Vastu Tips in Kannada: ಕಷ್ಟಗಳನ್ನು ನಿವಾರಿಸುತ್ತೆ ಈ ವಾಸ್ತು ಟಿಪ್ಸ್

First Published | Jul 5, 2022, 5:02 PM IST

ಸಂತೋಷ ಮತ್ತು ಆರಾಮದಾಯಕ ಜೀವನ ನಡೆಸಲು, ಮನೆಯಲ್ಲಿ ಸಮತೋಲಿತ ಪಂಚಭೂತ ಹೊಂದಿರೋದು ಅತ್ಯಗತ್ಯ. ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಒಂದಲ್ಲ ಒಂದು ಅಂಶವನ್ನು ಪ್ರತಿನಿಧಿಸುತ್ತೆ. ವಾಸ್ತು ಪ್ರಕಾರ ಮನೆಯನ್ನು ಅರೇಂಜ್ ಮಾಡಿದ್ದರೆ, ಅದು ಮನೆಯನ್ನು ಸಕಾರಾತ್ಮಕ ಶಕ್ತಿಯಿಂದ ಇರಿಸುತ್ತೆ ಮತ್ತು ಮನೆಯಲ್ಲಿ ವಾಸಿಸುವ ಸದಸ್ಯರು ಆರೋಗ್ಯಕರ, ಸಂತೋಷ ಮತ್ತು ಶ್ರೀಮಂತರಾಗ್ತಾರೆ. 

ವಾಸ್ತು ಪ್ರಕಾರ, ನಿಮ್ಮ ಮನೆಯ ಇಂಟೀರಿಯರ್ ಡಿಸೈನ್(Interior design) ವಾಸ್ತು ದೋಷ ತೆಗೆದುಹಾಕಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುತ್ತೆ . ಮನೆಯ ಸಂತೋಷ, ಶಾಂತಿ  ಮತ್ತು ಸಾಮರಸ್ಯದ ವಾತಾವರಣಕ್ಕಾಗಿ ಕೆಲವು ವಾಸ್ತು ಟಿಪ್ಸ್ ಅಳವಡಿಸಿಕೊಳ್ಳೋದು ತುಂಬಾನೆ ಮುಖ್ಯ.

ಮನೆಯಲ್ಲಿ ಯಾವ ದಿಕ್ಕಿನಲ್ಲಿ ಪೂಜೆ ನಡೆಯುತ್ತೆ ಎಂಬುದು ಬಹಳ ಮುಖ್ಯ. ಅದು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ ಅಥವಾ ಪೂಜಾ ಮನೆಯ(Pooja room) ದಿಕ್ಕಿನಲ್ಲಿ ಬೇರೆ ಯಾವುದೇ ಭಾರವಾದ ವಸ್ತು ಇರಿಸಿದ್ದರೆ, ಅದು ಮನೆಯ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತೆ.

Tap to resize

ಮನಸ್ಸಿನ ಶಾಂತಿ ಮತ್ತು ಮನೆಯ ಸರ್ವತೋಮುಖ ಅಭಿವೃದ್ಧಿಗಾಗಿ, ದೇವರ ಮನೆ ಈಶಾನ್ಯ ಕೋನದಲ್ಲಿರಬೇಕು. ಏಕೆಂದರೆ ಅದು ದೇವತೆಗಳ ಸ್ಥಳ. ಪೂಜಾ ಮನೆಯ ಮೇಲೆ ಅಥವಾ ಕೆಳಗೆ ಅಥವಾ ಹತ್ತಿರ ಎಂದಿಗೂ ಶೌಚಾಲಯ, ಅಡುಗೆಮನೆ(Kitchen) ಅಥವಾ ಮೆಟ್ಟಿಲುಗಳು ಇರಬಾರದು ಎಂಬುದನ್ನು ನೆನಪಿನಲ್ಲಿಡಿ.

ಎಲ್ಲವೂ ಚೆನ್ನಾಗಿದ್ದರೂ, ಹಣವು(Money) ನಮ್ಮ ಕೈಯಲ್ಲಿ ನಿಲ್ಲದಿದ್ದರೆ, ನಿಮ್ಮ ಮನೆಯ ಆಗ್ನೇಯ ದಿಕ್ಕಿನ ಪ್ರದೇಶದಿಂದ ನೀಲಿ ಬಣ್ಣ ತೆಗೆದುಹಾಕಬೇಕು. ಈ ದಿಕ್ಕಿನಲ್ಲಿ ತಿಳಿ ಕಿತ್ತಳೆ, ಗುಲಾಬಿ ಬಣ್ಣ ಬಳಸಿ. ಇದರಿಂದ ಮನೆಯಲ್ಲಿ ಹಣದ ಸಮಸ್ಯೆ ಉಂಟಾಗೋದಿಲ್ಲ.

ಕಾಲಕಾಲಕ್ಕೆ ಮನೆಯೊಳಗಿನ ಜೇಡರ ಬಲೆ, ಧೂಳು ಮತ್ತು ಕೊಳೆ ತೆಗೆದುಹಾಕುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ(Negative power) ಇರುವುದಿಲ್ಲ.
ಪಾರ್ಕಿಂಗ್‌ಗಾಗಿ ವಾಯುವ್ಯ ಜಾಗ ಬಳಸೋದು ಮಂಗಳಕರವೆಂದು ಪರಿಗಣಿಸಲಾಗಿದೆ.

