‘ಕರ್ಣ’ ಸೀರಿಯಲ್‌ನಲ್ಲಿ ರಿಯಾ ಪಾತ್ರದಲ್ಲಿ ನಟಿಸುತ್ತಿರುವ ಅಂಕಿತಾ ಜಯರಾಮ್, ತಮ್ಮ ಪಾತ್ರದಿಂದಾಗಿ ಸಾರ್ವಜನಿಕರಿಂದ ಎದುರಿಸಿದ ವಿಶಿಷ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಬಸ್‌ನಲ್ಲಿ ಮಹಿಳಾ ಕಂಡಕ್ಟರ್, ಸೀರಿಯಲ್‌ನಲ್ಲಿನ ಪತಿ ಸಂಜಯ್‌ನನ್ನು ನಂಬದಂತೆ ಬುದ್ಧಿಮಾತು ಹೇಳಿದ ಘಟನೆ ವಿವರಿಸಿದ್ದಾರೆ.
ಸೀರಿಯಲ್ಗಳನ್ನು ಇಂದು ಎಷ್ಟೋ ಮಂದಿ ಕೇವಲ ಸೀರಿಯಲ್ ಆಗಿ ತೆಗೆದುಕೊಳ್ತಿಲ್ಲ. ಅದನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗ, ಅದು ತಮ್ಮದೇ ಜೀವನದ ಕಥೆ ಎಂದುಕೊಂಡವರು ಹಲವರಿದ್ದಾರೆ. ಅದರಕ್ಕೆ ಶಿಕ್ಷಿತರು, ಶಿಕ್ಷಣ ಇಲ್ಲದವರು, ದೊಡ್ಡ ಕೆಲಸದಲ್ಲಿ ಇರುವವರು, ಗೃಹಿಣಿಯರು... ಹೀಗೆ ಏನೂ ಬೇಧಭಾವವೇ ಇಲ್ಲ. ಸೀರಿಯಲ್ ಅನ್ನು ಒಂದು ದಿನವೂ ಬಿಡದೇ ನೋಡುವ ಎಲ್ಲಾ ವರ್ಗದವರು ಕೂಡ ಸೀರಿಯಲ್ನ ಭಾಗವಾಗಿ ಬಿಟ್ಟಿರುತ್ತಾರೆ.
26
ಪಾತ್ರಧಾರಿಗಳು ಮತ್ತು ವೀಕ್ಷಕರು
ಇಲ್ಲಿ, ನಡೆಯುವ ಕಥೆಗಳು ಕೇವಲ ಕಥೆಗಳಲ್ಲ, ಅದು ನಿಜವಾಗಿಯೂ ನಡೆಯುವಂಥದ್ದೇ ಎಂದು ನಂಬುವ ಹಲವರಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಒಂದು ಕೈ ಮೇಲೆಯೇ ಎನ್ನಬೇಕು. ಆ ಸೀರಿಯಲ್ನ ಕೆಲವು ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಂಡು ಆಸ್ವಾದಿಸುತ್ತಾರೆ.
ಇದೇ ಕಾರಣಕ್ಕೆ ವಿಲನ್ ಪಾತ್ರಧಾರಿಗಳು, ಅವರು ನಿಜ ಜೀವನದಲ್ಲಿ ಎಷ್ಟೇ ಒಳ್ಳೆಯವರಾಗಿದ್ದರೂ, ಹೊರಗಡೆ ಎಲ್ಲಾದರೂ ಸಿಕ್ಕರೆ ಅವರಿಗೆ ಛೀಮಾರಿ ಹಾಕುವುದು ಇದ್ದರೆ, ನಾಯಕ-ನಾಯಕಿ ಸಿಕ್ಕರೆ ಅವರು ನಿಜಕ್ಕೂ ದೇವರ ಸಮಾನ ಎಂದುಕೊಳ್ಳುವ ಜನಸಾಮಾನ್ಯರು ತುಂಬಾ ಇದ್ದಾರೆ.
