ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಅವರದ್ದು ಕ್ಲೋಸ್ ಫ್ರೆಂಡ್ಷಿಪ್ ಆಗಿತ್ತು. ಆದರೆ ರಿಷಾ ಗೌಡ ಎಂಟ್ರಿಯ ನಂತರ ಗಿಲ್ಲಿಯ ಗಮನ ಬೇರೆಡೆ ಹರಿದಿದ್ದು, ಇದಕ್ಕೆ ಶಿಕ್ಷೆಯಾಗಿ ಮನೆಯವರೆಲ್ಲಾ ಸೇರಿ ಕಾವ್ಯಾ ಕೈಯಿಂದ ಗಿಲ್ಲಿಗೆ ರಾಖಿ ಕಟ್ಟಿಸಿದ್ದಾರೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಸದ್ಯ ಕಾವ್ಯಾ ಶೈವ ಮತ್ತು ಗಿಲ್ಲಿ ನಡುವೆ ಲವ್ ಶುರುವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದೇನು ನಿಜಕ್ಕೂ ಪ್ರೀತಿ-ಪ್ರೇಮ ಏನೂ ಅಲ್ಲ. ಇವರಿಬ್ಬರೂ ತುಂಬಾ ಕ್ಲೋಸ್ ಸ್ನೇಹಿತರು ಅಷ್ಟೇ. ಆದರೂ ಇವರಿಬ್ಬರನ್ನು ಆಡಿಕೊಳ್ಳಲಾಗುತ್ತಿದೆ. ಎಂಥ ಸಂದರ್ಭದಲ್ಲಿ ಕೂಡ ಕಾವ್ಯ ಅವರನ್ನು ಗಿಲ್ಲಿ ಬಿಟ್ಟುಕೊಡುವುದಿಲ್ಲ.
26
ಗಿಲ್ಲಿಯಿಂದ ಸಪೋರ್ಟ್
ಮಿಡ್ ಸೀಸನ್ ಫಿನಾಲೆ ತಲುಪಲು ಬಿಗ್ ಬಾಸ್ ಸರಣಿ ಟಾಸ್ಕ್ ನೀಡುತ್ತಿದ್ದ ಸಂದರ್ಭದಲ್ಲಿಯೂ ಇವರ ಫ್ರೆಂಡ್ಷಿಪ್ ತಿಳಿದಿತ್ತು. ಆಗ ಕಾವ್ಯಾ ಶೈವ ಮತ್ತು ರಾಶಿಕಾ ಶೆಟ್ಟಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಹುತೇಕರು ರಾಶಿಕಾ ಶೆಟ್ಟಿಗೆ ಬೆಂಬಲ ನೀಡಿದರು. ಕಾವ್ಯ ಶೈವ ಅವರಿಗೆ ಕೆಲವರ ಬೆಂಬಲ ಮಾತ್ರ ಸಿಕ್ಕಿತು. ನಿರೀಕ್ಷೆಯಂತೆ ಗಿಲ್ಲಿ ನಟ ಅವರು ಕಾವ್ಯ ಪರವಾಗಿಯೇ ನಿಂತವರು.
36
ರಾಶಿಕಾ ಶೆಟ್ಟಿಗೆ ಗೆಲುವು
ಈ ಟಾಸ್ಕ್ನಲ್ಲಿ ರಾಶಿಕಾ ಶೆಟ್ಟಿಗೆ ಗೆಲುವಾಗಿತ್ತು. ಅದು ಗಿಲ್ಲಿ ಅವರಿಗೆ ನೋವು ತಂದಿತ್ತು. ‘ಇಷ್ಟು ದಿನ ಎಲ್ಲರೂ ನಿನ್ನ ಜೊತೆ ಚೆನ್ನಾಗಿದ್ದರು. ಈಗ ಬಂದು ರಾಶಿಕಾಗೆ ಸಪೋರ್ಟ್ ಮಾಡಿದರು. ಅದು ನನಗೆ ಉರಿಯಿತು’ ಎಂದು ಗಿಲ್ಲಿ ನಟ ಹೇಳಿದ್ದರು. ಹೀಗಿದೆ ಅವರ ಸ್ನೇಹ.
ಆದರೆ ಈಗ ರಿಷಾ ಗೌಡ (Bigg Boss Risha Gowda) ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಆಗಿದೆ. ಬರುತ್ತಲೇ ಚಿಂದಿ ಉಡಾಯಿಸುತ್ತಾರೆ ಬಂದಿದ್ದಾರೆ ರಿಷಾ. ಇದೀಗ ರಿಷಾ ಗೌಡ ಎಂಟ್ರಿ ಆಗುತ್ತಿದ್ದಂತೆಯೇ ಗಿಲ್ಲಿಗೆ ರಿಷಾ ಮೇಲೆ ಲವ್ ಆಗಿದೆ.
56
ಗಿಲ್ಲಿಗೆ ಶಿಕ್ಷೆ
ಇವರಿಬ್ಬರೂ ಡ್ಯುಯೆಟ್ ಹಾಡಿರುವ ಪ್ರೊಮೋ ಒಂದನ್ನು ರಿಲೀಸ್ ಮಾಡಲಾಗಿದೆ. ಇದನ್ನು ನೋಡಿ ಕಾವ್ಯಾ ಶೈವ ಬೇಸರ ಪಟ್ಟುಕೊಂಡಂತೆಯೂ ತೋರಿಸಲಾಗಿದೆ. ಕೊನೆಗೆ ಎಲ್ಲರೂ ಸೇರಿ ಶಿಕ್ಷೆ ಕೊಟ್ಟೇ ಬಿಟ್ಟಿದ್ದಾರೆ.
66
ರಾಖಿ ಕಟ್ಟಿಸೇ ಬಿಟ್ಟರು
ಅದು ಅಂತಿಂಥ ಶಿಕ್ಷೆಯಲ್ಲ. ಕಾವ್ಯಾ ಶೈವರ ಕೈಯಲ್ಲಿ ಗಿಲ್ಲಿ ನಟ (Bigg Boss Gilli Nata) ಅವರಿಗೆ ರಾಖಿ ಕಟ್ಟಿಸಲಾಗಿದೆ. ಅಯ್ಯಯ್ಯಪ್ಪೋ ಬೇಡ ಎಂದ್ರೂ ಕೇಳದೇ ಎಲ್ಲರೂ ಗಿಲ್ಲಿಯವರನ್ನು ಎತ್ತುಕೊಂಡು ಹೋಗಿ ರಾಖಿ ಕಟ್ಟಿಸಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಅಯ್ಯೋ ಪಾಪ ಗಿಲ್ಲಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಬೇಕಿತ್ತಾ ನಿನಗೆ ಇದೆಲ್ಲಾ ಎನ್ನುತ್ತಿದ್ದಾರೆ.