Zee Kutumba Awards 2025 ಟೈಮ್‌ನಲ್ಲೇ Weekend With Ramesh ಕುರ್ಚಿ ಏರಿದ ರಿಷಬ್‌ ಶೆಟ್ಟಿ!

Published : Oct 16, 2025, 01:13 PM ISTUpdated : Oct 16, 2025, 01:18 PM IST

Zee Kannada Awards Show: ಈ ಬಾರಿ ಜೀ ಕುಟುಂಬ ಅವಾರ್ಡ್ಸ್‌ ಶೋನಲ್ಲಿ ರಿಷಬ್‌ ಶೆಟ್ಟಿ, ರಮೇಶ್‌ ಅರವಿಂದ್‌ ಸೇರಿದಂತೆ ಸಿನಿಮಾ ಕಲಾವಿದರು ಭಾಗಿಯಾಗಿದ್ದಾರೆ. ಈಗಾಗಲೇ ಪ್ರೋಮೋಗಳು ಸಾಕಷ್ಟು ಕುತೂಹಲ ಮೂಡಿಸಿವೆ. 

PREV
15
6 ವಿಭಾಗಗಳಿವೆ

ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಜೋಡಿ, ಫೇವರಿಟ್ ಸೀರಿಯಲ್, ಫೇವರಿಟ್ ರಿಯಾಲಿಟಿ ಶೋ, ಫೇವರಿಟ್ ನಿರೂಪಕ, ನಿರೂಪಕಿ ಅನ್ನುವ ಪ್ರಮುಖ 6 ವಿಭಾಗಗಳಿವೆ. ಈ ಆರು ಪ್ರಮುಖ ವಿಭಾಗಗಳ ಜೊತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ ವಿಜೇತರ ಘೋಷಣೆಯೂ ಇರಲಿದೆ. ಇನ್ನು ಈ ಬಾರಿಯ ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾ ತಾರೆಯರು, ಕಿರುತೆರೆ ಕಲಾವಿದರು ಜೊತೆಯಾಗಿ ಸೇರಿ ಸಂಭ್ರಮಿಸಿದ್ದಾರೆ.

25
ನೆಚ್ಚಿನ ತಾರೆಯರು ಭಾಗಿ

ನೆಚ್ಚಿನ ತಾರೆಯರು ಅವರ ಅವಿಸ್ಮರಣೀಯ ಸುಂದರ, ಸುಖ-ದುಃಖ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಜೀ ಕನ್ನಡ ಅವಾರ್ಡ್ 2025 ರಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಮತ್ತು ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿದ್ದದ್ದು ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. 

ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ನವರಸ ನಾಯಕ ಜಗ್ಗೇಶ್, ಶ್ರೀನಾಥ್, ಸುಧಾರಾಣಿ, ಪ್ರೇಮ, ನಾಗಾಭರಣ, ಯೋಗರಾಜ್ ಭಟ, ಡಾಲಿ ಧನಂಜಯ್, ರಚಿತಾ ರಾಮ್, ವಿಜಯ ರಾಘವೇಂದ್ರ, ಅದಿತಿ ಪ್ರಭುದೇವ, ಪೃಥ್ವಿ ಅಂಬರ್, ಮಾನ್ವಿತಾ ಹರೀಶ್, ಅಮೂಲ್ಯ, ರಿಷಿ, ಡಾರ್ಲಿಂಗ್ ಕೃಷ್ಣ, ಪ್ರಜ್ವಲ್ ದೇವರಾಜ್, ಸಪ್ತಮಿ ಗೌಡ , ಪ್ರಮೋದ್ ಶೆಟ್ಟಿ, ವಿಕ್ರಂ ರವಿಚಂದ್ರನ್ ಮುಂತಾದ ಕಲಾವಿದರು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಅಷ್ಟೇ ಅಲ್ಲದೆ ಹಾಡಿನ ಮೂಲಕ ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಮಾಡಿರೋ ನಿರೂಪಣೆ ಎಲ್ಲರ ಗಮನ ಸೆಳೆಯಿತು.

35
ವೀಕೆಂಡ್ ವಿತ್ ರಮೇಶ್ ಮಿನಿಯೇಚರ್

ಜೀ ಕನ್ನಡ ಅವಾರ್ಡ್ ಶೋನಲ್ಲಿ ವಿಶೇಷವಾಗಿ “ವೀಕೆಂಡ್ ವಿತ್ ರಮೇಶ್ ಮಿನಿಯೇಚರ್” ಕೂಡ ಇರಲಿದ್ದು, ರಿಷಬ್ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಅವರ ಮಾತುಕತೆ ಈ ಕಾರ್ಯಕ್ರಮದ ಮತ್ತೊಂದು ಹೈಲೈಟ್ ಆಗಿತ್ತು.

45
ಯಾರಿಗೆ ಯಾವ ಪ್ರಶಸ್ತಿ?

