ನೀವು ಕೂದಲು ಬಾಚೋ ರೀತಿ ಸರಿಯಾಗಿಲ್ಲಾಂದ್ರೆ ಡ್ಯಾಂಡ್ರಾಫ್ ಕಾಟ ಶುರು

First Published | Feb 2, 2021, 3:21 PM IST

ಬದಲಾಗುತ್ತಿರುವ ಋತುಗಳು ಅಥವಾ ಕೆಲವು ಜೀವನಶೈಲಿ ಅಭ್ಯಾಸದಿಂದಾಗಿ ಹಲವರಲ್ಲಿ ನಿರಂತರ ಕೂದಲು ಉದುರುವಿಕೆ, ಬ್ರೇಕೆಜ್, ತಲೆಹೊಟ್ಟು ಅಥವಾ ನೆತ್ತಿಯ ಸಮಸ್ಯೆಗಳಂತಹ ಕೂದಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ  ನಿಯಮಿತವಾಗಿ ಈ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ,  ಕೂದಲನ್ನು ಹೇಗೆ ಬಾಚಿಕೊಳ್ಳುತ್ತೀರಿ ಎಂಬುದರ ಬಗ್ಗೆ  ಗಮನ ಹರಿಸಬೇಕಾಗುತ್ತದೆ. ಹಾಗಿದ್ರೆ ಕೂದಲು ಸರಿಯಾಗಿ ಬಾಚುವುದು ಹೇಗೆ ? ಸಮಸ್ಯೆ ನಿವಾರಿಸೋದು ಹೇಗೆ ಇಲ್ಲಿದೆ ಮಾಹಿತಿ.. 
 

ಕೂದಲು ಆರೋಗ್ಯವಾಗಿರಲು ಪ್ಲಾಸ್ಟಿಕ್ ಬಾಚಣಿಕೆಗಿಂತ ಮರದ ಬಾಚಣಿಗೆ “ಉತ್ತಮ”. ಯಾಕೆ ಅನ್ನೋದಕ್ಕೆ ಕಾರಣ ಇಲ್ಲಿದೆ...
undefined
ಮರದ ಬಾಚಣಿಕೆ ಬಳಸಿ ಕೂದಲಿನ ಸಿಕ್ಕು ಅಥವಾ ಗಂಟುಗಳನ್ನು ಬಿಡಿಸುವುದು ತುಂಬಾನೇ ಸುಲಭ.
undefined
Tap to resize

ಇದು ಕೂದಲಿನ ಎಳೆಗಳ ಮೇಲೆ ಸ್ಟಾಟಿಕ್ ಎಲೆಕ್ಟ್ರಿಸಿಟಿ ರಚನೆಯನ್ನು ತಡೆಯುತ್ತದೆ. ಸ್ಟಾಟಿಕ್ ಎಲೆಕ್ಟ್ರಿಸಿಟಿ ಒಣಗಿದ ಕೂದಲಿನ ಕೂದಲಿಗೆ ಕಾರಣವಾಗುತ್ತದೆ, ಇದು ಇತರ ಲೋಹ ಮತ್ತು ಪ್ಲಾಸ್ಟಿಕ್ ಬಾಚಣಿಗೆಗಿಂತ ಅತೀ ಕಡಿಮೆ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
undefined
ಮರದ ಬಾಚಣಿಕೆ ನೆತ್ತಿಯ ಮೇಲಿನ ನೈಸರ್ಗಿಕ ಎಣ್ಣೆಯನ್ನು ಎಳೆಗಳಿಗೆ ಸಮನಾಗಿ ವಿತರಿಸುತ್ತದೆ ಮತ್ತು ಕೂದಲಿನ ಹೊಳಪನ್ನು ಕಾಪಾಡಿಕೊಳ್ಳುತ್ತದೆ.
undefined
ಇದು ನೆತ್ತಿಯನ್ನು ಪ್ರಚೋದಿಸುವುದಿಲ್ಲ, ಬದಲಿಗೆ ನೆತ್ತಿಗೆ ಮಸಾಜ್ ಮಾಡುತ್ತದೆ, ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ.ಇವುಗಳಲ್ಲದೆ, ವಿಶಾಲ ಹಲ್ಲಿನ ಬಾಚಣಿಗೆಯನ್ನು ಬಳಸುವುದು ಹೆಚ್ಚು ಸೂಕ್ತ .
undefined
ಕೂದಲನ್ನು ಬಾಚಲು ಸರಿಯಾದ ಮಾರ್ಗ ಯಾವುದು?ಕೂದಲನ್ನು ಯಾವಾಗಲೂ ಕೆಳಗಿನಿಂದ ಅಥವಾ ಎಳೆಗಳಿಂದ ಬಾಚಿ , ವಿಶೇಷವಾಗಿ ಉದ್ದ ಕೂದಲು ಹೊಂದಿದ್ದರೆ. ನೆತ್ತಿಯಿಂದ ಎಳೆಗಳಿಗೆ ಬಾಚಬಾರದು. ಎಳೆಗಳಿಂದ ಬೇರುಗಳಿಗೆ ಬಾಚಣಿಗೆಯನ್ನು ಅನಗತ್ಯವಾಗಿ ಎಳೆಯುವುದು ಮಾಡಬೇಡಿ. ಇದರಿಂದ ಕೂದಲು ಬೇಗನೆ ಉದುರುತ್ತದೆ.
undefined
ಬಾಚಣಿಗೆಯನ್ನು ಸ್ವಚ್ಛವಾಗಿಡುವುದು ಹೇಗೆ?:ಬಾಚಣಿಗೆಯನ್ನು ಆಂಟಿಸೆಪ್ಟಿಕ್ ಲೋಷನ್ ಬಳಸಿ ಎರಡು ವಾರಕ್ಕೊಮ್ಮೆ ತೊಳೆಯಿರಿ. ಇದು ನೆತ್ತಿಯಲ್ಲಿ ಸೋಂಕುಗಳು ಮತ್ತು ತಲೆಹೊಟ್ಟು ಮರು ನಿರ್ಮಾಣವನ್ನು ತಡೆಯುತ್ತದೆ.
undefined

Latest Videos

click me!