ಅಂಬಾನಿ ರಿಲಯನ್ಸ್ ಗ್ರೂಪ್‌ನಲ್ಲಿ ಈ ಸುಂದರಿಗೆ ಪ್ರಮುಖ ಹುದ್ದೆ, ಯಾರು ಈ ಗಾಯತ್ರಿ ವಾಸುದೇವ?

Published : Feb 05, 2025, 04:34 PM IST

ಮುಕೇಶ್ ಅಂಬಾನಿ ಒಡೆತನ ರಿಲಯನ್ಸ್ ಗ್ರೂಪ್‌ನಲ್ಲಿ ಇದೀಗ ಸುಂದರಿಯೊಬ್ಬರು ಪ್ರಮುಖ ಹುದ್ದೆ ವಹಿಸಿಕೊಂಡಿದ್ದಾರೆ. ಅದು ಕೂಡ ಎಕ್ಸಿಕ್ಯೂಟೀವ್ ವೈಸ್ ಪ್ರಸಿಡೆಂಟ್ ಹಾಗೂ ಚೀಫ್ ಮಾರ್ಕೆಟಿಂಗ್ ಅಫೀಸರ್ ಹುದ್ದೆ. ಅಷ್ಟಕ್ಕೂ ಪ್ರಮುಖ 2 ಜವಾಬ್ದಾರಿ ವಹಿಸಿಕೊಂಡ ಗಾಯತ್ರಿ ವಾಸುದೇವ ಯಾರು?

PREV
16
ಅಂಬಾನಿ ರಿಲಯನ್ಸ್ ಗ್ರೂಪ್‌ನಲ್ಲಿ ಈ ಸುಂದರಿಗೆ ಪ್ರಮುಖ ಹುದ್ದೆ, ಯಾರು ಈ ಗಾಯತ್ರಿ ವಾಸುದೇವ?

ರಿಲಯನ್ಸ್ ಗ್ರೂಪ್ ಅದೆಂತಾ ದೈತ್ಯ ಕಂಪನಿ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಪ್ರತಿ ದಿನ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡುವ ರಿಲಯನ್ಸ್ ಗ್ರೂಪ್‌ಗೆ ಮುಕೇಶ್ ಅಂಬಾನಿ ಚೇರ್ಮೆನ್. ಇನ್ನು ರಿಲಯನ್ಸ್ ಗ್ರೂಪ್‌ನಲ್ಲಿರುವ ಒಂದೊಂದು ಕಂಪನಿಗಳನ್ನು ಮುಕೇಶ್ ಅಂಬಾನಿ ಕುಟುಂಬಸ್ಥರು ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ರಿಲಯನ್ಸ್ ಕಂಪನಿಯ ಪ್ರಮುಖ ಹುದ್ದೆ ಜವಾಬ್ದಾರಿಯನ್ನು ಸುಂದರಿಯೊಬ್ಬರು ವಹಿಸಿಕೊಂಡಿದ್ದಾರೆ. 

26

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರ ಕಚೇರಿಯ ನೂತನ ಮುಖ್ಯ ಮಾರ್ಕೆಟಿಂಗ್ ಆಫೀಸರ್ ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಗಾಯತ್ರಿ ವಾಸುದೇವ ಅವರನ್ನು ರಿಲಯನ್ಸ್ ನೇಮಕ ಮಾಡಿದೆ. ಈ ನೇಮಕವನ್ನು ಮುಕೇಶ್ ಅಂಬಾನಿ ಪುತ್ರಿ, ರಿಲಯನ್ಸ್ ಕಂಪನಿ ಬೋರ್ಡ್ ನಿರ್ದೇಶಕಿ ಇಶಾ ಅಂಬಾನಿ ಘೋಷಣೆ ಮಾಡಿದ್ದಾರೆ.

36

ಪೀಕ್ ಎಕ್ಸ್ ವಿ ಪಾರ್ಟ್ನರ್ಸ್‌ನಿಂದ (ಹಿಂದೆ ಸಿಕ್ವೊಯಾ ಇಂಡಿಯಾ ಮತ್ತು ಎಸ್ಇಎ)ಕಂಪನಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಗಾಯತ್ರಿ ವಾಸುದೇವ ಯಾದವ ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಪ್ರಮುಖ ಹುದ್ದೆ ನಿರ್ವಹಿಸಲಿದ್ದಾರೆ. ಗಾಯತ್ರಿ ನೇಮಕದ ಕುರಿತು ಇಶಾ ಅಂಬಾನಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

46

ಗಾಯತ್ರಿ ವಾಸುದೇವ ಅವರ ಆಲೋಚನೆ, ಕ್ರಿಯೆಟೀವ್, ಜೊತೆಗೆ ಅನುಭವ ರಿಲಯನ್ಸ್ ಕಂಪನಿಗೆ ನೆರವಾಗಲಿದೆ. ಇದೀಗ ಗಾಯತ್ರಿ ವಾಸುದೇವ, ರಿಲಯನ್ಸ್ ಇಂಡಸ್ಟ್ರಿಯಲ್ಲಿ ಅಕಾಶ್ ಅಂಬಾನಿ, ಅಂತ್ ಅಂಬಾನಿ ಹಾಗೂ ಇಶಾ ಅಂಬಾನಿ ಜೊತೆ ನಿಕಟವಾಗಿ ಕೆಲಸ ಮಾಡಲಿದ್ದಾರೆ ಎಂದು ರಿಲಯನ್ಸ್ ಹೇಳಿದೆ. 

56

ಗಾಯತ್ರಿ ವಾಸುದೇವ ಪ್ರಮುಖ ಕಾರ್ಪೋರೇಟ್ ಕಂಪನಿಗಳಲ್ಲಿ ಜನಪ್ರಿಯ ಹೆಸರು. FMCG P&G ಕಂಪನಿಯಲ್ಲಿ ಗಾಯತ್ರಿ ವಾಸುದೇವ ಬ್ರ್ಯಾಂಡ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ಕೆಲಸ ಮಾಡಿದ್ದಾರೆ. ಈ ಮೂಲಕ ಬ್ರ್ಯಾಂಡ್ ಬಿಲ್ಡಿಂಗ್ ಜೊತೆಗೆ ವರ್ಕ್ ಕಲ್ಚರ್ ಬದಲಾಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. 

66

ಕಾರ್ಪೋರೇಟ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ಗಾಯತ್ರಿ ವಾಸುದೇವಗಿದೆ. ಸ್ಟಾರ್ ಮೀಡಿಯಾಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥೆಯಾಗಿ ಗಾಯತ್ರಿ ಕೆಲಸ ಮಾಡಿದ್ದಾರೆ. ಇನ್ನು ಈ ಹಿಂದಿನ Peak XV ಕಂಪನಿಯನ್ನ ರೀ ಬ್ರ್ಯಾಂಡಿಂಗ್ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಅಂಬಾನಿಯ ದೈತ್ಯ ರಿಲಯನ್ಸ್ ಇಂಡಸ್ಟ್ರಿ ಸೇರಿಕೊಂಡಿದ್ದಾರೆ. ನಾಯಿ ಎಂದರೆ ಗಾಯತ್ರಿ ವಾಸುದೇವನ್‌ಗೆ ಪಂಚ ಪ್ರಾಣ. ತಮ್ಮ ಮನೆಯಲ್ಲಿ ಹಲವು ನಾಯಿಗಳನ್ನು ಸಾಕಿದ್ದಾರೆ.

Read more Photos on
click me!

Recommended Stories