Published : Feb 08, 2025, 08:20 PM ISTUpdated : Feb 09, 2025, 09:22 AM IST
ನಿಮ್ಮ ಮನೆಯಲ್ಲೂ ಹೆಣ್ಣು ಮಗುವಿನ ಜನನ ಆಗಿದ್ಯಾ? ಆ ಮಗುವಿಗೆ ಹೆಸರು ಹುಡುಕ್ತಿದ್ದೀರಾ? ರಾಮಾಯಣದಲ್ಲಿ ಕೆಲವು ಮಹಾನ್ ಪಾತ್ರಗಳಿವೆ, ಅವರ ಹೆಸರನ್ನು ನೀವು ನಿಮ್ಮ ಹೆಣ್ಣುಮಕ್ಕಳಿಗೆ ಇಡಬಹುದು.
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ದೇವರ ಹೆಸರನ್ನು(god's name) ಇಡಲು ಬಯಸುತ್ತಾರೆ. ಅದು ಹಿಂದಿನ ಕಾಲದಿಂದಲೂ ಹಾಗೇನೆ ಅಲ್ವಾ? ತಂದೆ ತಾಯಿಯರು ತಮ್ಮ ಮಗುವಿಗೆ ದೇವರಂತಹ ಒಳ್ಳೆಯ ಗುಣಗಳು ಬರಲಿ ಎಂದು ಅದೇ ಹೆಸರನ್ನು ಇಡುತ್ತಾರೆ.
210
ನಿಮ್ಮ ಮನೆಯಲ್ಲೂ ಪುಟಾಣಿ ಮಕ್ಕಳು ಇದ್ದಾರೆಯೇ? ಅವರಿಗೆ ಏನು ಹೆಸರು ಇಡೋದು ಎಂದು ಯೋಚನೆ ಮಾಡುತ್ತಿದ್ದೀರಾ? ಹಾಗಿದ್ರೆ ರಾಮಾಯಣದ (Ramayana names) ಹೆಸರು ಇಡಬಹುದು. ಹೌದು, ರಾಮಾಯಣದಲ್ಲಿ ಕೆಲವು ಮಹಾನ್ ಪಾತ್ರಗಳಿವೆ, ಅವರ ಹೆಸರನ್ನು ನೀವು ನಿಮ್ಮ ಹೆಣ್ಣುಮಕ್ಕಳಿಗೆ ಇಡಬಹುದು.
310
ಇಂದಿನ ಸಮಯದಲ್ಲಿ, ಈ ಹೆಸರುಗಳು ನಿಮ್ಮ ಹೆಣ್ಣು ಮಕ್ಕಳಿಗೆ (girl baby) ಸೂಕ್ತವೂ ಆಗಿದೆ. ಅಷ್ಟೇ ಯಾಕೆ ನಿಮ್ಮ ಮಗುವನ್ನು ಇತರರಿಂದ ವಿಭಿನ್ನವಾಗಿ ಎದ್ದು ನಿಲ್ಲುವಂತೆ ಮಾಡುತ್ತೆ ಈ ಹೆಸರುಗಳು. ಹಾಗಿದ್ರೆ ಆ ಹೆಸರುಗಳು ಯಾವುವು ಅನ್ನೋದನ್ನು ನೋಡೋಣ.
410
ಸೀತಾ : ಸೀತಾ ಮಾತೆಯ ಹೆಸರು ಇದಾಗಿದೆ. ಈ ಹೆಸರು ಶುದ್ಧತೆ, ಶಕ್ತಿ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ. ನೀವು ಸೀತಾ ಎಂದು ಕರೆಯಬಹುದು. ಇದು ಹಳೆಯ ಹೆಸರು ಎಂದು ಅನಿಸಬಹುದು. ಆದರೆ ಈಗಿನ ಕಾಲದಲ್ಲಿ ಡಿಫರೆಂಟ್ ಹೆಸರು ಆಗಿದೆ.
