ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ, ಮಗಳು ಇಶಾ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ ಅವರ ಮೇಕಪ್ ಕಲಾವಿದ ಈ ಕಾಂಟ್ರಾಕ್ಟರ್. ಅವರು ಪ್ರತಿ ಕಾರ್ಯಕ್ರಮ ಅಥವಾ ಸೆಷನ್‌ಗೆ ರೂ. 75,000 ರಿಂದ ರೂ. 1 ಲಕ್ಷದವರೆಗೆ ಶುಲ್ಕ ವಿಧಿಸುತ್ತಾರೆ ಎಂದು ವರದಿಯಾಗಿದೆ. ಈ ಕಾರಣದಿಂದಲೇ ಇವರು ಭಾರತದ ಅತ್ಯಂತ ದುಬಾರಿ ಮೇಕಪ್ ಕಲಾವಿದರನ್ನಾಗಿ ಗುರುತಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಐಶ್ವರ್ಯಾ ರೈ, ಅನುಷ್ಕಾ ಶರ್ಮಾ ಮತ್ತು ಕಾಜೋಲ್ ಸೇರಿ ಎಲ್ಲ ಪ್ರಮುಖ ಬಾಲಿವುಡ್ ನಟಿಯರಿಗೆ ಕಾಂಟ್ರಾಕ್ಟರ್ ಮೇಕಪ್ ಕಲಾವಿದರಾಗಿದ್ದಾರೆ. 'ಹಮ್ ಆಪ್ಕೆ ಹೈ ಕೌನ್', 'ದಿಲ್ ತೋ ಪಾಗಲ್ ಹೈ', 'ಕುಚ್ ಕುಚ್ ಹೋತಾ ಹೈ', 'ಕಲ್ ಹೋ ನಾ ಹೋ,' ಮತ್ತು 'ಮೈ ನೇಮ್ ಈಸ್ ಖಾನ್' ಸೇರಿ ಹಲವಾರು ಬಾಲಿವುಡ್ ಚಲನಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ.