ನಿಮ್ಮ ಮನೆಯಲ್ಲಿ ರಾಧಾ-ಕೃಷ್ಣನ ಫೋಟೋ ಸರಿಯಾದ ಜಾಗದಲ್ಲಿದ್ಯಾ?

First Published | Jun 26, 2022, 11:10 AM IST

ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಇರಿಸಲಾದ ಎಲ್ಲಾ ವಸ್ತು ಶುಭ ಮತ್ತು ಅಶುಭ ಸ್ಥಳಗಳ ಬಗ್ಗೆ ಉಲ್ಲೇಖಿಸಲಾಗಿದೆ. ಯಾಕಂದ್ರೆ ಅವು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತೆ. ವಾಸ್ತು ಪ್ರಕಾರ, ಮನೆಯಲ್ಲಿ ಸಣ್ಣ ಬದಲಾವಣೆ ಮಾಡಿದರೆ, ಮಾನಸಿಕ ಶಾಂತಿ ಇರುತ್ತೆ, ಜೊತೆಗೆ ಸಕಾರಾತ್ಮಕ ಶಕ್ತಿ ಸಹ ಹೆಚ್ಚುತ್ತೆ. 
 

ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯಲು, ವೈವಾಹಿಕ ಜೀವನದಲ್ಲಿ(Married Life) ಪ್ರೀತಿ ಮತ್ತು ಸಂತೋಷ ಮತ್ತು ಶಾಂತಿಗಾಗಿ, ಮನೆಯಲ್ಲಿ ದೇವರು ಮತ್ತು ದೇವತೆಗಳ ವಿಗ್ರಹ ಪ್ರತಿಷ್ಠಾಪಿಸಲು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ದೇವರ ಪ್ರತಿಮೆ ಸ್ಥಾಪಿಸಲು ಸಹ ನಿಯಮಗಳಿವೆ. 
 


ರಾಧಾ-ಕೃಷ್ಣರನ್ನು(Radha krishna) ಬಿಡಿಸಲಾಗದ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ರಾಧಾ ಕೃಷ್ಣ ಚಿತ್ರವನ್ನು ಹೊಂದಿರುವುದು ವೈವಾಹಿಕ ಜೀವನವನ್ನು ಸಂತೋಷಗೊಳಿಸುತ್ತೆ. ಹಾಗಾದರೆ ಮನೆಯಲ್ಲಿ ರಾಧಾ-ಕೃಷ್ಣನ ಫೋಟೋ ಎಲ್ಲಿ ಇಡಬೇಕು ಮತ್ತು ಇಡುವಾಗ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋದನ್ನು ತಿಳಿದುಕೊಳ್ಳೋಣ.

Tap to resize

ವೈವಾಹಿಕ ಜೀವನದಲ್ಲಿ ಮಾಧುರ್ಯ
ಮಲಗುವ ಕೋಣೆಯಲ್ಲಿ(Bed room) ದೇವರ ಚಿತ್ರ ಹಾಕೋದು ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ, ಆದರೂ ಅದು ರಾಧಾ-ಕೃಷ್ಣರ ಚಿತ್ರವಾಗಿದ್ದರೆ, ಅದನ್ನು ಮಲಗುವ ಕೋಣೆಯಲ್ಲಿ ಇಡಬಹುದು. ಏಕೆಂದರೆ ಅದು ಪ್ರೀತಿಯ ಸಂಕೇತ ಎಂದು ಪರಿಗಣಿಸಲಾಗುತ್ತೆ. 

ಮಲಗುವ ಕೋಣೆಯಲ್ಲಿ ರಾಧಾ ಕೃಷ್ಣರ ಚಿತ್ರ ಇಡೋದು ವೈವಾಹಿಕ ಜೀವನದಲ್ಲಿ ಮಾಧುರ್ಯ ತರುತ್ತೆ. ಗಂಡ ಮತ್ತು ಹೆಂಡತಿಯ ನಡುವಿನ ಉದ್ವಿಗ್ನತೆ ಕಡಿಮೆಯಾಗುತ್ತೆ, ವಿಶ್ವಾಸ ಮತ್ತು ಪ್ರೀತಿ ಹೆಚ್ಚಾಗುತ್ತೆ. ಅಲ್ಲದೇ ಇಬ್ಬರ ನಡುವಿನ ಪ್ರೀತಿ(Love) ಸದಾ ಶಾಶ್ವತವಾಗಿರುತ್ತೆ ಎಂದು ನಂಬಲಾಗಿದೆ. 

