Amruthadhaare Serial: ನೀವು ಅಂದುಕೊಂಡ ಹಾಗಿಲ್ಲ Gowtham ದತ್ತುಪುತ್ರಿ! ಅಸಲಿ ಮುಖ ನೋಡಿ ಬೆಚ್ಚಿಬಿದ್ದ ಅಪ್ಪು

Published : Oct 23, 2025, 07:26 AM IST

ಅಮೃತಧಾರೆ ಧಾರಾವಾಹಿಯಲ್ಲಿ ವಠಾರದಲ್ಲಿ ಗೌತಮ್‌, ಭೂಮಿಕಾ ಈಗ ನೆರೆ ಹೊರೆಯವರು. ಮಲ್ಲಿ, ಕಾವೇರಿಯ ಪ್ಲ್ಯಾನ್‌ನಿಂದ ಇವರಿಬ್ಬರು ಅಕ್ಕ-ಪಕ್ಕದ ಮನೆಯಲ್ಲಿ ಇರುವ ಹಾಗೆ ಆಗಿದೆ. ಅಚಾನಕ್‌ ಆಗಿ ಗೌತಮ್‌ಗೆ ಹೆಣ್ಣು ಮಗುವೊಂದು ಸಿಕ್ಕಿದ್ದು, ಅದನ್ನು ದತ್ತು ತಗೊಂಡಿದ್ದಾನೆ. ಭೂಮಿಕಾ ಮಗ ಕೂಡ ಅಲ್ಲೇ ಇದ್ದಾನೆ. 

PREV
15
ಗೌತಮ್‌ನಿಂದ ದೂರ ಇರುವ ಆಕಾಶ್

ಗೌತಮ್‌ ಜೊತೆ ಮಾತನಾಡಿದರೆ ಅಮ್ಮ ಬೈತಾಳೆ ಎಂದು ಆಕಾಶ್‌ ದೂರ ಇದ್ದನು. ಆದರೆ ಮಲ್ಲಿಯೇ ಅವನನ್ನು ಗೌತಮ್‌ ಮನೆಗೆ ಕಳಿಸಿ, ಅವರ ಮನೆಯಲ್ಲಿ ಯಾರು, ಯಾರು ಇದ್ದಾರೆ ಎಂದು ನೋಡಿಕೊಂಡು ಬರಲು ಹೇಳಿದ್ದಳು. ಮಲ್ಲಿ ಹೇಳಿದಳು ಎಂದು ಅವನು ಮನೆಗೆ ಬಂದಿದ್ದಾನೆ.

25
ಗೌತಮ್‌ ಮನೆಯೊಳಗಡೆ ಆಕಾಶ್‌ ಎಂಟ್ರಿ

ಗೌತಮ್‌ ಬಿಸಿಬೇಳೆ ಬಾತ್‌ ಮಾಡುತ್ತಿದ್ದನು, ಅದಕ್ಕೆ ಮಿಂಚು ಸಹಾಯ ಕೂಡ ಮಾಡುತ್ತಿದ್ದಳು. ಅದೇ ಸಮಯಕ್ಕೆ ಆಕಾಶ್‌ ಎಂಟ್ರಿ ಆಗುವುದು, “ಏನ್‌ ಸರ್‌, ನಮ್ಮ ನಿಮ್ಮ ಫ್ರೆಂಡ್‌ಶಿಪ್‌ ಬೇಡ ಅಂದ್ರಿ, ನಮ್ಮ ಮನೆಯೊಳಗಡೆ ಬಂದಿದ್ದೀರಾ” ಎಂದು ಗೌತಮ್‌ ತನ್ನ ಮಗನನ್ನು ಪ್ರಶ್ನೆ ಮಾಡುತ್ತಾನೆ. ಆಗ ಆಕಾಶ್‌ ಏನೋ ಒಂದು ಉತ್ತರ ಹೇಳಿ ತಪ್ಪಿಸಿಕೊಳ್ತಾನೆ.

