Karna Serial: ಕರ್ಣನ ಮುಂದಿದೆ 'ಪಂಚ' ಸವಾಲುಗಳ ಚಕ್ರವ್ಯೂಹ: ಬಯಲಾಗುವುದೇ 'ಮೂರು' ಸತ್ಯ?

Published : Oct 25, 2025, 09:18 PM IST

ಜೀ ಕನ್ನಡದ ಕರ್ಣ ಧಾರಾವಾಹಿಯಲ್ಲಿ, ನಿತ್ಯಾಳೊಂದಿಗಿನ ರಹಸ್ಯ ಮದುವೆಯ ನಂತರ ಕರ್ಣನು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾನೆ. ನಿತ್ಯಾಳ ಗರ್ಭಧಾರಣೆ, ನಿಧಿಯ ಪ್ರೀತಿ, ತೇಜಸ್‌ನ ತಪ್ಪು ತಿಳುವಳಿಕೆ ಮತ್ತು ನಯನತಾರಾಳ ರಹಸ್ಯಗಳು ಅವನನ್ನು ಸಂಕಷ್ಟಕ್ಕೆ ಸಿಲುಕಿಸಿವೆ.

PREV
17
ಕರ್ಣ ಸೀರಿಯಲ್

ಜೀ ಕನ್ನಡದಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ಸದ್ಯ ಒಂದು ಹಂತಕ್ಕೆ ತಲುಪಿದೆ. ನಾಲ್ಕು ಗೋಡೆಗಳ ಮಧ್ಯೆ ನಡೆದ ಕರ್ಣ ಮತ್ತು ನಿತ್ಯಾ ಮದುವೆ ತಾಯಿ ಮಾಲತಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿಯದ ರಹಸ್ಯವಾಗಿದೆ. ಗಂಡ ರಮೇಶ್‌ ವಿರುದ್ದವೇ ಟೊಂಕ ಕಟ್ಟಿ ನಿಂತು ಮಗ ಕರ್ಣನ ರಕ್ಷಣೆಗೆ ತಾಯಿ ಮಾಲತಿ ನಿಂತಿದ್ದಾಳೆ. ಇತ್ತ ಇಬ್ಬರು ಅಜ್ಜಿಯರು ಸಂಬಂಧಿಕರಾದ ಖುಷಿಯಲ್ಲಿ ತಮ್ಮದೇ ಲೋಕದಲ್ಲಿ ಮುಳುಗಿದ್ದಾರೆ.

27
ತಾತ್ಕಾಲಿಕ ಪರಿಹಾರ

ಎದುರಾದ ಎಲ್ಲಾ ಸಮಸ್ಯೆಗಳಿಗೆ ಕರ್ಣ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾನೆ. ಮನೆಯ ಸದಸ್ಯರ ಮುಂದೆ ಕರ್ಣ ಮತ್ತು ನಿತ್ಯಾ ಗಂಡ-ಹೆಂಡ್ತಿಯಾಗಿದ್ದಾರೆ. ಇಬ್ಬರ ಮೊದಲ ರಾತ್ರಿಗೆ ಕೋಣೆಯನ್ನು ನಿಧಿಯೇ ಸಿಂಗರಿಸಿ, ಒಂಟಿಯಾಗಿ ಕಣ್ಣೀರು ಹಾಕುತ್ತಿದ್ದಾಳೆ. ಇದೀಗ ಕರ್ಣನ ಮುಂದೆ ಸಾಲು ಸಾಲು ಸವಾಲುಗಳಿವೆ. ಆ ಸವಾಲುಗಳು ಏನು ಎಂಬುದನ್ನು ನೋಡೋಣ ಬನ್ನಿ.

37
ಸವಾಲು 1

ನಿತ್ಯಾಳಿಗೆ ತಾನು ಗರ್ಭಿಣಿಯಾಗಿರುವ ವಿಷಯವೇ ಗೊತ್ತಿಲ್ಲ. ಆದ್ರೆ ನಿತ್ಯಾಳ ನಾಡಿಮಿಡಿತದಿಂದ ಈ ಸತ್ಯವನ್ನು ಕರ್ಣ ತಿಳಿದುಕೊಂಡಿದ್ದಾನೆ. ಇತ್ತ ಕರ್ಣನ ಬಳಿ ಮೂರು ತಿಂಗಳು ಸಮಯಾವಕಾ ಕೇಳಿರುವ ನಿತ್ಯಾ, ಆತನಿಂದ ದೂರವಾಗಲು ನಿರ್ಧರಿಸಿದ್ದಾಳೆ. ತೇಜಸ್‌ನನ್ನು ಹುಡುಕಿಸಿ ಆತನೊಂದಿಗೆ ಜೀವನ ನಡೆಸುವ ಆಸೆಯನ್ನು ಹೊಂದಿದ್ದಾಳೆ. ಆದ್ರೆ ನಿತ್ಯಾ ಗರ್ಭಿಣಿಯಾಗಿರುವ ವಿಷಯ ತಿಳಿದ್ರೆ ಮುಂದೆ ರಮೇಶ್ ಏನು ಮಾಡ್ತಾನೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.

