ಅಕ್ಕಿ ತೊಳೆದ ನೀರಿನಲ್ಲಿರುವ ವಿಟಮಿನ್, ಮಿನರಲ್ಸ್ ಮತ್ತು ಸ್ಟಾರ್ಚ್ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯ ಹೆಚ್ಚಿಸಿಕೊಳ್ಳುವುದರಿಂದ ಹಿಡಿದು ಅಡುಗೆ ಮನೆ ಸ್ವಚ್ಛಗೊಳಿಸುವವರೆಗೂ ಉಪಯುಕ್ತ.
ಅನ್ನ ಮಾಡುವ ಮುನ್ನ ಅಕ್ಕಿಯನ್ನು ನೀರಿನಲ್ಲಿ ತೊಳೆಯುತ್ತೇವೆ. ಆದ್ರೆ ಅಕ್ಕಿ ತೊಳೆದ ನೀರನ್ನ ಚೆಲ್ಲುತ್ತೇವೆ. ಆ ನೀರಿನಲ್ಲಿ ಎಷ್ಟೊಂದು ಉಪಯುಕ್ತ ಪೋಷಕಾಂಶಗಳಿವೆ ಅಂತ ಗೊತ್ತಾ? ವಿಟಮಿನ್, ಮಿನರಲ್ಸ್, ಸ್ಟಾರ್ಚ್ ಆರೋಗ್ಯಕ್ಕೆ, ಸೌಂದರ್ಯಕ್ಕೆ, ಅಡುಗೆ ಮನೆ ಸ್ವಚ್ಛತೆಗೆ ಬಹಳ ಉಪಯುಕ್ತ. ಹಾಗಾದ್ರೆ ಈ ನೀರನ್ನ ಹೇಗೆಲ್ಲಾ ಉಪಯೋಗಿಸ್ಬಹುದು ನೋಡೋಣ.
25
ಅಕ್ಕಿ ನೀರು
ಸೂಪ್ ಅಥವಾ ಗ್ರೇವಿ ತೆಳುವಾಗಿದ್ರೆ, ರುಚಿ ಇಲ್ದಿದ್ರೆ ಈ ನೀರು ಹಾಕಿ. ಇದು ಸ್ಟಾರ್ಚ್ ದ್ರವವನ್ನು ದಪ್ಪವಾಗಿಸುತ್ತೆ, ರುಚಿ ಹೆಚ್ಚಿಸುತ್ತೆ.
ಇಡ್ಲಿ, ದೋಸೆ ಹಿಟ್ಟು ಬೇಗ ಹುದುಗಬೇಕೆಂದರೆ ಅಕ್ಕಿ ನೆನೆಸಿದ/ಬೇಯಿಸಿದ ನೀರು ಬಳಸಿ. ಇದು ನೈಸರ್ಗಿಕ ಹುದುಗುವಿಕೆಗೆ ಸಹಾಯ ಮಾಡುತ್ತದೆ. ಇಡ್ಲಿ-ದೋಸೆ ಮೃದುವಾಗುತ್ತವೆ.
55
ಪಕೋಡಗಳನ್ನು ಗರಿಗರಿಯಾಗಿ, ರುಚಿಯಾಗಿ ಮಾಡಲು ನೀರಿನ ಬದಲು ಅಕ್ಕಿ ನೆನೆಸಿದ/ಬೇಯಿಸಿದ ನೀರು ಬಳಸಿ. ಪಾತ್ರೆ ತೊಳೆಯಲು ಕೂಡ ಈ ನೀರು ಉಪಯುಕ್ತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.