ಮನೆಯ ಕುಂಡಗಳಲ್ಲಿ ನೆಟ್ಟ ಸಸ್ಯಗಳಿಗೆ ನಿಯಮಿತವಾಗಿ ನೀರುಣಿಸಬೇಕು(Watering plants). ಒಂದು ಸಸ್ಯವು ಒಣಗಿಹೋದರೆ, ತಕ್ಷಣವೇ ಅದನ್ನು ಅಲ್ಲಿಂದ ತೆಗೆಯಿರಿ.
ಬಾಗಿಲನ್ನು ತೆರೆಯುವಾಗ ಮತ್ತು ಮುಚ್ಚುವಾಗ, ಕರ್ಕಶ ಶಬ್ದವಾಗದಂತೆ ಎಚ್ಚರಿಕೆಯಿಂದ ಮುಚ್ಚಿ.

ಮನೆಯಲ್ಲಿ ಪೂಜಾಗೃಹ(pooja room) ನಿರ್ಮಿಸಿದ್ದರೆ, ಶುಭ ಫಲ ಪಡೆಯಲು ಅಲ್ಲಿ ನಿಯಮಿತವಾಗಿ ಪೂಜೆ ಮಾಡಬೇಕು ಮತ್ತು ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಲಾದ ಕೋಣೆ ಪೂಜೆಗೆ ಬಳಸಬಾರದು. ಇದರಿಂದ ಪೂಜೆಗೆ ಫಲ ಸಿಗೋದಿಲ್ಲ ಎನ್ನಲಾಗುತ್ತೆ. 

ಅಡುಗೆಮನೆಯ ಆಗ್ನೇಯ ಕೋನದಲ್ಲಿ ಗ್ಯಾಸ್ ಸ್ಟೌವ್  ಎರಡೂ ಬದಿಗಳಲ್ಲಿ ಕೆಲವು ಇಂಚುಗಳಷ್ಟು ಸ್ಥಳ ಬಿಟ್ಟು ಇಡುವುದು ಒಳ್ಳೆಯದು.
ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್(Dressing table) ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಬೇಕು, ಮಲಗುವಾಗ ಗಾಜನ್ನು ಮುಚ್ಚಬೇಕು.

ಯಾವುದೇ ವ್ಯಕ್ತಿ ಯಾವುದೇ ಪರಿಸ್ಥಿತಿಯಲ್ಲಿ ದಕ್ಷಿಣ ದಿಕ್ಕಿನ ಕಡೆಗೆ ತನ್ನ ಪಾದ ಇಟ್ಟುಕೊಂಡು ಮಲಗಬಾರದು, ಹಾಗೆ ಮಾಡುವುದರಿಂದ ಚಡಪಡಿಕೆ, ಆತಂಕ ಮತ್ತು ನಿದ್ರಾಹೀನತೆಗೆ(Sleeplessness) ಕಾರಣವಾಗಬಹುದು
ಮಲಗುವ ಕೋಣೆಯ ಮುಖ್ಯ ದ್ವಾರದ ಕಡೆಗೆ ನಿಮ್ಮ ಪಾದ ಇಟ್ಟುಕೊಂಡು ಮಲಗಬೇಡಿ. ಪೂರ್ವ ದಿಕ್ಕಿನಲ್ಲಿ ತಲೆ ಮತ್ತು ಪಾದ ಪಶ್ಚಿಮ ದಿಕ್ಕಿನಲ್ಲಿ ಇರಿಸಿ ಮಲಗುವುದು ಆಧ್ಯಾತ್ಮಿಕ ಭಾವನೆ ಹೆಚ್ಚಿಸುತ್ತೆ.

ಕ್ಯಾಕ್ಟಸ್(Cactus) ಸಸ್ಯ ಅಥವಾ ಮುಳ್ಳು ಗಿಡ, ಮನೆ ಅಥವಾ ಕೋಣೆಯಲ್ಲಿ ಇಡೋದು ಸಂಪೂರ್ಣವಾಗಿ ತಪ್ಪಿಸಬೇಕು.
ಮನೆಯಲ್ಲಿ ಲಘು ವಸ್ತುಗಳನ್ನು ಉತ್ತರ, ಈಶಾನ್ಯ , ಪೂರ್ವ, ಉತ್ತರ ದಿಕ್ಕಿನಲ್ಲಿ ಇಡೋದು ಶುಭಕರ.

ಬೆಂಕಿಗೆ ಸಂಬಂಧಿಸಿದ ವಸ್ತು ಮನೆಯಲ್ಲಿ ಸಾಧ್ಯವಾದಷ್ಟು ದೂರ, ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಮನೆಯ ವಿದ್ಯುತ್ ಉಪಕರಣಗಳ(Electrical equipments) ನಿರ್ವಹಣೆ ಸರಿಯಾಗಿ ಮಾಡಬೇಕು, ಅವುಗಳಿಂದ ಯಾವುದೇ ರೀತಿಯ ಶಬ್ದ ಹೊರಹೊಮ್ಮಬಾರದು.

ಮಧುರ ಸಂಬಂಧಕ್ಕಾಗಿ ಗೆಸ್ಟ್ ರೂಮ್ ಉತ್ತರ ಅಥವಾ ಪಶ್ಚಿಮದ ಕಡೆಗೆ ಮಾಡಬೇಕು.
ಉತ್ತಮ ಆರೋಗ್ಯಕ್ಕಾಗಿ  ಉತ್ತರ-ಈಶಾನ್ಯ ದಿಕ್ಕಿನಲ್ಲಿ ಔಷಧಿ(Medicine) ಇರಿಸುವ ಮೂಲಕ, ಅವು ತ್ವರಿತ ಪರಿಣಾಮ ತೋರಿಸುತ್ತೆ .
 

Latest Videos

click me!