ಕರ್ಣ ಸೀರಿಯಲ್‌ನಲ್ಲಿ ಸಾಲು ಸಾಲು ಟ್ವಿಸ್ಟ್‌ಗಳ ಬಳಿಕ, ಕರ್ಣ ಸಹಜ ಜೀವನಕ್ಕೆ ಮರಳಿದ್ದಾನೆ. ನಿತ್ಯಾ ಜೊತೆಗಿನ ಮದುವೆ, ಮನೆಯಲ್ಲಾದ ದುರಂತದ ನಂತರವೂ ಕರ್ಣನ ಮುಖದಲ್ಲಿನ ನಗು, ಅವನ ತಂದೆ ರಮೇಶ್, ತಮ್ಮ ಸಂಜಯ್ ಮತ್ತು ಮಾಜಿ ಪ್ರೇಯಸಿ ನಿಧಿಗೆ ಗೊಂದಲ ಮೂಡಿಸಿದೆ.
ಸೀರಿಯಲ್‌ಗಳಲ್ಲಿ ಏನು ಬೇಕಾದ್ರೂ ನಡೆಯುತ್ತೆ ಅನ್ನೋದಕ್ಕೆ ಕರ್ಣ ಸೀರಿಯಲ್ ಸಾಕ್ಷಿಯಾಗಿದೆ. ಒಂದೇ ದಿನದ ಸಂಚಿಕೆಯಲ್ಲಿ ಧಾರಾವಾಹಿ ಸಂಪೂರ್ಣ ಬದಲಾಗಿದೆ. ಕರ್ಣನ ಮದುವೆಯಾಯ್ತು, ನಿತ್ಯಾ ಗರ್ಭಿಣಿ, ಮನೆಗೆ ಬೆಂಕಿ ಸೇರಿದಂತೆ ಸಾಲು ಸಾಲು ಟ್ವಿಸ್ಟ್ ನೀಡಿ ನೋಡುಗರನ್ನು ಮನರಂಜಿಸಲಾಗಿದೆ. ಈ ಎಲ್ಲಾ ಘಟನೆ ನಡೆದ ಮರುದಿನವೇ ಕರ್ಣ ಎಂದಿನಂತೆ ಮುಗುಳ್ನಗುತ್ತಾ ಅಪ್ಪ ರಮೇಶ್, ತಮ್ಮ ಸಂಜೀವ್‌ಗೆ ಶಾಕ್ ನೀಡಿದ್ದಾನೆ. ಕರ್ಣ ಎಂದಿನಂತೆ ಸಹಜ ಜೀವನಕ್ಕೆ ಮರಳಿರೋದನ್ನು ನೋಡಿ ನಿಧಿ ಫುಲ್ ಕನ್ಫ್ಯೂಸ್ ಆಗಿದ್ದಾಳೆ.
25
ರಮೇಶ್ ಮತ್ತು ಸಂಜಯ್‌ಗೆ ಶಾಕ್
ನಿತ್ಯಾ ಜೊತೆಗಿನ ಮದುವೆ, ಮಾಜಿ ಪ್ರೇಯಸಿ ನಿಧಿ ಕಣ್ಮುಂದೆ ಇದ್ರೆ ಕರ್ಣ ಶೋಕದಲ್ಲಿರುತ್ತಾನೆ. ಆತನ ಸೋತ ಮುಖ ನೋಡಿ ಆನಂದ ತೆಗೆದುಕೊಳ್ಳಬೇಕು ಅನ್ನೋದು ರಮೇಶ್‌ನ ಪ್ಲಾನ್ ಆಗಿತ್ತು. ರಮೇಶ್‌ನ ಈ ಕುತಂತ್ರಕ್ಕೆ ಮಗ ಸಂಜಯ್ ಸಹ ಸಾಥ್ ನೀಡಿದ್ದಾನೆ. ಬೆಳಗ್ಗೆ ಎದ್ದು ಕರ್ಣನ ಸೋತ ಮುಖ ನೋಡಲು ಬಂದಿದ್ದ ರಮೇಶ್ ಮತ್ತು ಸಂಜಯ್‌ಗೆ ಶಾಕ್ ಆಗಿದೆ.
