BBK 12: 'ವಿನ್ನರ್' ಎಂದ ಸ್ಪರ್ಧಿಗೆ ಮಧ್ಯರಾತ್ರಿಯ ಮಿಡ್‌ವೀಕ್ ಎಲಿಮಿನೇಷನ್ ಶಾಕ್!

Published : Jan 14, 2026, 08:49 AM IST

ಬಿಗ್‌ಬಾಸ್ ಸೀಸನ್ 12ರ ಫಿನಾಲೆ ವಾರದ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಪ್ರಬಲ ಸ್ಪರ್ಧಿ ಧ್ರುವಂತ್ ಮನೆಯಿಂದ ಹೊರಬಂದಿದ್ದಾರೆ. ತಾನೇ ವಿನ್ನರ್ ಎಂದು ಅಬ್ಬರಿಸಿದ್ದ ಧ್ರುವಂತ್, ಮಧ್ಯರಾತ್ರಿ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅನಿರೀಕ್ಷಿತವಾಗಿ ನಿರ್ಗಮಿಸಿದ್ದಾರೆ.

PREV
15
ಅಬ್ಬರದಿಂದ ಮಾತನಾಡಿದ್ದ ಸ್ಪರ್ಧಿ

ಬಿಗ್‌ಬಾಸ್ ಸೀಸನ್ 12ರ ಕೊನೆ ವಾರದ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಪ್ರಬಲ ಸ್ಪರ್ಧಿಯೇ ಮನೆಯಿಂದ ಹೊರ ಬಂದಿದ್ದಾರೆ. ಮಂಗಳವಾರದ ಸಂಚಿಕೆಯಲ್ಲಿ ಅಭಿಮಾನಿಗಳ ಮುಂದೆ ಅಬ್ಬರದಿಂದ ಮಾತನಾಡಿ, ನಾನೇ ವಿನ್ನರ್ ಎಂಬ ಸಂದೇಶವನ್ನು ರವಾನಿಸಿದ್ದರು.

25
ಮಧ್ಯರಾತ್ರಿ ಎಲಿಮಿನೇಷನ್ ಪ್ರಕ್ರಿಯೆ

ಮಾಹಿತಿಗಳ ಪ್ರಕಾರ, ಧ್ರುವಂತ್‌ ಮನೆಯಿಂದ ಹೊರ ಬಂದಿದ್ದಾರೆ. ಧನುಷ್ ಟಾಪ್ 6ಗೆ ಆಯ್ಕೆಯಾಗಿದ್ದರಿಂದ ಇನ್ನುಳಿದ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಮಂಗಳವಾರ ಸಂಜೆ 6 ಗಂಟೆವರೆಗೆ ಮಾತ್ರ ವೋಟಿಂಗ್ ಲೈನ್ ತೆರೆಯಲಾಗಿತ್ತು. ವೋಟಿಂಗ್ ಲೈನ್ ಕ್ಲೋಸ್ ಆಗ್ತಿದ್ದಂತೆ ಮಧ್ಯರಾತ್ರಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.

35
ಈ ಆಸೆ ನೆರೆವೇರಿದೆಯಾ?

ಇದು ಫಿನಾಲೆ ವಾರ ಆಗಿರೋದರಿಂದ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ್‌ಗಳನ್ನು ನೀಡುತ್ತಿಲ್ಲ. ಬದಲಾಗಿ ಸ್ಪರ್ಧಿಗಳ ಆಸೆಯನ್ನು ಬಿಗ್‌ಬಾಸ್ ನೆರೆವೇರಿಸುತ್ತಿದ್ದಾರೆ. ಅದೇ ರೀತಿ ಧ್ರುವಂತ್ ಸಹ ತಮಗೊಂದು ಒಳ್ಳೆಯ ಮೇಕ್‌ಓವರ್ ಬೇಕೆಂದು ಬಯಸಿದ್ದರು. ಮನೆಯಿಂದ ಹೊರ ಹೋಗುವ ಮುನ್ನ ಈ ಆಸೆ ನೆರೆವೇರಿದೆಯಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

45
ಭಾವುಕರಾಗಿ ಕಣ್ಣೀರು ಹಾಕಿದ್ದ ಧ್ರುವಂತ್

ಅಭಿಮಾನಿಗಳೊಂದಿಗೆ ಮಾತನಾಡಿದ್ದ ಧ್ರುವಂತ್, ತಾನು ಒನ್ ಮ್ಯಾನ್ ಆರ್ಮಿ. 22 ಜನರಿಂದ ಈಗ 6ಕ್ಕೆ ತಂದು ನಿಲ್ಲಿಸಿದ್ದೇನೆ. ಅವಕಾಶಗಳನ್ನು ಕಿತ್ತುಕೊಂಡು ಆಟವಾಡಿ ನಾನು ಏನು ಎಂಬುದನ್ನು ತೋರಿಸಿದ್ದೇನೆ ಎಂದು ಹೇಳಿದ್ದರು. ನಂತರ ಮನೆಯೊಳಗೆ ಬಂದು ಅಭಿಮಾನಿಗಳ ಪ್ರೀತಿ ಕಂಡು ಭಾವುಕರಾಗಿ ಕಣ್ಣೀರು ಹಾಕಿದ್ದರು. ಧ್ರುವಂತ್ ಸೀಸನ್ 12ರ ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದರು.

ಇದನ್ನೂ ಓದಿ: BBK 12: ಫಿನಾಲೆ ವಾರದಲ್ಲಿ ಗಿಲ್ಲಿಯ ಅಚ್ಚರಿ ನಡೆ; ಕಾವ್ಯಾಳನ್ನು ಬಿಟ್ಟುಕೊಟ್ಟು ಭಾವುಕನಾಗಿ ಮಾತಾಡಿದ ನಟ

55
ಭಾನುವಾರ ಫಿನಾಲೆ

ಧ್ರುವಂತ್ ಹೊರ ಬಂದ ಬಳಿಕ ಇನ್ನುಳಿದ ಸ್ಪರ್ಧಿಗಳು ಟಾಪ್‌ 6ಗೆ ತಲುಪಲಿದ್ದಾರೆ. ಶನಿವಾರ ಸಂಚಿಕೆಯಲ್ಲಿ ಒಬ್ಬರು ಅಥವಾ ಇಬ್ಬರು ಮನೆಯಿಂದ ಹೊರಬರುವ ಸಾಧ್ಯತೆಗಳಿವೆ. ಇನ್ನುಳಿದ ಸ್ಪರ್ಧಿಗಳು ಫಿನಾಲೆ ದಿನವೇ ಸುದೀಪ್ ಜೊತೆ ಬಿಗ್‌ಬಾಸ್ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಮಾಲೆ ಹಾಕೊಂಡು ಶಬರಿಮಲೆ ಭಕ್ತಾದಿಗಳನ್ನು ಅವಮಾನಿಸಿದ್ರಾ ಬಿಗ್‌ಬಾಸ್ ಮಾಜಿ ಸ್ಪರ್ಧಿ ಧನರಾಜ್ ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories