Zee Kannada Serial Amruthadhaare: ಮಲ್ಲಿಯ ಜಗಳದಿಂದ ಹಳೆಯ ಮನೆ ಖಾಲಿ ಮಾಡಿದ ಭೂಮಿಕಾಗೆ, ಗೌತಮ್ ಮತ್ತೆ ಎದುರಾಗುತ್ತಾನೆ. ಇತ್ತ ಜೈದೇವ್ ಆಸ್ತಿಗಾಗಿ ಇವರಿಬ್ಬರನ್ನು ಹುಡುಕುತ್ತಿದ್ದು, ಕಥೆ ರೋಚಕ ತಿರುವು ಪಡೆದಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ಸಾಲು ಸಾಲು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ದೂರದ ಹಳ್ಳಿಯಲ್ಲಿದ್ದ ಭೂಮಿಕಾ, ಮಲ್ಲಿ ಮತ್ತು ಅಪ್ಪು ಬೆಂಗಳೂರಿಗೆ ಹಿಂದಿರುಗಿದ್ದಾರೆ. ಇತ್ತ ಗೌತಮ್ ಮನೆಗೆ ಅದೃಷ್ಟ ದೇವತೆಯ ಆಗಮನವಾಗಿದೆ. ಇದೀಗ ಮಲ್ಲಿಯ ಜಗಳದಿಂದ ಅಮೃತಧಾರೆ ಸೀರಿಯಲ್ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ.
25
ಗೌತಮ್‌ನಿಂದ ದೂರ
ಗೌತಮ್‌ನಿಂದ ದೂರವಿರಬೇಕು ಅನ್ನೋದು ಭೂಮಿಕಾ ಉದ್ದೇಶ. ಇದೀಗ ಗೌತಮ್ ವಾಸವಾಗಿರುವ ವಠಾರಕ್ಕೆ ಭೂಮಿಕಾ ಎಂಟ್ರಿಯಾಗಿದೆ. ತಮ್ಮ ವಠಾರಕ್ಕೆ ಹೊಸದಾಗಿ ಬಂದಿರುವ ಅತಿಥಿಗಳಿಗೆ ಟೀ ಮಾಡಿಕೊಂಡು ಕೊಡಲು ಗೌತಮ್ ಹೋಗಿದ್ದು, ಮತ್ತೆ ಭೂಮಿಕಾ ಅವರನ್ನು ನೋಡುವಂತಾಗಿದೆ.
35
ಓನರ್ ಜೊತೆ ಮಲ್ಲಿ ಕೋಳಿ ಜಗಳ
ಮನೆಯಲ್ಲಿ ನೀರು ಬರುತ್ತಿಲ್ಲ ಎಂದು ಓನರ್ ಜೊತೆ ಮಲ್ಲಿ ಕೋಳಿ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಓನರ್ ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ. ಇದೀಗ ಭೂಮಿಕಾಗೆ ಗೆಳತಿಯ ಸಹಾಯದಿಂದ ವಠಾರದಲ್ಲಿ ಬಾಡಿಗೆ ಮನೆ ಸಿಕ್ಕಿದೆ. ಆದ್ರೆ ಇದೇ ವಠಾರದಲ್ಲಿ ಗೌತಮ್ ವಾಸವಾಗಿರುವ ವಿಷಯ ಭೂಮಿಕಾಗೆ ತಿಳಿದಿಲ್ಲ.
ಇಂದು ಈ ಪ್ರೋಮೋ ಬಿಡುಗಡೆಯಾಗಿದ್ದು ನೆಟ್ಟಿಗರು ತರೇಹವಾರಿಯಾಗಿ ಕಮೆಂಟ್ ಮಾಡಿದ್ದಾರೆ. ಅಯ್ಯೋ ಏನ್ರೀ ಡೈರೆಕ್ಟರ್ ಇದು ನೀವು ಕೊಡೋ ಟ್ವಿಸ್ಟ್ ಗಳು ನೋಡಿದ್ರೆ ನಮಗೆ ಹಾರ್ಟ್ ಅಟ್ಟ್ಯಾಕ್ ಆಗುತ್ತೆ. ಭೂಮಿ ಗುಂಡಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಗೌತಮ್ ನೀನು ತುಂಬಾ ಒಳ್ಳೆಯವನಾಗಬೇಡಪ್ಪಾ. ಏನ್ ಏನ್ ಟ್ವಿಸ್ಟ್ ಕೊಡ್ತೀರಾ ಮಾರಾಯ ನೀವು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಇತ್ತ ಭೂಮಿಕಾ ಮತ್ತು ಗೌತಮ್‌ಗಾಗಿ ಜೈದೇವ್ ಹುಡುಕಾಟ ನಡೆಸಿದ್ದಾನೆ. ಆಸ್ತಿಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲು ಜೈದೇವ್ ಮತ್ತು ಶಕುಂತಲಾ ಪ್ಲಾನ್ ಮಾಡಿದ್ದಾರೆ. 600 ಕೋಟಿ ರೂಪಾಯಿ ಸಾಲದಿಂದ ಪಾರಾಗಲು ಸಂಚು ರೂಪಿಸುತ್ತಿದ್ದಾರೆ.