Bigg Boss: ಗಿಲ್ಲಿಗೆ Ashwini Gowda ಓಪನ್​ ಚಾಲೆಂಜ್​! ಉಲ್ಟಾ ಚಾಲೆಂಜ್​ ಹಾಕಿದ ನೆಟ್ಟಿಗರು: ಗೆಲ್ಲೋರು ಯಾರು?

Published : Oct 25, 2025, 08:59 PM IST

ಬಿಗ್​ಬಾಸ್​ ಮನೆಯಲ್ಲಿ ಜಗಳದಿಂದ ಅಶ್ವಿನಿ ಗೌಡ ಕುಖ್ಯಾತಿ ಗಳಿಸಿದರೆ, ಹಾಸ್ಯದಿಂದ ಗಿಲ್ಲಿ ನಟ ಜನಪ್ರಿಯರಾಗಿದ್ದಾರೆ. ಇದರ ನಡುವೆ, ಗಿಲ್ಲಿ ನಟನನ್ನು ಮನೆಯಿಂದ ಹೊರಹಾಕಿಯೇ ತಾನು ಹೋಗುವುದು ಎಂದು ಅಶ್ವಿನಿ ಓಪನ್ ಚಾಲೆಂಜ್ ಹಾಕಿದ್ದು, ಗಿಲ್ಲಿ ಅದನ್ನು ಹಾಸ್ಯವಾಗಿಯೇ ಸ್ವೀಕರಿಸಿದ್ದಾರೆ.

PREV
17
ಬಿಗ್​ಬಾಸ್​ನಲ್ಲಿ ಜಗಳ, ಹಾಸ್ಯಗಳ ಸಂಗಮ

ಸದ್ಯ ಬಿಗ್​ಬಾಸ್​ (Bigg Boss 12)ನಲ್ಲಿ ಅಶ್ವಿನಿ ಗೌಡ ಅವರು ಜಗಳದ ಮೂಲಕ ಕುಖ್ಯಾತಿ ಗಳಿಸುತ್ತಿದ್ದರೆ, ಅದೇ ಇನ್ನೊಂದೆಡೆ ತಮ್ಮ ಎಂದಿನ ಹಾಸ್ಯದಿಂದ ಗಿಲ್ಲಿ ನಟ ಎಲ್ಲರ ವಿಶ್ವಾಸವನ್ನು ಗಳಿಸುತ್ತಿದ್ದಾರೆ. ಇದಾಗಲೇ ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ ಅವರಿಗೆ ತೀರಾ ವೈಯಕ್ತಿಕ ಎನ್ನುವ ರೀತಿಯಲ್ಲಿ ಮಾತನಾಡಿದ್ದಕ್ಕೆ ಅವರ ಮೇಲೆ ಕೇಸ್​ ಕೂಡ ಆಗಿದೆ.

27
ಅಶ್ವಿನಿ ಮೇಲೆ ಕೋಪ

ಬಿಗ್​ಬಾಸ್​​ ಅಂದ ಮೇಲೆ ಅಶ್ವಿನಿ ಗೌಡ (Ashwini Gowda) ಅವರಂಥ ಸ್ಪರ್ಧಿಗಳು ಇದ್ದರೇನೇ ಟಿಆರ್​ಪಿ ಹೆಚ್ಚು ಎನ್ನುವುದು ಬಿಗ್​ಬಾಸ್​ಗೂ ಗೊತ್ತಿದೆ. ಆದ ಕಾರಣ, ನೆಟ್ಟಿಗರು, ವೀಕ್ಷಕರು ಅವರನ್ನು ಹೊರಗೆ ಕಳುಹಿಸಿ ಎಂದು ಎಷ್ಟೇ ಗೋಗರೆದರೂ ಅದು ಸದ್ಯ ಸಾಧ್ಯವಿಲ್ಲ ಎನ್ನುವ ಮಾತೂ ಕೂಡ ಇದೆ. ಜಗಳವೇ ಇಲ್ಲ ಎಂದ ಮೇಲೆ ಬಿಗ್​ಬಾಸ್​ಗೆ ಎಲ್ಲಿಯ ಬೆಲೆ ಎನ್ನೋದು ಕೆಲವರು ಮಾತು.