35
ಅವಾಜ್‌ ಹಾಕಿದ ಮಿಂಚು

ಗೌತಮ್‌ ದತ್ತು ಪುತ್ರಿ ಪ್ಲೇಟ್‌ ಒರೆಸುತ್ತಿದ್ದಳು. ಆ ಪ್ಲೇಟ್‌ ಕಿತ್ತುಕೊಂಡ ಆಕಾಶ್‌, ಬಿಸಿಬೇಳೆ ಬಾತ್‌ ಹಾಕಿಸಿಕೊಂಡು ತಿನ್ನುತ್ತಾನೆ. ಹಾಗೆ ತಿನ್ನುತ್ತ ಗೌತಮ್‌ ಬಳಿ, ಸರ್, ನಿಮಗೆ ಮಗ ಇದ್ದಾನೆ ಅಂತ ಹೇಳಿದ್ರಿ, ಇವರಾರು? ಅಂತ ಪ್ರಶ್ನೆ ಮಾಡುತ್ತಾನೆ. ಆಗ ಮಿಂಚು, “ನಾನು ಅವರ ಮಗಳು, ಅವರ ಹತ್ರ ಏನಾದರೂ ಪ್ರಶ್ನೆ ಮಾಡಿದ್ರೆ ಸುಮ್ಮನೆ ಇರೋದಿಲ್ಲ” ಎಂದು ಅವಾಜ್‌ ಹಾಕುತ್ತಾಳೆ. ಅವಳ ಮಾತು ಕೇಳಿ ಆಕಾಶ್‌ ಹೆದರುತ್ತಾನೆ.

45
ಸ್ಕೂಲ್‌ಗೆ ಸೇರಿಸ್ತಿರೋ ಮಿಂಚು

ಇನ್ನೊಂದು ಕಡೆ ಮಿಂಚುವನ್ನು ಸ್ಕೂಲ್‌ಗೆ ಸೇರಿಸಲು ಗೌತಮ್‌ ಬರೋದುಂಟು. ಅಲ್ಲಿ ಭೂಮಿಕಾ ಅವರೇ ಹೆಡ್‌ ಮಿಸ್.‌ ಆ ಪುಟ್ಟ ಹುಡುಗಿ ಬಳಿ, ಭೂಮಿಕಾ “ನಿನ್ನ ಹೆಸರೇನು? ನಿನ್ನ ಅಮ್ಮ ಯಾರು?” ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಮಿಂಚು, “ನನ್ನ ಹೆಸರು ಜಿ ಮಿಂಚು, ಜಿ ಅಂದರೆ ಗೌತಮ್.‌ ನನಗೆ ಅಪ್ಪ-ಅಮ್ಮ ಇಬ್ಬರೂ ಇವರೇ” ಎಂದು ಹೇಳಿದ್ದಾರೆ.

55
ಭೂಮಿಕಾಗೆ ಚಿಂತೆ ಶುರು

ಗೌತಮ್‌ ಜೊತೆ ಇರುವ ಹುಡುಗಿ ಯಾರು? ಆ ಹುಡುಗಿ ತಾಯಿ ಯಾರು? ಎಂದೆಲ್ಲ ಭೂಮಿಕಾಗೆ ಯೋಚನೆ ಶುರು ಆಗಿದೆ. ಅವಳು ಈ ವಿಷಯವನ್ನು ತಿಳಿದುಕೊಳ್ಳಲು ಒದ್ದಾಡುತ್ತಿದ್ದಾಳೆ. ಮಲ್ಲಿ ಕೂಡ ಈ ಸಿಕ್ರೇಟ್‌ ಮಿಷನ್‌ಗೆ ಕೈಜೋಡಿಸಿದ್ದಾಳೆ. ಆದರೆ ಅವರಿಗೆ ಸತ್ಯ ಏನು ಎಂದು ಗೊತ್ತಾಗಿಲ್ಲ. ಮುಂದೊಂದು ದಿನ ಗೊತ್ತಾಗಲೂಬಹುದು. ಈ ಮಗುವಿನಿಂದ ಭೂಮಿ-ಗೌತಮ್‌ ಹತ್ತಿರ ಆದರೂ ಆಶ್ಚರ್ಯವಿಲ್ಲ

Read more Photos on
click me!

Recommended Stories