Karna saves Nidhi from fire: ಶಾಂತಿ ಅಜ್ಜಿಯ ಮನೆಗೆ ಬೆಂಕಿ ಬಿದ್ದು, ನಿಧಿ ಮತ್ತು ಅಜ್ಜಿ ಬೀದಿಗೆ ಬಂದಿದ್ದಾರೆ. ಹೊತ್ತಿ ಉರಿಯುತ್ತಿರುವ ಮನೆಯೊಳಗೆ ಸಿಲುಕಿದ ನಿಧಿಯನ್ನು ಕರ್ಣ ರಕ್ಷಿಸಿದ್ದಾನೆ. ಈಗ ಮನೆ ಕಳೆದುಕೊಂಡ ಪ್ರೇಯಸಿ ಮತ್ತು ಅಜ್ಜಿಗೆ ಆಶ್ರಯ ನೀಡುವ ಜವಾಬ್ದಾರಿ ಕರ್ಣನ ಮೇಲಿದೆ.
ಅಜ್ಜಿ ಮತ್ತು ತಾಯಿಯನ್ನು ಹೊರತುಪಡಿಸಿ ಮನೆಯ ಎಲ್ಲಾ ಸದಸ್ಯರು ಕರ್ಣನನ್ನು ತುಂಬಾ ಕೀಳಾಗಿ ನೋಡುತ್ತಾರೆ. ತಂದೆ, ಅತ್ತೆ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಸೋದರ ಕೊಂಕು ಮಾತುಗಳನ್ನಾಡುತ್ತಿದ್ರೂ ಕರ್ಣ ಮುಖದಲ್ಲಿನ ನಗು ಮಾಯವಾಗಿರಲಿಲ್ಲ. ಯಾರು ಏನೇ ಅಂದ್ರೂ ಕರ್ಣ ನಗುತ್ತಿದ್ದನು. ಕುತಂತ್ರದಿಂದ ನಿತ್ಯಾಳನ್ನು ಕರ್ಣ ಮದುವೆಯಾಗಿದ್ದಾನೆ.
25
ಮತ್ತೊಂದು ಆಘಾತಕಾರಿ ಸುದ್ದಿ
ಕರ್ಣನ ನಗು ಕಿತ್ತುಕೊಂಡ ನೀಚರಿಗೆ ಇಷ್ಟಾದ್ರು ತೃಪ್ತಿಯಾಗಿಲ್ಲ. ಮದುವೆ ಮುರಿದು ಇಷ್ಟವಿಲ್ಲದ ವ್ಯಕ್ತಿ ಕರ್ಣನ ಜೊತೆ ನಿತ್ಯಾ ಸಪ್ತಪದಿ ತುಳಿದಿದ್ದಾಳೆ. ಪ್ರೀತಿ ಕಳೆದುಕೊಂಡು ನಿಧಿ ಭಗ್ನಪ್ರೇಮಿಯಾಗಿ ಕಿರುಚುತ್ತಾ ಕಣ್ಣೀರು ಹಾಕಿದ್ದಾಳೆ. ಈ ಎಲ್ಲದರ ನಡುವೆ ನಿಧಿ ಮತ್ತು ನಿತ್ಯಾಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ನಿತ್ಯಾಳ ಮದುವೆಯಾಯ್ತು ಅಂತ ಖುಷಿಯಲ್ಲಿದ್ದ ಶಾಂತಿ ಅಜ್ಜಿ ಇರೋ ಒಂದು ಆಸರೆಯನ್ನು ಕಳೆದುಕೊಂಡಿದ್ದಾಳೆ.
35
ಮನೆಗೆ ಬೆಂಕಿ ಹಾಕಿದ್ಯಾರು?
ಹೌದು ಶಾಂತಿ ಅಜ್ಜಿಗೆ ಆಸರೆಯಾಗಿದ್ದ ಮನೆಗೆ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಎಲ್ಲರೂ ಮದುವೆ ಮಂಟಪದಿಂದ ಮನೆಯತ್ತ ಓಡಿ ಹೋಗಿದ್ದಾರೆ. ಕಣ್ಮುಂದೆಯೇ ಹೊತ್ತಿ ಉರಿಯುತ್ತಿರುವ ಮನೆ ನೋಡಿ ಶಾಂತಿ, ನಿತ್ಯಾ ಕಣ್ಣೀರು ಹಾಕಿದ್ದಾರೆ. ಇದೆಲ್ಲದರ ನಡುವೆಯೇ ಹೊತ್ತಿ ಉರಿಯುತ್ತಿರುವ ಮನೆಯೊಳಗೆ ನಿಧಿ ಹೋಗಿದ್ದಾಳೆ.
ನಿಧಿ ಬರ್ತ್ ಡೇಗೆ ಕರ್ಣ ಮುದ್ದಾದ ಪಿಂಕ್ ಡಾಲ್ ನೀಡಿದ್ದನು. ತನ್ನ ಪ್ರೀತಿಯ ಸಂಕೇತವಾಗಿರುವ ಗೊಂಬೆಯನ್ನು ಕಾಪಾಡಿಕೊಳ್ಳಲು ಮನೆಯೊಳಗೆ ಹೋದ ನಿಧಿ ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾಳೆ. ನಿಧಿ ಹಿಂದೆಯೇ ಒಳಗೆ ಹೋದ ಕರ್ಣ ನಿಮ್ಮನ್ನು ಕಳೆದುಕೊಳ್ಳಲು ನನಗಿಷ್ಟ ಇಲ್ಲ ಎಂದು ಪ್ರೇಯಸಿಯನ್ನು ರಕ್ಷಿಸಿದ್ದಾನೆ.
ಮನೆ ಕಳೆದುಕೊಂಡು ಶಾಂತಿ ಅಜ್ಜಿ ಮತ್ತು ನಿಧಿ ಬೀದಿಗೆ ಬಂದಿದ್ದಾರೆ. ನಿತ್ಯಾ ಜೊತೆಯಲ್ಲಿಯೇ ನಿಧಿ ಮತ್ತು ಅಜ್ಜಿಯನ್ನು ಕರ್ಣ ತನ್ನ ಮನೆಗೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ. ನಿಧಿ ಮನೆಗೆ ಬೆಂಕಿ ಬಿದ್ದಿರುವ ಹಿಂದೆ ಕರ್ಣನ ತಂದೆ ರಮೇಶ್‌ನ ಕೈವಾಡ ಇರೋ ಸಾಧ್ಯತೆಗಳಿವೆ. ಇದಕ್ಕೆಲ್ಲಾ ಕಾರಣ ಯಾರು ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.