37
ಅಶ್ವಿನಿ-ಗಿಲ್ಲಿ ಫೇಮಸ್​

ಅದೇನೇ ಇದ್ದರೂ, ಅಶ್ವಿನಿ ಗೌಡ ಮತ್ತು ಜಾನ್ವಿ ಸದ್ಯ ಹಾಟ್​ ಟಾಪಿಕ್​ ಆಗಿರೋದು ಅವರ ಮಾತುಗಳು ಮತ್ತು ನಡವಳಿಕೆಯಿಂದ. ಅದೇ ಗಿಲ್ಲಿ ನಟನನ್ನು ಮಾತ್ರ ಜನರು ತುಂಬಾ ಪ್ರೀತಿಸುತ್ತಿದ್ದಾರೆ. ಯಾರು ಏನೇ ಹೇಳಿದರೂ ಹಾಸ್ಯದ ರೂಪದಲ್ಲಿಯೇ ಉತ್ತರಿಸುವ ಕಾರಣ ಅವರು ಹೆಚ್ಚಿನವರ ಪ್ರೀತಿ ವಿಶ್ವಾಸ ಗಳಿಸಿದ್ದು, ಅವರು ಕೂಡ ಬಿಗ್​ಬಾಸ್​ ಮನೆಯಲ್ಲಿ ತುಂಬಾ ದಿನ ಇರುವ ಸಾಧ್ಯತೆ ಇದೆ.

47
ಅಶ್ವಿನಿ ಗೌಡ ಓಪನ್​ ಚಾಲೆಂಜ್​

ಇದರ ನಡುವೆಯೇ ಇದೀಗ ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಓಪನ್​ ಚಾಲೆಂಜ್​ ಹಾಕಿರೋ ವಿಡಿಯೋ ಒಂದು ವೈರಲ್​ ಆಗ್ತಿದೆ. ಅದರಲ್ಲಿ ಅಶ್ವಿನಿ ಅವರು, ನಿನ್ನನ್ನು ಮನೆಗೆ ಕಳುಹಿಸಿಯೇ ನಾನು ಹೊರಗೆ ಹೋಗುವುದು ಎಂದಿದ್ದಾರೆ.

57
ನಾನು ಸ್ವೀಕರಿಸ್ತೇನೆ ಎಂದ ಗಿಲ್ಲಿ

ಇದಕ್ಕೆ ಗಿಲ್ಲಿ ನಟ (Bigg Boss Gilli Nata) ಎಂದಿನ ಹಾಸ್ಯದ ರೂಪದಲ್ಲಿ I like your challenge ಎಂದು ಖುಷಿಯಿಂದ ಹೇಳಿದ್ದಾರೆ. ಈ ಮೂಲಕ ಯಾರು ಮೊದಲು ಹೋಗುವುದು ಎಂದು ನಾನೂ ನೋಡುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.

67
ಕಮೆಂಟ್ಸ್​ ಸುರಿಮಳೆ

ಇದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಮೊದಲು ಹೋಗುವುದು ಅಶ್ವಿನಿ ಗೌಡ ಅವರೇ ಎನ್ನುತ್ತಿದ್ದಾರೆ ಬಹುತೇಕ ಮಂದಿ. ಅವರು ಈ ವಾರವೇ ಎಲಿಮಿನೇಟ್​ ಆಗುವ ಎಲ್ಲಾ ಸಾಧ್ಯತೆ ಇದೆ ಎಂದಿದ್ದಾರೆ. ಮತ್ತೆ ಕೆಲವರು ಕೇಸ್​ ದಾಖಲಾಗಿರುವುದು ಅವರಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ.

77
ಗೆಲ್ಲುವವರು ಯಾರು?

ಒಟ್ಟಿನಲ್ಲಿ ಒಬ್ಬರು ಜಗಳದ ಮೂಲಕ ಮತ್ತೊಬ್ಬರು ಹಾಸ್ಯದ ಮೂಲಕ ಬಿಗ್​ಬಾಸ್​ನಲ್ಲಿ ಸುದೀರ್ಘ ಅವಧಿಯವರೆಗೆ ಇರುವುದು ಕನ್​ಫರ್ಮ್​ ಎನ್ನಲಾಗಿದೆ. ಹಾಗಿದ್ದರೆ ಅಶ್ವಿನಿ ಗೌಡ ಗೆಲ್ತಾರೋ ಅಥವಾ ವೀಕ್ಷಕರು ಗೆಲ್ತಾರೋ ನೋಡಬೇಕಿದೆ.

Read more Photos on
click me!

Recommended Stories