ಶ್ರೀಮಂತರಾಗ್ಬೇಕಾ? ಹಾಗಾದ್ರೆ ಈ ಗಿಡಗಳು ನಿಮ್ಮ ಮನೆ ಅಂಗಳದಲ್ಲಿಡಿ

First Published | Jul 2, 2022, 6:41 PM IST

ಹಣ ಸಂಪಾದಿಸುವುದು ಪ್ರತಿಯೊಬ್ಬ ಮನುಷ್ಯನ ಆದ್ಯತೆ, ಯಾಕಂದ್ರೆ ಹಣವಿಲ್ಲದೆ, ಯಾರೂ ಜೀವನದಲ್ಲಿ ಭೌತಿಕ ಸುಖ ಪಡೆಯಲು ಸಾಧ್ಯವಿಲ್ಲ. ನೀವು ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕಾದರೆ, ಅವರನ್ನು ಖುಷಿ ಪಡಿಸಬೇಕು. ಅದಕ್ಕಾಗಿ ನೀವು ಹಣ ಗಳಿಸಬೇಕಾದ್ದು ತುಂಬಾನೆ ಮುಖ್ಯ.

ಹಣವನ್ನು(Money) ಗಳಿಸುವ ಬಯಕೆಯೊಂದಿಗೆ, ಜನರು ವಾಸ್ತು ಪ್ರಕಾರ ತಮ್ಮ ಮನೆ ಕಟ್ಟಲು ಪ್ರಯತ್ನಿಸುತ್ತಾರೆ. ವಾಸ್ತು ಶಾಸ್ತ್ರವು ಜನರ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸರಳ ಕ್ರಮಗಳನ್ನು ವಿವರಿಸುತ್ತೆ. ಅದರಲ್ಲಿ ಗಿಡ ನೆಡೋದು ಸಹ ಒಂದು. ಗಿಡ ನೆಡುವುದು ಪರಿಸರ ಉಳಿಸಲು ಉತ್ತಮ ಮಾರ್ಗವಾಗಿದೆ, ಆದರೆ ವಾಸ್ತು ಟಿಪ್ಸ್ ಪ್ರಕಾರ, ಕೆಲವು ಮರಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು ಎಂದು ತಿಳಿಸುತ್ತೆ. ಹಾಗಾದ್ರೆ ಯಾವ ಮರಗಳು ನಿಮ್ಮನ್ನ ಶ್ರೀಮಂತರನ್ನಾಗಿಸುತ್ತೆ ನೋಡೋಣ. 

ವಾಸ್ತು ಪ್ರಕಾರ, ಈ ಮರಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ
ತುಳಸಿ(Tulasi): ಮನೆಯ ಅಂಗಳದಲ್ಲಿ ತುಳಸಿ ಗಿಡ ನೆಡುವುದರಿಂದ ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರವಾಗುತ್ತೀರಿ. ತುಳಸಿ ಸಸ್ಯವು ಔಷಧೀಯ ಗುಣಗಳನ್ನು ಹೊಂದಿದೆ. ತುಳಸಿ ಎಲೆಯನ್ನು ಸುರಕ್ಷಿತವಾಗಿ ಇಡುವುದರಿಂದ ಹಣದ ಕೊರತೆ ಉಂಟಾಗೋದಿಲ್ಲ.

Tap to resize

(Banana plant): ಮನೆಯ ಸುತ್ತಲೂ ಬಾಳೆ ಗಿಡ ನೆಡೋದರಿಂದ ವಿಷ್ಣುವಿನ ಕೃಪೆ ಸಿಗುತ್ತೆ. ಇದು ತಾಯಿ ಲಕ್ಷ್ಮಿಯನ್ನು ಸಂತೋಷಪಡಿಸುತ್ತೆ. ಅಷ್ಟೇ ಅಲ್ಲ ಬಾಳೆ ಗಿಡ ನೆಡೋದ್ರಿಂದ ಮನೆಯಲ್ಲಿ ಯಾವಾಗಲೂ ಸಂಪತ್ತು ತುಂಬಿರುತ್ತೆ.
 

ಮನಿ ಪ್ಲಾಂಟ್(Money plant): ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮನಿ ಪ್ಲಾಂಟ್ ನೆಟ್ಟಾಗ ಮನೆಯಲ್ಲಿ ಹಣದ ಕೊರತೆ ಇರೋದಿಲ್ಲ ಎಂಬ ನಂಬಿಕೆಯಿದೆ. ಜನರ ವ್ಯವಹಾರವು ಉತ್ತಮವಾಗಿ ನಡೆಯುತ್ತೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ ಅದನ್ನು ಯಾವ ಜಾಗದಲ್ಲಿ ನೆಡಬೇಕು ಅನ್ನೋದು ತಿಳಿದಿರಬೇಕು.

ತೆಂಗಿನ ಮರ(Coconut tree): ಪ್ರತಿ ಪೂಜೆಯಲ್ಲಿ ತೆಂಗಿನಕಾಯಿಯನ್ನು ಅರ್ಪಿಸಲಾಗುತ್ತೆ. ಅದಕ್ಕಾಗಿಯೇ ತೆಂಗಿನ ಮರಕ್ಕೆ ವಿಶೇಷ ಮಹತ್ವವಿದೆ. ನೀವು ನಿಮ್ಮ ಅಂಗಳದಲ್ಲಿ ಈ ಸಸ್ಯ ನೆಟ್ಟರೆ, ನಿಮಗೆ ಎಂದಿಗೂ ಹಣದ ಕೊರತೆಯಾಗೋದಿಲ್ಲ. ನೀವೂ ನೆಟ್ಟು ನೋಡಿ.

ಪಾರಿಜಾತದ ಮರ: ಮನೆಯಲ್ಲಿ ಪಾರಿಜಾತದ ಗಿಡ ನೆಟ್ಟಾಗ, ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತೆ. ಜನರ ನಕಾರಾತ್ಮಕ(Negative) ಆಲೋಚನೆಗಳು ಕ್ರಮೇಣ ಕಮ್ಮಿಯಾಗುತ್ತೆ . ಅವರ ಆತ್ಮವಿಶ್ವಾಸ ಹೆಚ್ಚಾಗುತ್ತೆ. ಅವರ ವ್ಯವಹಾರ ಹೆಚ್ಚಳವಾಗಿ, ಮನೆಯಲ್ಲಿ ಸಂಪತ್ತು ತುಂಬುತ್ತೆ.

Latest Videos

click me!