47
ಸವಾಲು 2

ತನ್ನ ನೆಚ್ಚಿನ ಕರ್ಣ ಸರ್, ಅಕ್ಕನ ಗಂಡ ಎಂದು ತಿಳಿದಿರುವ ನಿಧಿ, ಇನ್ಮುಂದೆ ಕರ್ಣನಿಂದ ದೂರವಾಗಬೇಕು ಎಂದು ತೀರ್ಮಾನಿಸಿದ್ದಾಳೆ. ಕರ್ಣನಿಂದ ಅಂತರ ಕಾಯ್ದುಕೊಂಡ್ರೆ ಅದು ಅಕ್ಕ ನಿತ್ಯಾಳ ಸಂಸಾರಕ್ಕೆ ಒಳ್ಳೆಯದು. ಈ ಎಲ್ಲಾ ಬೆಳವಣಿಗೆ ನಡುವೆ ನಿತ್ಯಾ ಗರ್ಭಿಣಿ ಎಂದು ಗೊತ್ತಾದ್ರೆ ಖಂಡಿತವಾಗಿ ಕರ್ಣನಿಂದ ನಿಧಿ ಮತ್ತಷ್ಟು ದೂರವಾಗುತ್ತಾಳೆ. ಹಾಗಾಗಿ ಕರ್ಣ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎಂಬವುದು ಮಹತ್ವದ ಸವಾಲು ಆಗಿದೆ.

57
ಸವಾಲು 3

ಈಗಾಗಲೇ ತೇಜಸ್‌ಗೆ ತನ್ನ ಅಪಹರಣಕ್ಕೆ ಕರ್ಣನೇ ಕಾರಣ ಎಂಬ ತಪ್ಪಾದ ಕಲ್ಪನೆಯನ್ನು ಮೂಡಿಸಲಾಗಿದೆ. ಬಂಧನದಿಂದ ಬಿಡಿಸಿಕೊಂಡು ಬಂದ ತೇಜಸ್‌ಗೆ ನಿತ್ಯಾ-ಕರ್ಣನ ಮದುವೆ ವಿಷಯ ತಿಳಿಸಿದ್ರೆ ಆತ ಹೇಗೆ ಪ್ರತಿಕ್ರಿಯಿಸುತ್ತಾನೆ? ಇದಕ್ಕೆ ಕರ್ಣನ ಉತ್ತರ ಏನಾಗಿರಬಹುದು? ತೇಜಸ್ ಮಾತುಗಳನ್ನು ನಂಬಿ ಸಿಡುಕಿನ ಸ್ವಭಾವದ ನಿತ್ಯಾ ಮತ್ತೆ ಎದುರಾಳಿ ಆಗ್ತಾಳಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

67
ಸವಾಲು 4

ಮನೆಯ ಹಿರಿಯರಾಗಿರುವ ಇಬ್ಬರು ಅಜ್ಜಿಯರು ನಿತ್ಯಾ ಗರ್ಭಿಣಿಯಾಗಿರುವ ವಿಷಯ ತಿಳಿದ್ರೆ ಮತ್ತಷ್ಟು ಸಂತಸಗೊಳ್ಳುತ್ತಾರೆ. ಆದರೆ ಸುಳ್ಳು ಮದುವೆಯ ವಿಷಯ ತಿಳಿದ್ರೆ ಇಬ್ಬರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಇದು ಸಹ ಕರ್ಣನಿಗೆ ದೊಡ್ಡ ಸವಾಲು ಆಗಿ ಪರಿಣಮಿಸಲಿದೆ.

ಇದನ್ನೂ ಓದಿ: ಇಷ್ಟೆಲ್ಲಾ ಆದ್ಮೇಲೆ ಕರ್ಣನಿಗೆ ಮತ್ತೊಂದು ಮಹತ್ವದ ಜವಾಬ್ದಾರಿ: ಮೊದಲ ರಾತ್ರಿಯಲ್ಲಿ ಬಯಲಾಗುವುದೇ ಸತ್ಯ?

77
ಸವಾಲು 5

ನಿಧಿ, ನಿತ್ಯಾ ಮತ್ತು ಶಾಂತಿ ಅಜ್ಜಿ ಆಗಮನದಿಂದ ಕರ್ಣನ ಅತ್ತೆ ನಯನತಾರಾಗೆ ಆತಂಕ ಹೆಚ್ಚಾಗಿದೆ. ಕರ್ಣನ ಹುಟ್ಟು ಮತ್ತು ನಿಧಿ ಅಪ್ಪ-ಅಮ್ಮ ಸಾವಿನ ರಹಸ್ಯ ನಯನತಾರಾಳ ಒಡಲಾಳದಲ್ಲಿದೆ. ಹಾಗಾಗಿ ನಯನತಾರಾ ನಿಧಿ-ಶಾಂತಿಯನ್ನು ಮನೆಯಿಂದ ಹೊರಗೆ ಹಾಕಲು ಏನಾದ್ರೂ ಪ್ಲಾನ್ ಮಾಡುತ್ತಾಳೆ. ನಯನತಾರಾ ಸವಾಲು ಎದುರಿಸಿ ನಿಧಿ ಮತ್ತು ಶಾಂತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎಂಬುದರ ಬಗ್ಗೆಯೂ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Karna Serial: ತ್ಯಾಗಮಯಿ ಕರ್ಣನ ಮೇಲೆ ಮತ್ತೊಂದು ಅಪವಾದ; ನೀಚನ ದುಷ್ಟತನಕ್ಕೆ ವೀಕ್ಷಕರ ಹಿಡಿಶಾಪ

Read more Photos on
click me!

Recommended Stories