ಗರ್ಭಿಣಿ(Pregnant) ಕೋಣೆ
ಶ್ರೀ ಕೃಷ್ಣನ ಬಾಲ್ಯದ ಫೋಟೋ ಗರ್ಭಿಣಿ ಕೋಣೆಯಲ್ಲಿ ಹಾಕಬೇಕು. ಕೃಷ್ಣನ ಬಾಲ್ಯದ ಚಿತ್ರವು ಗರ್ಭಿಣಿ ಮಹಿಳೆಯ ಮನಸ್ಸನ್ನು ಸಂತೋಷವಾಗಿರಿಸುತ್ತೆ. ನಕಾರಾತ್ಮಕ ಆಲೋಚನೆಗಳು ಬರೋದಿಲ್ಲ.  ಗರ್ಭಾವಸ್ಥೆಯಲ್ಲಿ ಶ್ರೀಕೃಷ್ಣನ ಮಗುವಿನ ರೂಪ ನೋಡುವ ಮೂಲಕ, ಇದು ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತೆ ಎಂದು ನಂಬಲಾಗಿದೆ.

ಈ ದಿಕ್ಕಿನಲ್ಲಿ ಫೋಟೋ ಇಡೋದು ಲಾಭದಾಯಕ
ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣನ ಚಿತ್ರ ಈಶಾನ್ಯ ದಿಕ್ಕಿಗೆ ಇಡೋದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮಲಗುವ ಕೋಣೆಯಲ್ಲಿ ಅಟ್ಯಾಚ್ಡ್ ಬಾತ್ರೂಮ್(Attached bathroom) ಇದ್ದರೆ, ಚಿತ್ರವು ಬಾತ್ರೂಮ್ನ ಗೋಡೆಯ ಮೇಲೆ ಇಡಬಾರದು.

ನೀವು ಮಲಗುವ ಕೋಣೆಯಲ್ಲಿ ರಾಧಾ ಮತ್ತು ಕೃಷ್ಣನ ಫೋಟೋ ಹಾಕಬಹುದು, ಆದರೆ ಅಲ್ಲಿ ಪೂಜಿಸೋದು ಸರಿಯಲ್ಲ. ರಾಧಾ-ಕೃಷ್ಣ ಸೇರಿದಂತೆ ಯಾವುದೇ ದೇವರ ಆರಾಧನೆಗಾಗಿ, ನೀವು ದೇವರಕೋಣೆ ಆಯ್ಕೆ ಮಾಡಿ, ಅಲ್ಲಿ ಪೂಜೆ (Pooja)ಮಾಡೋದು ಉತ್ತಮ.
 

ನೀವು ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಚಿತ್ರ ಹಾಕುತ್ತಿದ್ದರೆ, ಅದರಲ್ಲಿ ಬೇರೆ ಯಾವುದೇ ದೇವಾನುದೇವತೆ(God) ಅಥವಾ ಗೋಪಿಕೆಯರು ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಯಾಕೆಂದರೆ ರಾಧಾ ಕೃಷ್ಣರನ್ನು ಮಾತ್ರ ಪ್ರೀತಿಯ ರೂಪದಲ್ಲಿ ನಾವು ಪೂಜಿಸುತ್ತೇವೆ.

ನೀವು ಕೃಷ್ಣನ ಬಾಲ್ಯದ (Balakrishna)ರೂಪದ ಫೋಟೋ ಹಾಕುತ್ತಿದ್ದರೆ, ಅದನ್ನು ಪೂರ್ವ ದಿಕ್ಕಿನಲ್ಲಿ ಹಾಕಿ. ಆದರೆ ಫೋಟೋಕ್ಕೆ ನಿಮ್ಮ ಪಾದವಿಟ್ಟು ಮಲಗಬಾರದು ಎಂಬುದನ್ನು ನೆನಪಿನಲ್ಲಿಡಿ. ಫೋಟೋಗೆ ಎದುರಾಗಿ ನೀವು ಪಾದ ಇಟ್ಟು ಮಲಗಿದ್ರೆ ಅದು ದೇವರಿಗೆ ಮಾಡಿದ ಅವಮಾನ ಆಗುತ್ತೆ.

ಮನೆಯ ಉತ್ತರ ಭಾಗದಲ್ಲಿ, ಅರ್ಜುನನಿಗೆ ಭಗವದ್ಗೀತೆ(Bhagavathgeetha) ಬೋಧಿಸುತ್ತಿರುವ ಶ್ರೀಕೃಷ್ಣನ ಫೋಟೋ ಇರಿಸಿ. ಹೀಗೆ ಮಾಡೋದ್ರಿಂದ ಕೆಲಸದ ಸಮಯದಲ್ಲಿ ನೀವು ಎದುರಿಸುವ ಸಮಸ್ಯೆಗಳನ್ನು ತೆಗೆದುಹಾಕುತ್ತೆ. ಅಲ್ಲದೇ ಮನಸ್ಸು ಉತ್ತಮವಾಗಿ ಕಾರ್ಯ ನಿರ್ವಹಿಸಲು ಇದು ಸಹಾಯ ಮಾಡುತ್ತೆ. 

Latest Videos

click me!