ಯಾರು ಯಾವ ಪ್ರಶಸ್ತಿಗೆ ಭಾಜನರಾದರು, ಯಾರು ಯಾವ ಹಾಡಿಗೆ ನೃತ್ಯ ಮಾಡಿದರು, ಯಾರು ಯಾವ ಉಡುಗೆಯಲ್ಲಿ ಮಿಂಚಿದರು ಹೀಗೆ ಮತ್ತಷ್ಟು ಇಂಟೆರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳಲು, ನಗು, ತರಲೆ, ಅಳು, ನೋವು, ನಲಿವು,ಇನ್ನಷ್ಟು ಭಾವನೆಗಳ ಸಮ್ಮಿಲನವನ್ನು ಕಣ್ತುಂಬಿಕೊಳ್ಳಲು ನೋಡಿ 'ಜೀ ಕನ್ನಡ ಕುಟುಂಬ ಅವಾರ್ಡ್ಸ್-2025!

ಸಂಬಂಧಗಳನ್ನು ಸಂಭ್ರಮಿಸುವ ಅತೀದೊಡ್ಡ ಹಬ್ಬ 'ಜೀ ಕನ್ನಡ ಕುಟುಂಬ ಅವಾರ್ಡ್ಸ್-2025' ಕ್ಷಣಗಣನೆ ಶುರುವಾಗಿದೆ. ಇದೇ ತಿಂಗಳ 17, 18, 19 ರಂದು ಜೀ ಕನ್ನಡ ವಾಹಿನಿಯಲ್ಲಿ ಸಂಜೆ 6.30 ರಿಂದ ಪ್ರಸಾರ ಆಗಲಿದೆ. ಅಕುಲ್ ಬಾಲಾಜಿ, ಅನುಶ್ರೀ, ನಿರಂಜನ್‌ ದೇಶಪಾಂಡೆ ಈ ಶೋನ ನಿರೂಪಣೆ ಮಾಡಲಿದ್ದಾರೆ.

55
ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಏನಂದ್ರು?

ಜೀ ಕನ್ನಡ ಮತ್ತು ಕನ್ನಡ ಜೀ5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, "ಕನ್ನಡ ಟೆಲಿವಿಷನ್ ಕುಟುಂಬದ ಪ್ರತಿಭೆ, ಸೃಜನಶೀಲತೆ, ಅದ್ಭುತ ಆತ್ಮಸ್ಫೂರ್ತಿಯ ಆಚರಣೆಯೇ ಕುಟುಂಬ ಅವಾರ್ಡ್ಸ್. ಇನ್ನು ಜೀ ಕನ್ನಡ 20 ವರುಷ ಪೂರೈಸಿದ ಈ ಶುಭ ಸಂದರ್ಭದಲ್ಲಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆ ಕೊಡೋದು ನಮ್ಮ ಮುಖ್ಯ ಗುರಿ ಆಗಿತ್ತು. ಅದಕ್ಕೆ ಬದ್ಧವಾಗಿ ನಾವು ಈ ವರುಷ 'ನಾ ನಿನ್ನ ಬಿಡಲಾರೆ', 'ಕರ್ಣ' ಮತ್ತು 'ಶ್ರೀ ರಾಘವೇಂದ್ರ ಮಹಾತ್ಮೆ' ಎಂಬ ಧಾರಾವಾಹಿಗಳ ಜೊತೆಗೆ 'ನಾವು ನಮ್ಮವರು' ಎಂಬ ವಿಭಿನ್ನ ರಿಯಾಲಿಟಿ ಶೋವನ್ನು ಜನರ ಮುಂದಿಟ್ಟಿದ್ದೇವೆ. ವೀಕ್ಷಕರು ಈ ಎಲ್ಲ ಕಾರ್ಯಕ್ರಮಗಳನ್ನು ಮೆಚ್ಚಿದ್ದು ಖುಷಿ ಕೊಟ್ಟಿದೆ. ಟೆಲಿವಿಷನ್ ಜೊತೆಗೆ OTT ಪ್ಲಾಟ್‌ಫಾರ್ಮ್ ಕನ್ನಡ ZEE5 “ನಮ್ಮ ಭಾಷೆ, ನಮ್ಮ ಕಥೆಗಳು” ಮೂಲಕ ಕನ್ನಡದ ಕಥೆಗಳಿಗೆ ಜೀವ ತುಂಬುವ ಕೆಲಸವನ್ನು ಮುಂದುವರೆಸಿದೆ. ಮತ್ತೊಂದೆಡೆ ಮೈಕ್ರೋ-ಸರಣಿ ಅಪ್ಲಿಕೇಶನ್ ಬುಲೆಟ್ ಇಂದಿನ ಪೀಳಿಗೆಗಳಿಗೆ ಕಥೆ ಹೇಳುವ ಕಲೆಗೆ ಹೊಸ ಅರ್ಥ ನೀಡುತ್ತಿದೆ. ಇನ್ನು ನಮಗೆ ವೀಕ್ಷಕರು ನೀಡುವ ಸಪೋರ್ಟ್ ಮತ್ತು ಪ್ರೀತಿ ಅಭೂತಪೂರ್ಣ" ಎಂದರು.

Read more Photos on
click me!

Recommended Stories