510
ಸಿಯಾ : ನಿಮಗೆ ಸೀತಾ ಎನ್ನುವ ಹೆಸರು ಇಷ್ಟ ಆಗದೇ ಇದ್ದರೆ ನೀವು ಸಿಯಾ ಎಂದು ಹೆಸರಿಡಬಹುದು. ಇತ್ತೀಚಿನ ದಿನಗಳಲ್ಲಿ ಬಹಳ ಟ್ರೆಂಡ್ ನಲ್ಲಿ ಇರುವಂತಹ ಹೆಸರು ಇದು. ಹಾಗಾಗಿ ನಿಮ್ಮ ಮಗಳನ್ನು ಸಿಯಾ ಎಂದು ಕರೆಯಬಹುದು.
610
ವೈದೇಹಿ: ಈ ಹೆಸರು ಕೂಡ ಸೀತಾಮಾತೆಗೆ ಸೇರಿದ್ದು. ಇಂದಿನ ಕಾಲದಲ್ಲಿ, ನೀವು ಅಂತಹ ಸರಳ ಮತ್ತು ಸುಂದರವಾದ ಹೆಸರನ್ನು ಅಪರೂಪವಾಗಿ ಕೇಳುತ್ತೀರಿ. ಆದರೆ ಈ ಹೆಸರು ನಿಮ್ಮ ಮಗಳು ವಿಭಿನ್ನವಾಗಿ ನಿಲ್ಲುವಂತೆ ಮಾಡುತ್ತೆ.
710
ಶ್ರುತಕೀರ್ತಿ : ಈ ಹೆಸರನ್ನು ಸಹ ನೀವು ಕೇಳಿರಬಹುದು ಅಲ್ವಾ? ಗೊತ್ತಿರದಿದ್ದರೆ ಕೇಳಿ, ಶತ್ರುಘ್ನನ ಪತ್ನಿಯ ಹೆಸರು ಶ್ರುತಕೀರ್ತಿ. ರಾಮಾಯಣದಲ್ಲಿ ಸದ್ಗುಣಶೀಲ ಮತ್ತು ಪ್ರತಿಭಾವಂತ ಮಹಿಳೆ.ಈ ಹೆಸರು ನಿಮ್ಮ ಮಗಳಿಗೆ ಇಡಬಹುದು.
810
ಮೈಥಿಲಿ : ಇದು ಕೂಡ ಸೀತಾ ಮಾತೆಯ ಇನ್ನೊಂದು ಹೆಸರು. ಮಿಥಿಲೆಯಲ್ಲಿ ಜನಿಸಿದವಳು ಮೈಥಿಲಿ. ಈ ಹೆಸರು ಕೂಡ ವಿಭಿನ್ನವಾಗಿದ್ದು, ಇದನ್ನು ಮಗಳಿಗೆ ಇಟ್ರೆ ಚೆನ್ನಾಗಿರುತ್ತೆ.
910
ಮಾಂಡವಿ: ಶ್ರೀರಾಮನ ಸಹೋದರನಾದ ಭರತನ ಪತ್ನಿಯ ಹೆಸರು ಮಾಂಡವಿ. ಈಕೆ ನಿಷ್ಠಾವಂತ ಮತ್ತು ಪರಿಶುದ್ಧ ಮಹಿಳೆ. ಈ ಹೆಸರು ತುಂಬಾನೆ ಡಿಫರೆಂಟ್ ಆಗಿದೆ. ಇದನ್ನು ನೀವು ಮಗುವಿಗೆ ನಾಮಕರಣ ಮಾಡಬಹುದು.
1010
ಅಂಜನಾ : ರಾಮ ಭಂಟ ಹನುಮಂತ, ಅಂದ್ರೆ ಆಂಜನೇಯನಿಗೆ ಜನ್ಮ ನೀಡಿದ ಮಾತೆಯೇ ಅಂಜನಾ. ಈಕೆಯೂ ದೇವರಿಗೆ ಸಮಾನಳು. ಹಾಗಾಗಿ ಅಂಜನಾ ಎನ್ನುವ ಹೆಸರನ್ನು ಸಹ ನಿಮ್ಮ ಮಗುವಿಗೆ ಇಡಬಹುದು.