35
ಕರ್ಣನ ಮುಖದಲ್ಲಿನ ನಗು ನೋಡಿ ಶಾಕ್
ಇವತ್ತು ಬೆಳಗ್ಗೆ ನಿಜವಾದ ಬೆಳಕು ಕೊಡುವ ಸೂರ್ಯ ಹುಟ್ಟಿದ್ದಾನೆ. ಇವತ್ತಿನಿಂದ ಕರ್ಣನ ತಿಪ್ಪೆ ಬದುಕಿನ ಹೊಸ ಅಧ್ಯಾಯ ಆರಂಭ ಎಂದು ರಮೇಶ್ ಮಗನಿಗೆ ಹೇಳುತ್ತಾನೆ. ಕರ್ಣನ ಹೊಸ ಅಧ್ಯಾಯ ನೋಡಲು ಮಗ ಸಂಜಯ್ ಜೊತೆ ರಮೇಶ್ ಬರುತ್ತಾನೆ. ಆದ್ರೆ ಕರ್ಣನ ಮುಖದಲ್ಲಿನ ನಗು ನೋಡಿ ಶಾಕ್ ಆದ ರಮೇಶ್, ಇವನಿಗೇನಾದ್ರೂ ಹುಚ್ಚು ನಾಯಿ ಕಚ್ಚಿದೆಯಾ ಎಂದು ಮಗನಿಗೆ ಕೇಳುತ್ತಾನೆ.
ಅಡುಗೆ ಸಿಬ್ಬಂದಿ ಜೊತೆ ಮಾತನಾಡಿರುವಾಗ ಕರ್ಣ, ಏನಾದ್ರೂ ತಪ್ಪು ಆಯ್ತು ಅಂದ್ಕೊಳ್ಳಿ. ಅದನ್ನು ಸಹ ಖುಷಿ ದಾರಿಗೆ ತಂದು ಸರಿ ಮಾಡಿಕೊಳ್ಳಬೇಕು ಎಂದು ಮುತ್ತಿನಂತಹ ಮಾತನ್ನು ಹೇಳಿದ್ದಾನೆ. ಕರ್ಣನ ಮಾತುಗಳು ಮತ್ತ ನಗುವನ್ನು ಅರಗಿಸಿಕೊಳ್ಳಲು ನೀಚ ರಮೇಶ್‌ಗೆ ಸಾಧ್ಯವಾಗುತ್ತಿಲ್ಲ.
ಸದ್ಯ ಅಜ್ಜಿ ಶಾಂತಿ ಜೊತೆ ಕರ್ಣನ ಮನೆಯಲ್ಲಿಯೇ ನಿಧಿ ಆಶ್ರಯ ಪಡೆದುಕೊಂಡಿದ್ದಾಳೆ. ಅಕ್ಕನ ಜೀವನದಲ್ಲಾದ ಬದಲಾವಣೆ, ಪ್ರೀತಿ ಕಳೆದುಕೊಂಡ ದುಖಃದಲ್ಲಿರುವ ನಿಧಿ ಸಹ ಬೆಳಗ್ಗೆ ಕರ್ಣ ನಗುತ್ತಾ ಲವಲವಿಕೆಯಿಂದಿರೊದ್ನು ನೋಡಿ ಕನ್ಫ್ಯೂಸ್ ಆಗಿದ್ದಾಳೆ. ತಂದೆ ರಮೇಶ್ ಜೊತೆಯಲ್ಲಿ ನಿಧಿಗೂ ಕರ್ಣ ಬಿಸಿಬಿಸಿಯಾದ ಕಾಫಿ ಮಾಡಿಕೊಟ್ಟಿದ್ದಾನೆ.