ಕರ್ಣ-ನಿಧಿ ಫಸ್ಟ್‌ನೈಟ್‌ಗೆ ಅಜ್ಜಿಯಿಂದ ವಿಘ್ನ; ವಿರಹ ವೇದನೆಯಲ್ಲಿ ನವಜೋಡಿ ವಿಲವಿಲ

Published : Jul 14, 2026, 10:48 AM IST

ಕರ್ಣ ಧಾರಾವಾಹಿಯಲ್ಲಿ ಆಷಾಢ ಮಾಸದ ಸಂಪ್ರದಾಯದಿಂದಾಗಿ ನವಜೋಡಿ ನಿಧಿ ಮತ್ತು ಕರ್ಣ ಬೇರೆಯಾಗಿದ್ದಾರೆ. ಅಜ್ಜಿಯ ಕಣ್ತಪ್ಪಿಸಿ, ತನ್ನ ಪತ್ನಿಯನ್ನು ಭೇಟಿಯಾಗಲು ಕರ್ಣನು ಅಜ್ಜನ ವೇಷದಲ್ಲಿ ಹೋಗಿದ್ದು, ಅಲ್ಲಿ ಮತ್ತೊಬ್ಬ ಅಜ್ಜಿಗೆ ಸಿಕ್ಕಿಬೀಳುವ ಸನ್ನಿವೇಶ ಎದುರಾಗಿದೆ.

PREV
15
ಆಷಾಢಕ್ಕೆ ಸಿಲುಕಿದ ನಿಧಿ-ಕೀರ್ತಿ

ಜಸ್ಟ್ ಮ್ಯಾರಿಡ್ ಕಪಲ್ ಸಂಭ್ರಮದಲ್ಲಿರುವ ಡಾಕ್ಟರ್ ಕರ್ಣ ಮತ್ತು ನಿಧಿ ಜೋಡಿಯ ಮೊದಲರಾತ್ರಿಗೆ ಕಿಲಾಡಿ ಅಜ್ಜಿ ವಿಘ್ನವನ್ನುಂಟು ಮಾಡಿದ್ದಾರೆ. ಅಜ್ಜಿ ಅನ್ನಪೂರ್ಣ ಮತ್ತು ತಾಯಿ ಮಾಲತಿ ಮಾತಿನಿಂದ ನಿಧಿ ಮತ್ತು ಕರ್ಣ ವಿರಹ ವೇದನೆಯ ಪಾಶದಲ್ಲಿ ಸಿಲುಕಿವ ವಿಲವಿಲ ಅಂತಾ ಒದ್ದಾಡುತ್ತಿದ್ದಾರೆ.

25
ಆಷಾಢ

ಆಷಾಢ ಮಾಸದಲ್ಲಿ ನವಜೋಡಿ ಪ್ರತ್ಯೇಕವಾಗಿರಬೇಕು ಎಂಬ ಮಾತಿದೆ. ಈ ಮಾತಿನಂತೆ ಆಷಾಢ ತಿಂಗಳ ಸಮಯದಲ್ಲಿ ವಧು ತವರು ಸೇರುತ್ತಾಳೆ. ಸದ್ಯ ಆಷಾಢ ಮಾಸ ಬಂದಿರೋದನ್ನು ಕರ್ಣ ಸೀರಿಯಲ್‌ನಲ್ಲಿ ಬಳಸಿಕೊಳ್ಳಲಾಗಿದೆ. ಆಷಾಢದಿಂದಾಗಿ ಕರ್ಣ ಮತ್ತು ನಿಧಿಯ ಮೊದಲರಾತ್ರಿ ನಿಂತು ಹೋಗಿದೆ.

35
ತವರು ಸೇರಿದ ನಿಧಿ

ಅಜ್ಜಿಯ ಮಾತಿನಂತೆ ನಿಧಿ ತವರು ಸೇರಿದ್ದಾಳೆ. ಆಷಾಢದಲ್ಲಿ ಹೆಂಡ್ತಿ ನಿಧಿಯನ್ನು ನೋಡುವಂತಿಲ್ಲ, ಭೇಟಿಯಾಗುವಂತಿಲ್ಲ ಎಂದು ಅಜ್ಜಿ ಕಂಡಿಷನ್ ಹಾಕಿದ್ದು, ಕರ್ಣ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದೀಗ ಅಜ್ಜಿಯ ಮಾತುಗಳನ್ನು ಮೀರಿ ನಿಧಿಯನ್ನು ನೋಡಲು ಮಾರುವೇಷದಲ್ಲಿ ಕರ್ಣ ಹೋಗಿದ್ದಾನೆ.

45
ಅಜ್ಜನ ವೇಷದಲ್ಲಿ ಬಂದ ಗಂಡ ಕರ್ಣ

ತನ್ನ ಕ್ಲಿನಿಕ್‌ಗೆ ಅಜ್ಜನ ವೇಷದಲ್ಲಿ ಬಂದ ಗಂಡ ಕರ್ಣನನ್ನು ನಿಧಿ ಪತ್ತೆ ಮಾಡಿದ್ದು, ಇಬ್ಬರು ಅಲ್ಲಿಯೇ ರೊಮ್ಯಾನ್ಸ್ ಶುರು ಮಾಡಿಕೊಂಡಿದ್ದಾರೆ. ಆದ್ರೆ ಅಲ್ಲಿ ಅನ್ನಪೂರ್ಣ ಆದ್ರೆ, ಇಲ್ಲಿ ಶಾಂತಿ ಅಜ್ಜಿ ಇಬ್ಬರ ಮಧ್ಯೆ ಬಂದಿದ್ದಾರೆ. ಅಜ್ಜಿ ಬರುತ್ತಿದ್ದಂತೆ ಕರ್ಣ ಬೆನ್ನು ಮಾಡಿ ನಿಂತುಕೊಂಡಿದ್ದಾನೆ. ಆದ್ರೂ ಶಾಂತಿ ಅಜ್ಜಿಗೆ ಸಣ್ಣದಾದ ಅನುಮಾನವೊಂದು ಮೂಡಿದೆ.

55
ಕರ್ಣ ಸೀರಿಯಲ್

ಕಳೆದ ಕೆಲವು ದಿನಗಳಿಂದ ಕರ್ಣ ಸೀರಿಯಲ್ ನೀರಸವಾಗ್ತಿದೆ ಎಂಬುವುದು ವೀಕ್ಷಕರ ಅಭಿಪ್ರಾಯವಾಗಿದೆ. ಮತ್ತೊಂದೆಡೆ ಕಾಣೆಯಾಗಿರುವ ನಿತ್ಯಾಳನ್ನು ಕರೆದುಕೊಂಡು ಬನ್ನಿ ಎಂದು ವೀಕ್ಷಕರು ಆಗ್ರಹಿಸಿದ್ದಾರೆ. ಸೋಮವಾರದಿಂದ ಶುಕ್ರವಾರ ಝೀ ಕನ್ನಡ ವಾಹಿನಿಯಲ್ಲಿ ರಾತ್ರಿ 8 ಗಂಟೆಗೆ ಕರ್ಣ ಧಾರಾವಾಹಿ ಪ್ರಸಾರವಾಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories