒದಗಿಸುತ್ತದೆ. ಚರ್ಮದ ಅರೋಗ್ಯ ಕಾಪಾಡುವಲ್ಲಿ ಬಾದಾಮಿ ಸಹಾಯ ಮಾಡುತ್ತದೆ.
undefined

Latest Videos


4-5 ಬಾದಾಮಿಗಳನ್ನುರಾತ್ರಿ ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಸಿಪ್ಪೆ ತೆಗೆದು, ಬಾದಾಮಿಯನ್ನು ಬಾಳೆಹಣ್ಣಿನೊಂದಿಗೆ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಸ್ಕ್ರಬ್ ನಂತೆ ಬಳಸಿ ಮತ್ತು ಚರ್ಮವನ್ನು ಮೃದುವಾದ ವೃತ್ತಾಕಾರದ ಚಲನೆಯಿಂದ ಮಸಾಜ್ ಮಾಡಿ. 10-15 ನಿಮಿಷ ಮುಖದ ಮೇಲೆ ಹಾಗೆ ಇಡಿ, ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
undefined
ವಾಲ್ ನಟ್: ವಾಲ್ ನಟ್ ನಲ್ಲಿ ವಿಟಮಿನ್ ಬಿ ಇದ್ದು, ಇದು ಕಪ್ಪು ಕಲೆಗಳು ಮತ್ತು ಸೂಕ್ಷ್ಮ ಗೆರೆಗಳನ್ನು ದೂರವಿಡುತ್ತದೆ. ಈ ಬೀಜಗಳು ಒಂದು ಅತ್ಯುತ್ತಮ ಎಕ್ಸ್ ಫೋಲಿಯೇಟಿಂಗ್ ಏಜೆಂಟ್ ಅನ್ನು ಉಂಟುಮಾಡುತ್ತವೆ ಮತ್ತು ಸತ್ತ ಚರ್ಮದ ಕೋಶಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ.
undefined
ವಾಲ್ ನಟ್ ಗಳನ್ನು ಎಕ್ಸ್ ಫೋಲಿಯೇಟ್ ಆಗಿ ಬಳಸಲು 3-4 ವಾಲ್ನಟ್ ಅರೆದು ಒಂದು ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮುಂದಿನ 15-20 ನಿಮಿಷ ಒಣಗಲು ಬಿಡಿ ಮತ್ತು ನಂತರ ತಣ್ಣೀರಿನಿಂದ ತೊಳೆಯಿರಿ. ಮುಖವು ಸತ್ತ ಚರ್ಮದ ಕೋಶಗಳು ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲಿದೆ.
undefined
ಒಣದ್ರಾಕ್ಷಿ: ಒಣ ದ್ರಾಕ್ಷಿಯಲ್ಲಿ ನೀರಿನಅಂಶ ಅಧಿಕವಾಗಿದ್ದು, ಒಣದ್ರಾಕ್ಷಿ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ತೇವಾಂಶವನ್ನು ಸಹ ಉಳಿಸಿಕೊಳ್ಳುತ್ತದೆ.
undefined
5-6 ಒಣದ್ರಾಕ್ಷಿಯನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ. ಇದು ದಪ್ಪನೆಯ ಪೇಸ್ಟ್ ಆಗಿ ರೂಪುಗೊಳ್ಳುವಾಗ, 2 ಚಮಚ ಹಾಲನ್ನು ಸೇರಿಸಿ, ಅರೆಪಾರದರ್ಶಕ ಪೇಸ್ಟ್ ಆಗುವವರೆಗೆ ಚೆನ್ನಾಗಿ ಕಲಸಿ. ಈಗ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಇದನ್ನು ನಿಯಮಿತವಾಗಿ ಹಚ್ಚಿ ನೀರಿನಿಂದ ತೊಳೆಯಿರಿ. ಈ ಸರಳ ಹ್ಯಾಕ್ ನಿಮಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
undefined
click me!