36
ರಿಯಾ ಅರ್ಥಾತ್ ಅಂಕಿತಾ ಜಯರಾಮ್
ಅಂಥದ್ದೇ ಒಂದು ಅನುಭವವನ್ನು ಕರ್ಣ ಸೀರಿಯಲ್ (karna Serial) ವಿಲನ್ ಸಂಜಯ್ ಪತ್ನಿಯಾಗಿ ನಟಿಸುತ್ತಿರುವ ರಿಯಾ ಅರ್ಥಾತ್ ಅಂಕಿತಾ ಜಯರಾಮ್ ಅವರು ಎದುರಿಸುತ್ತಿದ್ದು, ಆ ರೋಚಕ ಘಟನೆಯೊಂದನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ನಾನು ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವಾಗಲೆಲ್ಲಾ ಬಿಎಂಟಿಸಿ ಬಸ್ನಲ್ಲಿಯೇ ಹೋಗುವುದು. ಈಗಲೂ ಬಸ್ನಲ್ಲಿಯೇ ಹೋಗುತ್ತೇನೆ. ಜನರು ನನ್ನನ್ನು ಪರಿಚಯ ಮಾಡುತ್ತಾರೆ ಎನ್ನುವ ಕಾರಣಕ್ಕೆ ಮಾಸ್ಕ್ ಹಾಕಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
56
ಲೇಡಿ ಕಂಡಕ್ಟರ್ ಬುದ್ಧಿ ಮಾತು
ಆದರೂ ಒಂದು ದಿನ ಒಬ್ಬ ಲೇಡಿ ಕಂಡಕ್ಟರ್ ನನ್ನನ್ನು ಗುರುತಿಸಿ, ನಿಮ್ಮನ್ನು ಬಸ್‌ನಲ್ಲಿ ನೋಡ್ತಾ ಇರುತ್ತೇನೆ. ಮಾಸ್ಕ್ ಹಾಕಿಕೊಂಡ್ರೆ ಪರಿಚಯ ಸಿಗಲ್ಲ ಎಂದುಕೊಂಡ್ರಾ ಎಂದು ಮಾತನಾಡಿಸಿದ್ರು. ಕೊನೆಗೆ ನನ್ನನ್ನು ಕುಳ್ಳರಿಸಿಕೊಂಡು, ನೋಡಿ, ಆ ಸಂಜಯ್ ಒಳ್ಳೆಯವನಲ್ಲ. ಅವನ ಹಿಂದೆ ಹೋಗಬೇಡಿ. ಅವನು ದೊಡ್ಡ ಮೋಸಗಾರ. ಅವನನ್ನು ನಂಬಬೇಡಿ ಎಂದು ಬುದ್ಧಿಮಾತು ಹೇಳಿದ್ರು ಎಂಬ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
66
ತುಂಬಾ ಖುಷಿಯಾಗತ್ತೆ
ಇಂಥದ್ದನ್ನು ಕೇಳಿದಾಗ ಖುಷಿಯಾಗುತ್ತದೆ. ನನ್ನ ಪಾತ್ರಕ್ಕೆ ನಾನು ಎಷ್ಟು ಜೀವ ತುಂಬುತ್ತಿದ್ದೇನೆ. ಜನರು ಅದನ್ನು ಎಷ್ಟು ಚೆನ್ನಾಗಿ ನೋಡುತ್ತಿದ್ದಾರೆ. ನಮ್ಮ ಪಾತ್ರವನ್ನು ಎಷ್ಟು ಮನಸ್ಸಿಗೆ ನಾಟಿಸಿಕೊಂಡಿದ್ದಾರೆ ಎಂದು ತಿಳಿದು ಖುಷಿಯಾಗುತ್ತದೆ ಎಂದಿದ್ದಾರೆ ಅಂಕಿತಾ ಜಯರಾಮ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.