ತಾಳಿ ಕಟ್ಟಲು ಒಪ್ಪದ ತೇಜಸ್; ಇತ್ತ ನಿತ್ಯಾ ಮಾತುಗಳನ್ನು ಕೇಳಿ ದಿಗಿಲುಬಿದ್ದ ಕರ್ಣ-ನಿಧಿ

Published : Jan 14, 2026, 09:26 AM IST

ಕರ್ಣ ಸೀರಿಯಲ್‌ನಲ್ಲಿ ನಿತ್ಯಾ-ತೇಜಸ್ ಮದುವೆ ನಿಂತುಹೋಗಿದೆ. ನಿತ್ಯಾಳ ಗರ್ಭದ ಬಗ್ಗೆ ಅನುಮಾನಗೊಂಡ ತೇಜಸ್ ಸತ್ಯ ತಿಳಿಯಲು ಮುಂದಾಗಿದ್ದಾನೆ. ಇದರಿಂದಾಗಿ, ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಕಾದಿದ್ದ ಕರ್ಣ ಮತ್ತು ನಿಧಿ ಪ್ಲಾನ್ ವಿಫಲವಾಗಿದ್ದು, ಕಥೆ ರೋಚಕ ತಿರುವು ಪಡೆದಿದೆ.

PREV
15
ನಿತ್ಯಾ-ತೇಜಸ್ ಮದುವೆ

ಕರ್ಣ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದ್ದು, ನಿತ್ಯಾಗೆ ತಾಳಿ ಕಟ್ಟದೇ ತೇಜಸ್ ಹಿಂದೆ ಸರಿದಿದ್ದಾನೆ. ನಿತ್ಯಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಯಾರದ್ದು ಎಂಬ ಸತ್ಯ ತಿಳಿಯಲು ತೇಜಸ್ ವೈದ್ಯರ ಮೊರೆ ಹೋಗಿದ್ದಾನೆ. ಇದರಿಂದಾಗಿ ನಿತ್ಯಾ-ತೇಜಸ್ ಮದುವೆ ನಿಂತಿದೆ.

25
ಮನೆಯಲ್ಲಿ ಗ್ರ್ಯಾಂಡ್ ಪಾರ್ಟಿ

ಇತ್ತ ಮನೆಯಲ್ಲಿ ಗ್ರ್ಯಾಂಡ್ ಆಗಿ ಪಾರ್ಟಿ ಆಯೋಜಿಸಿ ನಿತ್ಯಾ-ತೇಜಸ್ ಮದುವೆ ವಿಷಯ ಹೇಳಲು ಕರ್ಣ ಪ್ಲಾನ್ ಮಾಡಿಕೊಂಡಿದ್ದನು. ಆದ್ರೆ ಈ ಪಾರ್ಟಿಯಲ್ಲಿ ನಿತ್ಯಾ ತಾನು ಗರ್ಭಿಣಿ ಎಂಬ ವಿಷಯವನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದಾಳೆ. ಆದ್ರೆ ಮಗುವಿನ ತಂದೆ ಕರ್ಣ ಅಲ್ಲ ಎಂಬ ಸತ್ಯ ಹೇಳ್ತಾಳ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

35
ಕರ್ಣ-ನಿಧಿ ಶಾಕ್

ಮದುವೆ ನಿಂತಿದ್ದಕ್ಕೆ ನೊಂದ ನಿತ್ಯಾ ಜೀಪ್ ಹತ್ತಿ ಹೊರಡುವ ದೃಶ್ಯವನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಆದ್ರೆ ಮುಂದೇನಾಯ್ತು ಎಂಬುದನ್ನು ಪ್ರೋಮೋದಲ್ಲಿ ತೋರಿಸಿಲ್ಲ. ಅಲ್ಲಿಂದ ನೇರವಾಗಿ ಕರ್ಣ, ನಿತ್ಯಾ ಮತ್ತು ನಿಧಿ ಮೂವರು ಪಾರ್ಟಿಗೆ ಬರುತ್ತಾರೆ. ನಿತ್ಯಾ ಗರ್ಭಿಣಿ ಎಂಬ ಸತ್ಯ ತಿಳಿದು ಅಜ್ಜಿಯರಿಬ್ಬರು ಖುಷಿಯಾಗಿದ್ದಾರೆ. ಆದ್ರೆ ನಿತ್ಯಾ ಮಾತುಗಳನ್ನು ಕೇಳಿ ಕರ್ಣ-ನಿಧಿ ಶಾಕ್ ಆಗಿದ್ದಾರೆ.

45
ನಿಧಿ-ಕರ್ಣ ಪ್ಲಾನ್ ಫೇಲ್

ನಿತ್ಯಾ ಮತ್ತು ತೇಜಸ್ ಮದುವೆಯಾದ್ರೆ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ನಿಧಿ-ಕರ್ಣ ಪ್ಲಾನ್ ಮಾಡಿಕೊಂಡಿದ್ದರು. ಆದ್ರೆ ಇದೀಗ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ. ನಿತ್ಯಾ ಮತ್ತು ಮಗುವಿನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದ ಕರ್ಣ ತನ್ನ ಮಾತಿನಂತೆ ಮುಂದುವರಿಯುತ್ತಿದ್ದಾನೆ.

ಇದನ್ನೂ ಓದಿ: BBK 12: ಫಿನಾಲೆ ವಾರದಲ್ಲಿ ಗಿಲ್ಲಿಯ ಅಚ್ಚರಿ ನಡೆ; ಕಾವ್ಯಾಳನ್ನು ಬಿಟ್ಟುಕೊಟ್ಟು ಭಾವುಕನಾಗಿ ಮಾತಾಡಿದ ನಟ

55
ಇಬ್ಬರ ಪ್ರೀತಿ ಇಲ್ಲಿಗೆ ಅಂತ್ಯವಾಯ್ತಾ?

ಈ ಪ್ರೋಮೋ ನೋಡಿದ ಸೀರಿಯಲ್ ವೀಕ್ಷಕರು, ಕರ್ಣ-ನಿಧಿ ಲವ್ ಸೈಕಲ್‌ನಲ್ಲಿ ಸುತ್ತಾಡಿದ್ದು ಮತ್ತು ಐಸ್‌ ಕ್ರೀಂ ತಿನ್ನೋದಕ್ಕೆ ಮಾತ್ರ ಸೀಮಿತವಾಯ್ತಾ? ಇಬ್ಬರ ಪ್ರೀತಿ ಇಲ್ಲಿಗೆ ಅಂತ್ಯವಾಯ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಮದುವೆ ನಿಂತಿದ್ದಕ್ಕೆ ಕರ್ಣನ ತಂದೆ ಅತ್ತೆ, ಅಪ್ಪ ಮತ್ತು ಸೋದರ ಖುಷಿಯಾಗಿದ್ದಾರೆ.

ಇದನ್ನೂ ಓದಿ: BBK 12: 'ವಿನ್ನರ್' ಎಂದ ಸ್ಪರ್ಧಿಗೆ ಮಧ್ಯರಾತ್ರಿಯ ಮಿಡ್‌ವೀಕ್ ಎಲಿಮಿನೇಷನ್ ಶಾಕ್!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories